ETV Bharat / state

ಆಪ್ತ ಸಚಿವರ ಜೊತೆ ಸಿಎಂ ಬಿಎಸ್​ವೈ ಸಭೆ: ಕುತೂಹಲ ಮೂಡಿಸಿದ‌ ಕತ್ತಿ!

ನಾಳೆ ಸಂಸದರ ಸಭೆ ಕರೆದಿರುವ ಹಿನ್ನೆಲೆ ಪೂರ್ವಭಾವಿಯಾಗಿ ಆಪ್ತ ಸಚಿವರ ಜೊತೆ ಸಿಎಂ ಸಮಾಲೋಚನೆ ನಡೆಸುತ್ತಿದ್ದಾರೆ. ಜೊತೆಗೆ ರಾಜ್ಯದ ಸಚಿವರ ಕಾರ್ಯವೈಖರಿ ಕುರಿತ ಸಾಧನಾ ವರದಿ ಹೈಕಮಾಂಡ್​​ಗೆ ರವಾನೆಯಾಗಿದ್ದು, ಅದರ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

CM  BSY
ಸಿಎಂ ಬಿಎಸ್​ವೈ
author img

By

Published : Nov 26, 2020, 8:04 PM IST

ಬೆಂಗಳೂರು: ಸಚಿವರ ಪ್ರೋಗ್ರೆಸ್ ರಿಪೋರ್ಟ್ ಹೈಕಮಾಂಡ್​​ಗೆ ರವಾನೆಯಾದ ಬೆನ್ನಲ್ಲೇ ಆಪ್ತ ಸಚಿವರ ಜೊತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ಸಭೆ ನಡೆಸಿದ್ದಾರೆ.

ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪ ಸಭೆ ನಡೆಸುತ್ತಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.‌ಸೋಮಣ್ಣ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಭಾಗಿಯಾಗಿದ್ದಾರೆ. ಇವರ ಜೊತೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಶಾಸಕ ಉಮೇಶ್ ಕತ್ತಿ ಭಾಗಿಯಾಗಿರುವುದು ಕುತೂಹಲ ಮೂಡಿಸಿದೆ.

ನಾಳೆ ಸಂಸದರ ಸಭೆ ಕರೆದಿರುವ ಹಿನ್ನೆಲೆ ಪೂರ್ವಭಾವಿಯಾಗಿ ಆಪ್ತ ಸಚಿವರ ಜೊತೆ ಸಿಎಂ ಸಮಾಲೋಚನೆ ನಡೆಸುತ್ತಿದ್ದಾರೆ. ಜೊತೆಗೆ ರಾಜ್ಯದ ಸಚಿವರ ಕಾರ್ಯವೈಖರಿ ಕುರಿತ ಸಾಧನಾ ವರದಿ ಹೈಕಮಾಂಡ್​​ಗೆ ರವಾನೆಯಾಗಿದ್ದು, ಅದರ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಕೋವಿಡ್ ನಂತರ ಸಚಿವರ ಸಾಧನೆ ಬಗ್ಗೆ ವರದಿ ಪಡೆದಿರುವ ಹೈಕಮಾಂಡ್, ಸಂಪುಟ ಪುನರ್ ​​ರಚನೆ ಮಾಡುವ ವೇಳೆ ಯಾರನ್ನು ಕೈಬಿಡಬೇಕು ಎಂದು ಸಾಧನಾ ವರದಿಯಾಧಾರಿತವಾಗಿ ನಿರ್ಧರಿಸುತ್ತದೆ ಎನ್ನಲಾಗಿದೆ. ಕೆಲ ಸಚಿವರ ವರದಿ ನಿರೀಕ್ಷಿತ ಮಟ್ಟ ತಲುಪಿಲ್ಲ. ಹಾಗಾಗಿ ಆಪ್ತ ಸಚಿವರ ಜೊತೆ ಸಿಎಂ ಸಭೆ ನಡೆಸಿ ಈ ಎಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಏಷ್ಯಾದಲ್ಲೇ ಭಾರತದಲ್ಲಿ ಅತಿ ಹೆಚ್ಚು ಲಂಚ... ಕಾಸಿಲ್ಲದವರು ಭ್ರಷ್ಟರ ಲೈಂಗಿಕ ತೃಷೆಗೆ ಬಲಿ!!

ಕುತೂಹಲ ಮೂಡಿಸಿದ ಕತ್ತಿ: ಇನ್ನು ಸಚಿವರ ಸಭೆಯಲ್ಲಿ ಶಾಸಕ ಉಮೇಶ್ ಕತ್ತಿ ಹಾಜರಾಗಿ ಗಮನ ಸೆಳೆದಿದ್ದಾರೆ. ಸಿಎಂ ಸೂಚನೆಯಂತೆ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದಾರೆ ಎನ್ನುವ ಕಾರಣಕ್ಕೆ ಅವರೊಂದಿಗೂ ಸಿಎಂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.