ETV Bharat / state

ನಗರದಲ್ಲಿ ನಾಲ್ಕು ನೂತನ ಸಂಚಾರ ಠಾಣೆಗಳಿಗೆ ಸಿಎಂ ಚಾಲನೆ - kannada top news

ನಗರದ ಸಂಚಾರ ದಟ್ಟಣೆ ತಗ್ಗಿಸಲು ಹೊಸದಾಗಿ ಮಹಾದೇವಪುರ, ತಲಘಟ್ಟಪುರ, ಬೆಳ್ಳಂದೂರು ಹಾಗೂ ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಗಳನ್ನ ಉದ್ಘಾಟಿಸಲಾಗಿದೆ.

CM launches four new traffic stations in the city
ನಗರದಲ್ಲಿ ನಾಲ್ಕು ನೂತನ ಸಂಚಾರ ಠಾಣೆಗಳಿಗೆ ಸಿಎಂ ಚಾಲನೆ
author img

By

Published : Mar 7, 2023, 9:20 PM IST

ಬೆಂಗಳೂರು: ನಗರದ ಸಂಚಾರ ದಟ್ಟಣೆ ತಗ್ಗಿಸಲು ಹೊಸತಾಗಿ ಸ್ಥಾಪನೆಯಾದ ನಾಲ್ಕು ಸಂಚಾರಿ ಪೊಲೀಸ್ ಠಾಣೆಗಳಿಗೆ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಹೊಸದಾಗಿ ಸ್ಥಾಪನೆಯಾದ ಮಹಾದೇವಪುರ, ತಲಘಟ್ಟಪುರ, ಬೆಳ್ಳಂದೂರು ಹಾಗೂ ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಗಳನ್ನ ಮಂಗಳವಾರ ಉದ್ಘಾಟನೆ ಮಾಡಲಾಗಿದೆ‌.

ಮೊದಲು ಮಹಾದೇವಪುರ ಸಂಚಾರಿ ಠಾಣೆಯನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದು, ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ, ನಗರ ಪೊಲೀಸ್ ಆಯುಕ್ತ ಸಿ.ಹೆಚ್.ಪ್ರತಾಪ್ ರೆಡ್ಡಿ, ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ಮತ್ತಿತರರು ಹಾಜರಿದ್ದರು. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ನಿರ್ವಹಣೆಯ ದೃಷ್ಟಿಯಿಂದ ಹೆಚ್ಚುವರಿ ಸಂಚಾರಿ ಠಾಣೆಗಳ‌ ಅವಶ್ಯಕತೆಯ ಕುರಿತು ಸಂಚಾರಿ ಪೊಲೀಸರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಪೊಲೀಸರ ಮನವಿಗೆ ಕಳೆದ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಸಮ್ಮತಿಸಿತ್ತು. ಅದರಂತೆ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯ ವ್ಯಾಪ್ತಿಯನ್ನ ವಿಭಜಿಸಿ 43 ಸಿಬ್ಬಂದಿಗಳನ್ನೊಳಗೊಂಡ ನೂತನ ತಲಘಟ್ಟಪುರ ಸಂಚಾರ ಠಾಣೆ, ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯನ್ನ ವಿಭಜಿಸಿ 43 ಸಿಬ್ಬಂದಿಗಳನ್ನೊಳಗೊಂಡ ನೂತನ ಬೆಳ್ಳಂದೂರು ಸಂಚಾರ ಠಾಣೆ, ಚಿಕ್ಕಜಾಲ ಹಾಗೂ ಬಾಣಸವಾಡಿ ವ್ಯಾಪ್ತಿಯ ಕೆಲ ಪ್ರದೇಶಗಳನ್ನ ಸೇರಿಸಿ 42 ಸಿಬ್ಬಂದಿಗಳನ್ನೊಳಗೊಂಡ ನೂತನ ಹೆಣ್ಣೂರು ಸಂಚಾರ ಠಾಣೆ ಹಾಗೂ ಕೆ.ಆರ್.ಪುರಂ ಠಾಣಾ ವ್ಯಾಪ್ತಿಯನ್ನ ವಿಭಜಿಸಿ 37 ಸಿಬ್ಬಂದಿಗಳನ್ನೊಳಗೊಂಡ ನೂತನ ಮಹಾದೇವಪುರ ಸಂಚಾರ ಠಾಣೆಗಳನ್ನ ಸ್ಥಾಪಿಸಲಾಗಿದ್ದು, ಹೊಸ ಠಾಣೆಗಳು ಕಾರ್ಯಾರಂಭಿಸಿವೆ.

ನೂತನ ಸಂಚಾರ ಠಾಣೆಗಳ ವ್ಯಾಪ್ತಿ - ಮಹಾದೇವಪುರ ಸಂಚಾರಿ ಠಾಣೆ: ಪೈ ಲೇಔಟ್, ಟಿನ್ ಫ್ಯಾಕ್ಟರಿ, ಉದಯನಗರ, ಎ.ನಾರಾಯಣಪುರ, ಆಕಾಶ್ ನಗರ, ಡಿಆರ್‌ಡಿಒ ಲೇಔಟ್, ಮಹದೇವಪುರ, ಸರಸ್ವತಿ ನಗರ, ಕಾಮಧೇನು ನಗರ, ಚಿನ್ನಪ್ಪ ಲೇಔಟ್, ಕಗ್ಗದಾಸಪುರ, ಗೋಶಾಲ, ದೊಡ್ಡನೆಕ್ಕುಂದಿ, ಬಿ.ನಾರಾಯಣಪುರ, ಬಾಗಮನೆ ಟೆಕ್ ವರ್ಲ್ಡ್ ಸೆಂಟರ್, ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ, ಸೀತಾರಾಮಪಾಳ್ಯ, ಸಿಂಗಯ್ಯನ ಪಾಳ್ಯ, ಮಹದೇವಪುರ ಪೊಲೀಸ್ ಠಾಣೆ, ಫೀನಿಕ್ಸ್ ಮಾರ್ಕೆಟ್‌ಸಿಟಿ, ವಿಆರ್ ಬೆಂಗಳೂರು, ಮಹೇಶ್ವರಿ ನಗರ, ಆರ್‌ಎಚ್‌ಬಿ ಕಾಲೋನಿ, ಗರುಡಾಚಾರ್ ಪಾಳ್ಯ, ಕಾವೇರಿ ನಗರ, ಬ್ರಿಗೇಡ್ ಮೆಟ್ರೋಪೋಲಿಸ್, ಆಶ್ರಯ ಲೇಔಟ್, ಗ್ರಾಫೈಟ್ ಇಂಡಿಯಾ, ಮತ್ತು ಬಸವ ನಗರ.

ತಲಘಟ್ಟಪುರ ಸಂಚಾರಿ ಠಾಣೆ: ಆಲಹಳ್ಳಿ, ಅಂಜನಾಪುರ, ಕೆಂಬತ್ತಹಳ್ಳಿ, ತಿಪ್ಪಸಂದ್ರ, ರಾಘವನಪಾಳ್ಯ, ಎಲೆತೋಟದಪಾಳ್ಯ, ಅಂಜನಾಪುರ ಬಿಡಿಎ ಲೇಔಟ್, ಗುಬ್ಬಲಾಳ, ತುರಹಳ್ಳಿ, ತುರಹಳ್ಳಿ ಕಾಲೋನಿ, ಭುವನೇಶ್ವರಿ, ಮಾರುತಿ ನಗರ, ಹುಚ್ಚಯ್ಯನಪಾಳ್ಯ, ಹೆಮ್ಮಿಗೆಪುರ, ಕೋಣಸಂದ್ರ, ವೀರಸಣ್ಣನಪಾಳ್ಯ, ಹೆಮ್ಮಿಗೆಪುರ, ಕೋಣಸಂದ್ರ, ಚನ್ನವೀರಯ್ಯನಪಾಳ್ಯ, ಸೋಂಪುರ, ವೀರಸಂದ್ರ, ದಾಸೇಗೌಡನಪಾಳ್ಯ, ಜಟ್ಟಿಗರಹಳ್ಳಿ, ಮೆಟ್ಟಿಗಪಾಳ್ಯ, ಗೊಟ್ಟಿಗೆರೆ ಪಾಳ್ಯ, ಚಿಕ್ಕಗೌಡನ ಪಾಳ್ಯ, ಲಿಂಗಧೀರನಹಳ್ಳಿ, ಕರಿಯಣ್ಣನಪಾಳ್ಯ, ತಲಘಟ್ಟಪುರ, ಬೋವಿ ಕಾಲೋನಿ, ಬೈಯ್ಯನಪಾಳ್ಯ, ರಘುವನಹಳ್ಳಿ, ಹೊಸಹಳ್ಳಿ, ಗಾಣಿಗರಪಾಳ್ಯ, ಅಂಜನಾಪುರ, ಗೊಲ್ಲಹಳ್ಳಿ, ತುಳಸೀಪುರ ಮತ್ತು ಮನೋವಾರ್ತೆ ಕಾವಲ್.

ಬೆಳ್ಳಂದೂರು ಸಂಚಾರಿ ಠಾಣೆ: ಇಬ್ಬಲೂರು ವಿಲೇಜ್, ಇಬ್ಬಲೂರು ಜಂಕ್ಷನ್, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು ಜಂಕ್ಷನ್, ಬೆಳ್ಳಂದೂರು ವಿಲೇಜ್, ಬೆಳ್ಳಂದೂರು ಕೆರೆ ಕೋಡಿ, ಇಕೋಸ್ಪೇಸ್, ಇಟಿ ಜಂಕ್ಷನ್, ಕಾರ್ಮೆಲಾರಂ ರೈಲ್ವೇ ಗೇಟ್, ಕಾರ್ಮೆಲಾರಂ ಜಂಕ್ಷನ್, ಹಾಡುಸಿದ್ದಾಪುರ ರಸ್ತೆ, ದೊಡ್ಡಕನ್ನಲ್ಲಿ ಜಂಕ್ಷನ್, ಚಿಕ್ಕನಾಯಕನಹಳ್ಳಿ ಜಂಕ್ಷನ್, ಹಾಲನಾಯಕನ ಹಳ್ಳಿ ರಸ್ತೆ, ಎ.ಕೃಷ್ಣಪ್ಪ ನಗರ, ಕೈಕೊಂಡರಹಳ್ಳಿ, ಕಸವನಹಳ್ಳಿ ರಸ್ತೆ, ಬೆಳ್ಳಂದೂರು ಗೇಟ್ ಮತ್ತು ಹರಳೂರು ವಿಲೇಜ್

ಹೆಣ್ಣೂರು ಸಂಚಾರಿ ಠಾಣೆ: ಸಾರಾಯಿಪಾಳ್ಯ (ಪಶ್ಚಿಮ ಭಾಗ ಆರ್‌.ಕೆ.ಹೆಗಡೆ ನಗರ), ಮಾನ್ಯತಾ ಲೇಔಟ್, ಎಂಎಸ್‌ಆರ್ ಲೇಔಟ್, ರಾಚೇನಹಳ್ಳಿ, ವೆಂಕಟೇಶಪುರ (ಕಲ್ಲಿಪಾಳ್ಯ), ಬಾಲಾಜಿ ಕೃಪಾ ಲೇಔಟ್, ಬಸವಲಿಂಗಪ್ಪ ಲೇಔಟ್, ಟೆಲಿಕಾಂ ಲೇಔಟ್ 1ನೇ ಹಂತ, ಆರ್‌.ಕೆ ಹೆಗಡೆ ನಗರ (ಪಶ್ಚಿಮ ಲೇಔಟ್, ಸಂಪಿಗೆಹಳ್ಳಿ ಮುಖ್ಯರಸ್ತೆ), ಸಂಪಿಗೆಹಳ್ಳಿ , ಚೊಕ್ಕನಹಳ್ಳಿ, ತಿರುಮೇನಹಳ್ಳಿ, ಅಗ್ರಹಾರ, ಕೊತ್ತನೂರು, ಕೆ.ನಾರಾಯಣಪುರ, ನಗರೇಶ್ವರ ನಾಗೇನಹಳ್ಳಿ, ಕ್ಯಾಲಸನಹಳ್ಳಿ, ಬಿಳೇಶಿವಾಲೆ, ದೊಡ್ಡಗುಬ್ಬಿ, ಚಿಕ್ಕಗುಬ್ಬಿ, ಗುಬ್ಬಿ ಬಂಡೆ, ನಾಡಗೊಂಡನಹಳ್ಳಿ, ದೊಡ್ಡೇನಹಳ್ಳಿ, ಹೆಣ್ಣೂರು, ಬೈರವೇಶ್ವರ ಲೇಔಟ್, ಮೇಗನಪಾಳ್ಯ, ಚೆಕ್ಕೆರೆ, ಬಾಬುಸಪಾಳ್ಯ, ಹೊರಮಾವು ವಿಲೇಜ್, ಗುಂಡುತೋಪು, ಹೊರಮಾವು ಆಗರ, ಗೆದ್ದಲಹಳ್ಳಿ, ಹೆಣ್ಣೂರು ಬಂಡೆ, ಹೆಣ್ಣೂರು ವಿಲೇಜ್, ಎಚ್‌ಬಿಆರ್ ಲೇಔಟ್‌ನ ಒಂದು ಭಾಗ, ಥಣಿಸಂದ್ರದ ಒಂದು ಭಾಗ, ಅಶ್ವಥನಗರ, ವಡ್ಡರಪಾಳ್ಯ, ರಾಜಣ್ಣ ಲೇಔಟ್, ಪ್ರಕೃತಿ ಟೌನ್‌ಶಿಪ್, ಟ್ಯೂಬಾ ಲೇಔಟ್ ಮತ್ತು ಬಂಜಾನ ಲೇಔಟ್.

ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಪ್ರಾಥಮಿಕ ತನಿಖಾ ವರದಿ ಬರುವವರೆಗೂ ಉಚ್ಛಾಟನೆ ಮಾಡುವ ವ್ಯವಸ್ಥೆ ಇಲ್ಲ: ಸಿ.ಟಿ.ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.