ETV Bharat / state

ಸಿಡಿ ತನಿಖೆಗೆ ಕಾಂಗ್ರೆಸ್​ ಪಟ್ಟು : ಗದ್ದಲದ ನಡುವೆಯೇ ಬಜೆಟ್​​ ಮೇಲಿನ ಚರ್ಚೆಗೆ ಸಿಎಂ ಉತ್ತರ

ಸದನದಲ್ಲಿ ಕಾಂಗ್ರೆಸ್​​​ ನಾಯಕರ ಧರಣಿಯ ನಡುವೆಯೂ ಸಿಎಂ ಯಡಿಯೂರಪ್ಪ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ್ದಾರೆ. ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ಸಿಡಿ ಪ್ರಕರಣ ಕುರಿತು ತನಿಖೆಯಾಗಬೇಕೆಂದು ಪಟ್ಟು ಹಿಡಿದಿದ್ದಾರೆ..

CM Yediyurappa
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
author img

By

Published : Mar 24, 2021, 6:00 PM IST

Updated : Mar 24, 2021, 6:18 PM IST

ಬೆಂಗಳೂರು : ವಿಧಾನಸಭೆಯಲ್ಲಿ ಸಿಡಿ ಪ್ರಕರಣ ಕುರಿತು ಗದ್ದ ನಡೆಯುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರ ನೀಡಿದರು.

ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದರೆ, ಅತ್ತ ಆಡಳಿತ ಪಕ್ಷದ ಶಾಸಕರು ತಿರುಗೇಟು ನೀಡುತ್ತಿದ್ದರು. ಇದರ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಕಲಾಪದ ಪವಿತ್ರ ಸಮಯ ಹಾಳು ಮಾಡದೆ ಜನರ ತೆರಿಗೆ ಹಣ ಪೋಲು ಮಾಡುವುದು ಸರಿಯಲ್ಲ. ದಯಮಾಡಿ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.

ಗದ್ದಲದ ನಡೆವೆಯೇ ಬಜೆಟ್​​ ಮೇಲಿನ ಚರ್ಚೆಗೆ ಸಿಎಂ ಉತ್ತರ

ಇದಕ್ಕೆ ಸಹಕರಿಸದಿದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಜೆಟ್ ಚರ್ಚೆಗೆ ಉತ್ತರ ನೀಡಲು ಆರಂಭಿಸಿದರು. ಇದಕ್ಕೂ ಮುನ್ನ ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಶಾಸಕರಿಗೆ ಧರಣಿ ಕೈಬಿಡುವಂತೆ ಮನವಿ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಬಜೆಟ್ ಮೇಲೆ ಚರ್ಚೆ ನಡೆಯಬೇಕು. ನಿಮ್ಮ ಅಸಮಾಧಾವಿದ್ದರೆ ಚರ್ಚೆಗೆ ಬನ್ನಿ.
ಬಾವಿಗಿಳಿದು ಧರಣಿ ಮಾಡುವುದು ಬೇಡ ಎಂದು ಕೋರಿದರು.

ಈ ವೇಳೆ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಹಿಂದೆ ನಿಮ್ಮ ಅವಧಿಯಲ್ಲೂ ಇಂತಹ ಪ್ರಕರಣ ಇರಲಿಲ್ಲವೇ?. ಆಗ ಎಸ್​​ಐಟಿ ತನಿಖೆ ಮಾಡಲಿಲ್ಲವೇ?. ಈಗೇಕೆ ನೀವು ಧರಣಿ ಮಾಡುತ್ತೀರಾ? ಎಂದು ತರಾಟೆಗೆ ತೆಗೆದುಕೊಂಡರು.

ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮೂರು ದಿನಗಳಿಂದ ಕಾಂಗ್ರೆಸ್ ಧರಣಿ ಮಾಡುತ್ತಿದೆ. ಸರ್ಕಾರ ಉತ್ತರ ಕೊಟ್ಟಿದೆ.
ಆದರೂ ಪ್ರತಿಭಟನೆ‌ ಮಾಡುತ್ತಿದ್ದಾರೆ.

ಬೇರೆ ಶಾಸಕರ ಪ್ರಶ್ನೊತ್ತರವಿದೆ. ಆದರೆ, ಅವರ ಹಕ್ಕು ಕಿತ್ತುಕೊಳ್ಳುತ್ತಿದ್ದಾರೆ. ಇದು ಸಂವಿಧಾನಕ್ಕೆ ಅಪಮಾನ. ಹೀಗಾಗಿ, ಬಜೆಟ್ ‌ಮೇಲೆ‌ ಸಿಎಂ ಉತ್ತರ ಕೊಡುತ್ತಾರೆ. ಅವಕಾಶ ಮಾಡಿಕೊಡುವಂತೆ ಬೊಮ್ಮಯಿ ‌ಮನವಿ ಮಾಡಿದರು.

ಜೆಡಿಎಸ್ ಸಭಾತ್ಯಾಗ : ಈ ಮಧ್ಯೆ ಜೆಡಿಎಸ್​​ನ ಹಿರಿಯ ಸದಸ್ಯ ಹೆಚ್ ಡಿ ರೇವಣ್ಣ ಮಾತನಾಡಿ, ಚರ್ಚೆಗೆ ಅವಕಾಶ ಕೊಡಿ ಎಂದು ಸ್ಪೀಕರ್ ಅವರನ್ನು ಹಲವು ಬಾರಿ ಮನವಿ ಮಾಡಿದರು. ಆದರೆ, ಕಾಂಗ್ರೆಸ್ ಸದಸ್ಯರ ಘೋಷಣೆ ಮಧ್ಯೆ ಸ್ಪೀಕರ್ ಅವರಿಗೆ ಯಾವುದೂ ಕೇಳಿಸಲಿಲ್ಲ. ಒಂದೆಡೆ ಸಿಎಂ ಬಿಲ್ ಮಂಡನೆ ಮಾಡುತ್ತಿದ್ದರು. ಮತ್ತೊಂದೆಡೆ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗುತ್ತಿದ್ದರು. ಇದರಿಂದ ಬೇಸರಗೊಂಡ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಆಡಳಿತ ಪಕ್ಷದ ಸದಸ್ಯರಿಗೆ ಸ್ಪೀಕರ್ ಎಚ್ಚರಿಕೆ : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬಜೆಟ್ ಮೇಲೆ ಉತ್ತರ ನೀಡುತ್ತಿದ್ದಾಗ ಗುಂಪು ಸೇರಿ ಮಾತನಾಡುತ್ತಿದ್ದ ಬಿಜೆಪಿ ಸದಸ್ಯರನ್ನು ನೋಡಿದ ಸ್ಪೀಕರ್ ಗರಂ ಆದರು. ಗಂಭೀರವಾಗಿ ಕುಳಿತುಕೊಳ್ಳಿ ಎಂದು ಬಿಜೆಪಿ ಸದಸ್ಯರಿಗೆ ಸ್ಪೀಕರ್ ತಾಕೀತು ಮಾಡಿದರು.

ಇದನ್ನೂ ಓದಿ: ಸಿಡಿ‌ ಮಾಡೋರು, ಹಂಚೋರು ಎಲ್ಲವೂ ಗೊತ್ತಿದೆ: ಯತ್ನಾಳ್

Last Updated : Mar 24, 2021, 6:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.