ETV Bharat / state

ಸರ್ಕಾರದಿಂದ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಆಗ್ತಿದೆ: ಬಿಎಸ್​ವೈ ಗುಡುಗು

ಕಳೆದ ಎರಡು ದಿನಗಳಿಂದ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕೊನೆಯ ದಿನವಾದ ಇಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಸಿಎಂ ಮತ್ತು ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಸಿಎಂ ಜೊತೆ ಮಾತನಾಡುವುದು ಏನಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಜನಪರವಾದ ಕೆಲಸ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ
author img

By

Published : Jun 16, 2019, 6:27 PM IST

ಬೆಂಗಳೂರು: ಸಿಎಂ ಜೊತೆ ಮಾತನಾಡೋದು ಏನಿದೆ. ಇನ್ನಾದರೂ ಎಚ್ಚೆತ್ತುಕೊಂಡು ಜನ‌ಪರ ಹೋರಾಟಕ್ಕೆ ಸಹಕಾರ ನೀಡುವುದು ಅವರ ಕರ್ತವ್ಯವೆಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.

ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ

ಅಹೋರಾತ್ರಿ ಧರಣಿಯ ಕೊನೆಯ ದಿನವಾದ ಇಂದು ಕಾರ್ಯಕರ್ತರ ಜೊತೆ ಮಾತನಾಡಿದ ಅವರು, ನಿನ್ನೆ, ಮೊನ್ನೆ ಎರಡು ದಿನ ಈ ಸರ್ಕಾರ ವಿರುದ್ಧ ನಡೆಸಿದ ಧರಣಿಯಲ್ಲಿ ಎಲ್ಲರೂ ಒಮ್ಮತದಿಂದ ಸಹಕರಿಸಿದ್ದಕ್ಕೆ ಧನ್ಯವಾದ ತಿಳಿಸಿದರು. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಿಎಂ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಅಧಿಕಾರಕ್ಕಾಗಿ ಅಂಟಿಕೊಂಡು ಕುಳಿತಿದ್ದಾರೆ. ರಾಜ್ಯದ ಶೇಕಡಾ 75 ರಷ್ಟು ಭಾಗದಲ್ಲಿ ಮಳೆ ಆಗದೇ ನೀರಿಗೆ ಹಾಹಾಕಾರವಿದೆ. ಬರಗಾಲಕ್ಕೆ ಈ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಇನ್ನು ಜಿಂದಾಲ್​ಗೆ ಕೊಟ್ಟಿರುವ ಭೂಮಿಯನ್ನು ಮುಂದುವರಿಸಿಲು ನಮಗೇನು ತೊಂದರೆಯಿಲ್ಲ. ಅಲ್ಲಿ ಅದಿರು ಸಿಗುತ್ತಿದ್ದು, ಈ ಭೂಮಿಯನ್ನು ಮಾರಾಟ ಮಾಡಬಾರದು. ಸಿಎಂ ಕುಮಾರಸ್ವಾಮಿ ಅವರು ಸಂಪುಟ ಉಪ‌ ಸಮಿತಿ ರಚನೆ ಮಾಡಿ ರಾಜ್ಯದ ಜನರ ಕಣ್ಣಿಗೆ ಮಣ್ಣು ಎರಚಲು ಹೊರಟಿದ್ದಾರೆ. ಆದ್ರೆ ನಾವು ಎಲ್ಲ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಬಿಎಸ್​ವೈ ಎಚ್ಚರಿಕೆ ರವಾನಿಸಿದರು.

ಇಂದು ಸಿಎಂ ಪತ್ರ ಬರೆದು ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಸಿಎಂ ಜೊತೆ ಮಾತನಾಡುವುದು ಏನಿದೆ‌. ಇದು ನಿಮ್ಮ ವಿರುದ್ಧ ಮಾಡುತ್ತಿರುವ ಹೋರಾಟ ಅಲ್ಲ. ಜನರ ಪರ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟ. ಇನ್ನಾದರೂ ಎಚ್ಚೆತ್ತುಕೊಂಡು ಜನಪರ ಹೋರಾಟಕ್ಕೆ ಸಹಕಾರ ನೀಡಿ ಎಂದು ಯಡಿಯೂರಪ್ಪ ಆಗ್ರಹಿಸಿದರು.

ಮಾಧ್ಯಮಗಳ ಹತ್ತಿಕ್ಕುವ ಪ್ರಯತ್ನ:
ಸಿಎಂ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದಿರುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಪಾತ್ರ ದೊಡ್ಡದಿದೆ. ಅದನ್ನು ಹತ್ತಿಕ್ಕುವ ಕೆಲಸ‌ ಮಾಡಬಾರದು. ಇನ್ಮ ಮುಂದೆಯಾದರೂ ಸಿಎಂ ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಲಿ. ಮಾಧ್ಯಮದವರು ಯಾವುದು ಸರಿ ಅದನ್ನ ಬಿತ್ತರಿಸುತ್ತಾರೆ ಎಂದು ಬಿಎಸ್​ವೈ ಕಿವಿಮಾತು ಹೇಳಿದರು.

Intro:Bsy speechBody:KN_BNG_03_16_BJPPROTEST_BSYSPEECH_SCRIPT_VENKAT_7201951

ಸಿಎಂ‌ ಜತೆ ಮಾತನಾಡುವುದು ಏನಿದೆ?, ಸರ್ಕಾರದ ‌ಕಿವಿ ಹಿಂಡುವ ಕೆಲಸ‌ ಮಾಡುತ್ತೇವೆ: ಬಿಎಸ್ ವೈ

ಬೆಂಗಳೂರು: ಸಿಎಂ ಜೊತೆ ಮಾತನಾಡೋದು ಏನಿದೆ?. ಎಚ್ಚೆತ್ತುಕೊಂಡು ಜನ‌ಪರ ಹೋರಾಟಕ್ಕೆ ಸಹಕಾರ ನೀಡುವುದು ನಿಮ್ಮ ಕರ್ತವ್ಯ ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಅಹೋರಾತ್ರಿ ಧರಣಿಯ ಕೊನೆಯ ದಿನವಾದ ಇಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ಸಿಎಂ ಕುಮಾರಸ್ವಾಮಿ ವಿರುದ್ಧದ ಹೋರಾಟ ಅಲ್ಲ. ಜನತೆ ಪರವಾಗಿ ಹೋರಾಟ ನಡೆಸಿ ಜನರ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಸಿಎಂ ಪತ್ರ ಬರೆದು ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಸಿಎಂ ಜೊತೆ ಮಾತನಾಡುವುದು ಏನಿದೆ‌?. ಎಚ್ಚೆತ್ತುಕೊಂಡು ಜನಪರ ಹೋರಾಟಕ್ಕೆ ಸಹಕಾರ ನೀಡಿ ಎಂದು ಒತ್ತಾಯಿಸಿದರು.

ಜಿಂದಾಲ್ ಪ್ರಕರಣದಲ್ಲಿ ಭೂಮಿ ಮಾರಾಟವಾಗಬಾರದು. ಉಪ‌ ಸಮಿತಿ ರಚನೆ ಮಾಡಿ ರಾಜ್ಯದ ಜನರ ಕಣ್ಣಿಗೆ ಮಣ್ಣು ಎರಚಲು ಹೊರಟ್ಟಿದ್ದಾರೆ. ನಾವು ಎಲ್ಲ ಹೋರಾಟಕ್ಕೆ ಸಿದ್ಧರಿದ್ದೇವೆ. ಆಡಳಿತ ಪಕ್ಷದವರೇ ಜಿಂದಾಲ್ ಭೂಮಿ ಪರಭಾರೆ ಬಗ್ಗೆ ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಕಳೆದ ಎರಡು ದಿನ ಅಹೋರಾತ್ರಿ ಧರಣಿ ನಡೆಸಿದ್ದೇವೆ. ಇನ್ಮುಂದೆ ಮೈತ್ರಿ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ. ಹಿರಿಯ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಸದನದಲ್ಲಿ ವಿಪಕ್ಷವಾಗಿ ಸರ್ಕಾರದ ಕಿವಿಹಿಂಡುವ ಕೆಲಸ ಬಿಜೆಪಿ ಮಾಡಿದೆ ಎಂದು ತಿಳಿಸಿದರು.

ಮಾಧ್ಯಮಗಳ ವಿರುದ್ಧ ಸಿಎಂ ತಿರುಗಿ ಬಿದಿದ್ದಾರೆ.
ಇದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಪಾತ್ರ ದೊಡ್ಡದಿದೆ. ಅದನ್ನು ಹತ್ತಿಕ್ಕುವ ಕೆಲಸ‌ ಮಾಡಬಾರದು. ಇನ್ಮುಂದೆಯಾದ್ರೂ ಸಿಎಂ ತಮ್ಮ ನಡವಳಿಕೆ ತಿದ್ದಿಕೊಳ್ಳಲಿ. ಮಾಧ್ಯಮದವರು ಯಾವುದು ಸರಿ ಅದನ್ನ ಬಿತ್ತರಿಸುತ್ತಾರೆ ಎಂದು ಕಿವಿ ಮಾತು ಹೇಳಿದರು.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಿಎಂ ರಾಜೀನಾಮೆ ನೀಡಬೇಕಾಗಿತ್ತು. ಆದ್ರೆ ಅಧಿಕಾರಕ್ಕೆ ಕುಮಾರಸ್ವಾಮಿ ಅಂಟಿಕೊಂಡು ಕೂತಿದ್ದಾರೆ. ಬರದ ಬಗ್ಗೆ ಮೈತ್ರಿ‌ ಸರ್ಕಾರ ಸ್ಪಂದಿಸುತ್ತಿಲ್ಲ. ಕೆರೆ ಕಟ್ಟೆ ಗಳ ಹೂಳು ಎತ್ತಬೇಕಾಗಿತ್ತು ಆದ್ರೆ ಅದು ಸರ್ಕಾರದಿಂದ ಆಗಲಿಲ್ಲ. ಸರ್ಕಾರದ ಕಿವಿ ಹಿಂಡುವ ಕೆಲಸ‌ ಮಾಡಿದ್ದೇವೆ. ತುಘಲಕ್ ದರ್ಬಾರ್ ಮಾಡುವ ಸರ್ಕಾರದ ಕಿವಿ ಹಿಂಡುವ ಕೆಲಸ‌ ಮಾಡುತ್ತೇವೆ ಎಂದು ತಿಳಿಸಿದರು.
Conclusion:Venkat

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.