ETV Bharat / state

ಕೈಮಗ್ಗ-ಖಾದಿ ಉತ್ಪನ್ನಗಳ ಹೆಸರಲ್ಲಿ ಕಲಬೆರೆಕೆ: ಸೂಕ್ತ ಕ್ರಮಕ್ಕಾಗಿ ಸಿಎಂಗೆ ಮನವಿ

ಖಾದಿ, ಕೈಮಗ್ಗ ಉತ್ಪನ್ನಗಳ ಹೆಸರಿನಲ್ಲಿ ಪವರ್​ ಲೂಮ್​ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ನೇಕಾರರಿಗೆ ಮತ್ತು ಗ್ರಾಮೋದ್ಯೋಗದ ಮೇಲೆ ಪರಿಣಾಮ ಬೀರಲಿದೆ. ಅದಕ್ಕಾಗಿ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರಂಗಕರ್ಮಿ ಪ್ರಸನ್ನ ಅವರು ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದರು.

cm-pure-khadi-campaign
ರಂಗಕರ್ಮಿ ಪ್ರಸನ್ನ
author img

By

Published : Oct 2, 2021, 4:10 PM IST

ಬೆಂಗಳೂರು: ಕೈಮಗ್ಗ ಮತ್ತು ಖಾದಿ ಉತ್ಪನ್ನಗಳ ಹೆಸರಿಲ್ಲಿ ಪವರ್ ಲೂಮ್ ಬಟ್ಟೆಗಳ ಕಲಬೆರೆಕೆ ನಡೆಯುತ್ತಿದೆ. ಇದನ್ನು ತಡೆಯಬೇಕು. ಇದಕ್ಕಾಗಿಯೇ ಅಭಿವೃದ್ಧಿಯಾದ ತಂತ್ರಜ್ಞಾನವನ್ನು ಸರ್ಕಾರ ಬಳಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸೇವಾ ಸಂಘದಿಂದ ಗಾಂಧಿ ಭವನದಲ್ಲಿ ರಂಗಕರ್ಮಿ ಪ್ರಸನ್ನ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕೈಮಗ್ಗ-ಖಾದಿ ಉತ್ಪನ್ನಗಳ ಹೆಸರಲ್ಲಿ ಕಲಬೆರೆಕೆ ಕುರಿತು ರಂಗಕರ್ಮಿ ಪ್ರಸನ್ನ ಹೇಳಿಕೆ

ಈ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನೇಕಾರರಿಗೆ ಖಾದಿ ಮತ್ತು ಗ್ರಾಮೋದ್ಯೋಗ ಪುನಶ್ಚೇತನ ಮಾಡಬೇಕಿದೆ. ಕರ್ನಾಟಕದಲ್ಲಿ ಈ ಹಿಂದೆ ಬಹಳ ದೊಡ್ಡ ಚಳವಳಿಯೇ ಆದ ಖಾದಿ-ಗ್ರಾಮೋದ್ಯೋಗ ಹಲವಾರು ವಿಧದಲ್ಲಿ ಬೆಳೆದಿದ್ದರೂ ಕೂಡಾ ಹಲವು ಸುಧಾರಣೆಗಳನ್ನು ಕಾಣಬೇಕಿದೆ. ಮುಂದಿನ ಕೆಲವೇ ದಿನಗಳಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆ ಒದಗಿಸಲು ಯೋಜನೆ ಕೈಗೊಳ್ಳಬೇಕಿದೆ. ಹಳ್ಳಿಗಳಲ್ಲಿ ಕೇವಲ ಕೃಷಿ ಆಧಾರಿತ ಆರ್ಥಿಕ ಸ್ಥಿತಿ ಇದೆ. ಇದರ ಜೊತೆಗೆ ಗುಡಿಕೈಗಾರಿಕೆ, ಖಾದಿ ಗ್ರಾಮೋದ್ಯೋಗದ ಉದ್ಯೋಗಗಳನ್ನು ಹೆಚ್ಚಿಸುವುದು ಅಗತ್ಯ ಇದೆ. ಸರ್ಕಾರದ ನೀತಿಗಳು ಇದಕ್ಕೆ ಅಗತ್ಯ ಇದೆ, ಸರ್ಕಾರ ಇದನ್ನು ಮಾಡಲೇಬೇಕಿದೆ. ಇದರ ಪುನಶ್ಚೇತನಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ಗಾಂಧೀಜಿಯವರು ಖಾದಿ ಎಂದು ರೂಪಿಸಿದ ಕೆಲವೇ ದಿನಗಳಲ್ಲಿ ಕಲಬೆರೆಕೆ ಶುರುವಾಗಿದೆ. ಇಂದಿಗೆ ಸಿಗುತ್ತಿರುವ 70% ಎಲ್ಲವೂ ಕಲಬೆರೆಕೆ ಖಾದಿ ಬಟ್ಟೆಗಳಾಗಿವೆ. ಪವರ್ ಲೂಮ್ ಬಟ್ಟೆ ಮತ್ತು ಖಾದಿ-ಕೈಮಗ್ಗದ ಬಟ್ಟೆ ಬೇರೆ ಬೇರೆ ಆಗಲಿ, ಇದರಿಂದ ಇಬ್ಬರೂ ಉಳಿಯುತ್ತಾರೆ. ಈ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಪ್ಯೂರ್ ಖಾದಿ ಅಭಿಯಾನ ಮಾಡೋಣ ಎಂದು ಭರವಸೆ ನೀಡಿದರು.

ಕೋಶ ಸಂಸ್ಥೆಯ ವಿಜಯ ಕೃಷ್ಣಪ್ಪ ಮಾತನಾಡಿ, ಕೈಮಗ್ಗ ಕೈಯಿಂದ ಕೆಲಸ ಮಾಡ್ತೀವಿ, ಪವರ್ ಲೂಮ್ ಮಷಿನ್ ಮೂಲಕ ಕೆಲಸ ಮಾಡುತ್ತದೆ. ಕೋಶ ಸಂಸ್ಥೆಯಿಂದ ಐಒಟಿ ಡಿವೈಸ್ ಕಂಡುಹಿಡಿದಿದ್ದೇವೆ. ಇದರೊಳಗೆ ಸೆನ್ಸಾರ್ ಇರಲಿದೆ. ಬಟ್ಟೆ ಮೇಲೆ ಆ ಯಂತ್ರ ಇಟ್ಟರೆ ಅದು ಹ್ಯಾಂಡ್ ಲೂಮಾ, ಅಥವಾ ಪವರ್ ಲೂಮಾ ಅನ್ನೋದು ಗೊತ್ತಾಗುತ್ತದೆ. ಕೋಶ ಸಂಸ್ಥೆ ಕೈಮಗ್ಗ ಹಾಗೂ ಕರಕುಶಲ ವಸ್ತುಗಳನ್ನು ಗ್ಯಾರಂಟಿ ಕೊಡಲು ಕಳೆದ ಮೂರು ವರ್ಷದಿಂದ ವಿವಿಧ ತಂತ್ರಜ್ಞಾನಗಳನ್ನು ಕಂಡುಹಿಡಿದಿದ್ದೇವೆ. ಇದನ್ನು ಈಗಾಗಲೇ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಕೊಡಲಾಗಿದೆ. ವಿಜಯ್, ರಾಮ್ಕಿ ಕೋಡಿಪಾಡಿ, ವಿಶಾಲ್ ಚೌದರಿ ಅವರ ತಂಡ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.