ETV Bharat / state

ನಿಗಮ ಮಂಡಳಿ ಪಟ್ಟಿ ಹೈಕಮಾಂಡ್​ಗೆ ಕಳುಹಿಸಿದ್ದೇವೆ : ಸಿಎಂ ಸಿದ್ದರಾಮಯ್ಯ

ಮೊದಲು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Nov 28, 2023, 10:09 PM IST

ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮೊದಲು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡುತ್ತೇವೆ. ನಂತರದ ಪಟ್ಟಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ನಿಗಮ ಮಂಡಳಿ ನೇಮಕಾತಿ ಸಂಬಂಧ ಖಾಸಗಿ ಹೋಟೆಲ್ ಬಳಿ ರಣದೀಪ್ ಸಿಂಗ್ ಸುರ್ಜೇವಾಲರ ಜೊತೆ ಸಭೆ ನಡೆಸಿ ತೆರಳುವ ವೇಳೆ ಮಾತನಾಡಿದ ಅವರು, ನಿಗಮ ಮಂಡಳಿ ನೇಮಕದ ಪಟ್ಟಿಯನ್ನು ಹೈಕಮಾಂಡ್​ಗೆ ಕಳುಹಿಸಿದ್ದೇವೆ.‌ ಹೈಕಮಾಂಡ್ ಒಪ್ಪಿಗೆ ಕೊಡಬೇಕು ಎಂದರು.

ಮೊದಲು ಶಾಸಕರಿಗೆ ನಿಗಮ ಮಂಡಳಿ‌ ನೇಮಕಾತಿಯಲ್ಲಿ ಅವಕಾಶ ನೀಡುತ್ತೇವೆ. ಎರಡು, ಮೂರನೇ ಹಂತದಲ್ಲಿ ಕಾರ್ಯಕರ್ತರಿಗೆ ನೀಡುತ್ತೇವೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು. ಬಿ. ಆರ್ ಪಾಟೀಲ್ ಪತ್ರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ಇನ್ನೂ ಪತ್ರ ನೋಡಿಲ್ಲ. ನನಗೆ ಪತ್ರ ಇನ್ನೂ ತಲುಪಿಲ್ಲ. ಅವರು ಏನು ಬರೆದಿದ್ದಾರೆ ಅಂತ ನೋಡ್ತೇನೆ ಎಂದು ತಿಳಿಸಿದರು.

ಮೂರು ನಾಲ್ಕು ಹಂತಗಳಲ್ಲಿ ಪಟ್ಟಿ ಬಿಡುಗಡೆ: ನಿಗಮ ಮಂಡಳಿಗಳ ನೇಮಕಾತಿಯನ್ನು ಮೂರು ನಾಲ್ಕು ಹಂತಗಳಲ್ಲಿ ಮಾಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದರು. ನಿಗಮ‌ ಮಂಡಳಿ ನೇಮಕಾತಿ, ಸಮಿತಿಗಳ ರಚನೆ, ಗ್ಯಾರಂಟಿಗಳ ಅನುಷ್ಠಾನದ ವಿಚಾರವನ್ನು ಒಂದೊಂದಾಗಿ ಬಗೆಹರಿಸಲಿದ್ದೇವೆ ಎಂದು ತಿಳಿಸಿದರು.

ತೆಲಂಗಾಣದಲ್ಲಿ ನಾವು ಗೆಲ್ಲುತ್ತೇವೆ. ಡಿಸೆಂಬರ್ 3 ರಂದು ತೆಲಂಗಾಣದಲ್ಲಿ ನಾವು ಅಧಿಕಾರಕ್ಕೆ ಬರ್ತೇವೆ. ಕೆಸಿಆರ್ ಲೂಟಿ ಮಾಡಿದ್ದೇ ಆಗಿದೆ. ಭ್ರಷ್ಟಾಚಾರದ ಸರ್ಕಾರವನ್ನು ಜನ ಕಿತ್ತು ಹಾಕಲಿದ್ದಾರೆ. ಡಿಸೆಂಬರ್ 3 ರಂದು ಜ‌ನ ಕಿತ್ತು ಹಾಕ್ತಾರೆ. ಕಾಂಗ್ರೆಸ್ ಸರ್ಕಾರ ಅಲ್ಲಿ ಅಧಿಕಾರಕ್ಕೆ ಬರಲಿದೆ. ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್​ಗಢದಲ್ಲೂ ಬರ್ತೇವೆ. ನಾವೇ ಅಲ್ಲಿಯೂ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ನಮ್ಮ ಟಾರ್ಗೆಟ್ ಲೋಕಸಭಾ ಚುನಾವಣೆ ಆಗಿದೆ. ಇಂಡಿಯಾ ಅಲೆಯನ್ಸ್ ಅಡಿ ಚುನಾವಣೆ ಎದುರಿಸ್ತೇವೆ. ನಿರುದ್ಯೋಗ, ಬಡತನ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ಗ್ಯಾರಂಟಿಗಳ ಮೂಲಕ ಚುನಾವಣೆ ಎದುರಿಸುತ್ತೇವೆ. ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು.

ನನ್ನ ಅಭಿಪ್ರಾಯ ಕೇಳಿಲ್ಲ : ನಿಗಮ‌ ಮಂಡಳಿ ನೇಮಕಾತಿ ವಿಚಾರವಾಗಿ ನನ್ನ ಅಭಿಪ್ರಾಯ ಕೇಳಿಲ್ಲ. ಕೇಳಿದರೆ ಒಳ್ಳೆಯದಾಗಿತ್ತು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದ್ದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಳೆದ ವಾರ ಸಭೆ ಮಾಡಿದ್ದಾರೆ. ನಮ್ಮ ಜನರಲ್ ಸೆಕ್ರೆಟರಿ ಸಿಎಂ, ಅಧ್ಯಕ್ಷರ ಜೊತೆ ಮಾತಾಡಿದ್ದಾರೆ. ಅಂತಿಮಗೊಳಿಸಬಹುದು, ನನಗೆ ಗೊತ್ತಿಲ್ಲ ಎಂದಿದ್ದರು.

ಇದನ್ನೂ ಓದಿ : ನಿಗಮ ಮಂಡಳಿ ನೇಮಕ ಸಂಬಂಧ ನನ್ನ ಅಭಿಪ್ರಾಯ ಕೇಳಿಲ್ಲ: ಸಚಿವ ಡಾ ಜಿ ಪರಮೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.