ETV Bharat / state

ಪ್ರಕೃತಿ ಜತೆಗೆ ನಾವು ಬೆಳೆಯಬೇಕು, ಬಾಳಬೇಕು: ಸಿಎಂ ಸಿದ್ದರಾಮಯ್ಯ - ವಿಶ್ವ ಪರಿಸರ ದಿನಾಚರಣೆ 2023

ಜ್ಞಾನಜ್ಯೋತಿ ಸಭಾಂಗಣದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಅರಣ್ಯ ಮತ್ತು ಪರಸರ ಸಚಿವ ಈಶ್ವರ್ ಖಂಡ್ರೆ, ಸಚಿವರಾದ ದಿನೇಶ್ ಗುಂಡೂರಾವ್, ಕೆ.ಜೆ ಜಾರ್ಜ್ ಹಾಗೂ ಶಾಸಕ ಎ.ಸಿ ಶ್ರೀನಿವಾಸ್ ಪಾಲ್ಗೊಂಡಿದ್ದರು.

CM Siddaramaiah inaugurated the World Environment Day 2023
ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿದ ಸಿಎಂ
author img

By

Published : Jun 5, 2023, 1:09 PM IST

ಬೆಂಗಳೂರು: 'ಮನುಷ್ಯ ಪ್ರಕೃತಿಕ ಅವಿಭಾಜ್ಯ ಅಂಗ. ಪ್ರಕೃತಿ ನಾಶ ನಮ್ಮ ನಾಶ. ಹೀಗಾಗಿ ಪ್ರಕೃತಿಯ ಜತೆಗೆ ನಾವು ಬೆಳೆಯಬೇಕು, ಬಾಳಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಜ್ಞಾನಜ್ಯೋತಿ ಸಭಾಂಗಣದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ 2023 ಉದ್ಘಾಟಿಸಿದ ಬಳಿಕ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

CM Siddaramaiah inaugurated the World Environment Day 2023
ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿದ ಸಿಎಂ

ಸಂಕಷ್ಟದಲ್ಲಿರುವ ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ನೆರವಿಗಾಗಿ ನಾವು ಉಚಿತ ವಿದ್ಯುತ್ ನೀಡಲು ಮುಂದಾಗಿದ್ದೇವೆ. ಒಂದು ವರ್ಷದ ಸರಾಸರಿ ಬಳಕೆಗಿಂತ ಶೇ 10ರಷ್ಟು ಹೆಚ್ಚು ಉಚಿತ ವಿದ್ಯುತ್ ಬಳಕೆಗೆ ನಾವು ಅವಕಾಶ ನೀಡಿದ್ದೇವೆ. ಇದನ್ನು ನಾಡಿನ ಜನತೆ ಸಂಭ್ರಮದಿಂದ ಒಪ್ಪಿಕೊಂಡಿದ್ದಾರೆ ಮತ್ತು ಸ್ವೀಕರಿಸಿದ್ದಾರೆ. ಆದರೆ, ಜನರಿಂದ ತಿರಸ್ಕೃತಗೊಂಡಿರುವ ಬಿಜೆಪಿ, ವಿದ್ಯುತ್ ಅನ್ನು ಅನಗತ್ಯ ದುರ್ಬಳಕೆ - ದುಂದುವೆಚ್ಚ-ದುರುಪಯೋಗ ಮಾಡಲು ಕುಮ್ಮಕ್ಕು ಕೊಡುತ್ತಿದೆ. ಇದು ಅತ್ಯಂತ ಜನ ವಿರೋಧಿಯಾದದ್ದು. ನಾಡಿನ ಪ್ರಜ್ಞಾವಂತ ಜನತೆ ಇದಕ್ಕೆ ಸೊಪ್ಪು ಹಾಕುವುದಿಲ್ಲ ಎನ್ನುವ ಭರವಸೆ ನಮಗಿದೆ ಎಂದರು.

World Environment Day 2023
ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪರಿಸರ ಉಳಿಸುವುದು, ಕಾಡು ಬೆಳೆಸುವುದು ಮತ್ತು ಉಳಿಸುವುದು ಕೇವಲ ಅರಣ್ಯ ಇಲಾಖೆ ಕರ್ತವ್ಯ ಅಲ್ಲ. ಪ್ರತಿಯೊಬ್ಬರ ಜವಾಬ್ದಾರಿ. ಪ್ರಕೃತಿಯ ಪ್ರಯೋಜನವನ್ನು ಪಡೆಯುತ್ತಿರುವ ಪ್ರತಿಯೊಬ್ಬರ ಮೇಲೂ ಪ್ರಕೃತಿ ಉಳಿಸುವ ಜವಾಬ್ದಾರಿ ಇದೆ. ಜನಜಾಗೃತಿ ಹಾಗೂ ವಿಶ್ವದಲ್ಲಿ ಪರಿಸರದ ಸಮತೋಲನ ಕಾಪಾಡಲು ಜೂ.5ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಜನಜಾಗೃತಿ ಮುಖ್ಯ ಉದ್ದೇಶ. ಪರಿಸರ ಚೆನ್ನಾಗಿದ್ದರೆ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ನಮ್ಮ ಪರಿಷರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಾರ್ಯ ಮಾಡಬೇಕು. ಎಷ್ಟೇ ಕಾನೂನು ಮಾಡಿದರೂ, ನಿಯಮ ಜಾರಿಗೆ ತಂದರೂ ಸಹ ಜನರಲ್ಲಿ ಜಾಗೃತಿ ಬರದಿದ್ದರೆ ಉದ್ದೇಶ ಸಫಲವಾಗುವುದಿಲ್ಲ ಎಂದರು.

ಪ್ರಕೃತಿ, ಭೂಮಿ ಬಗ್ಗೆ ಪ್ರೀತಿ ಬೆಳೆಸಿಕೊಂಡವರು ಹಲವರು ಇದ್ದಾರೆ. ನಾವು ಪ್ರಕೃತಿ, ಭೂತಾಯಿಯನ್ನು ಪ್ರೀತಿಸಬೇಕು. ಅದನ್ನು ಕರ್ತವ್ಯ ಎಂದು ಭಾವಿಸಬೇಕು. ಜೀವ ತುಂಬಿದ್ದೇ ಪ್ರಕೃತಿ ಹಾಗೂ ಭೂಮಿ. ಇದನ್ನು ಅವಲಂಬಿಸಿ ನಾವು ಬದುಕುತ್ತಿದ್ದು, ಇದು ಸಹ ಆರೋಗ್ಯಕರವಾಗಿ ಇರಬೇಕಲ್ಲವಾ?. ಹಾಗೆ ಇದ್ದಾಗ ಮಾತ್ರ ನಮ್ಮ ಬದುಕು ಹಸನಾಗಿರಲು, ಆರೋಗ್ಯವಾಗಿರಲು ಸಾಧ್ಯ. ಪ್ರಕೃತಿಯಿಂದ ನಾವು ಪಡೆದಿದ್ದಕ್ಕೆ ಒಂದಿಷ್ಟು ಹಿಂದಿರುಗಿಸುವ ಜವಾಬ್ದಾರಿ ಜನರಿಗೆ ಇರಬೇಕು. ಇದು ಆಗದ್ದರಿಂದಲೇ ಪ್ರಕೃತಿ ವಿಕೋಪ ಕಾಣುತ್ತೇವೆ ಎಂದರು.

’’ಪೂರ್ವಿಕರು ಪ್ರಕೃತಿ, ಪರಿಸರ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದರು. ಒಂದು ಮರ ಕಡಿದರೆ, ಎರಡಕ್ಕಿಂತ ಹೆಚ್ಚು ಗಿಡ ನೆಡುತ್ತಾರೆ. ಇಂದು ಮರ ಕಡಿಯುತ್ತೇವೆ, ಆದರೆ ಗಿಡ ನೆಡಲ್ಲ. ಕಾಡು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಕಾಡು ಚೆನ್ನಾಗಿದ್ದರೆ ಮಳೆ, ಬೆಳೆ ಚೆನ್ನಾಗಿರುತ್ತದೆ. ಪ್ರಕೃತಿ, ಮನುಷ್ಯನ ನಡುವೆ ಅವಿನಾಭಾವ ಸಂಬಂಧ ಇರುತ್ತದೆ. ಪ್ರಕೃತಿ ಜತೆಯಲ್ಲೇ ಬದುಕು ಕಟ್ಟಿಕೊಳ್ಳಬೇಕು. ಇಲ್ಲಾಗುವ ಅನಾಹುತ ತಪ್ಪಿಸುವ ಕಾರ್ಯ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ನಾನು ಹಿಂದೆ ಸಿಎಂ ಇದ್ದಾಗ ಪ್ಲಾಸ್ಟಿಕ್ ನಿಷೇಧಿಸಿದ್ದೆ. ಯದ್ವಾತದ್ವಾ ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕಾರಕ. ಮಳೆಕೊಯ್ಲು ಇಂದು ಎಷ್ಟು ಮಂದಿ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಬೇಕು. ಅತಿಯಾಗಿ ಯಾವುದನ್ನೂ ಬಳಸಬಾರದು, ದುಂದುವೆಚ್ಚ ಮಾಡಬಾರದು ಎನ್ನುತ್ತೇವೆ. ಆದರೆ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವಾ ಅನ್ನುವುದನ್ನು ಗಮನಿಸಬೇಕು‘‘ ಎಂದು ಸಿಎಂ ಹೇಳಿದರು.

ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಡಿಸಿಎಂ ಡಿ.ಕೆ ಶಿವಕುಮಾರ್, ಅರಣ್ಯ ಮತ್ತು ಪರಸರ ಸಚಿವ ಈಶ್ವರ್ ಖಂಡ್ರೆ, ಸಚಿವರಾದ ದಿನೇಶ್ ಗುಂಡೂರಾವ್, ಕೆ.ಜೆ ಜಾರ್ಜ್ ಹಾಗೂ ಶಾಸಕ ಎ.ಸಿ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ: 2 ಲಕ್ಷಕ್ಕೂ ಅಧಿಕ ಗಿಡ ನೆಟ್ಟು ವೃಕ್ಷ ಕ್ರಾಂತಿ: ಇದು ಪರಿಸರವಾದಿ ಶಿವಾಜಿ ಕಾಗಣಿಕರ್ ಅವರ ಯಶಸ್ಸಿನ ಕಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.