ETV Bharat / state

ಕೆಸಿಜಿ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಘಟಕ ಉದ್ಘಾಟಿಸಿದ ಸಿಎಂ

ಇಂದು ಕೆಸಿ ಜೆನರಲ್ ಆಸ್ಪತ್ರೆ ಆವರಣದಲ್ಲಿ 50 ಬೆಡ್‌ಗಳ ಸುಸ್ಸಜ್ಜಿತ ಹೃದ್ರೋಗ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಇದರಲ್ಲಿ 2 ಐಸಿಯು, 2 ಜೆನರಲ್ ವಾರ್ಡ್, 1 ಪ್ರೀ ಮತ್ತು ಪೋಸ್ಟ್ ಕ್ಯಾತ್ ವಾರ್ಡ್ ಹೊಂದಿದೆ.

CM inaugurated the Jayadeva Heart Hospital Unit
ಜಯದೇವ ಹೃದ್ರೋಗ ಆಸ್ಪತ್ರೆ ಘಟಕ ಉದ್ಘಾಟಿಸಿದ ಸಿಎಂ
author img

By

Published : Oct 6, 2022, 4:23 PM IST

ಬೆಂಗಳೂರು: ಮಹಾನಗರದ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಜತೆಗೆ 243 ವಾರ್ಡ್​ಗಳಲ್ಲೂ 'ನಮ್ಮ ಕ್ಲಿನಿಕ್' ಆಸ್ಪತ್ರೆಗಳನ್ನು ನವೆಂಬರ್ ಹೊತ್ತಿಗೆ ಸ್ಥಾಪಿಸಲಾಗುತ್ತದೆ. ನಗರದಲ್ಲಿ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

ಮಲ್ಲೇಶ್ವರಂನಲ್ಲಿ ಇರುವ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ವತಿಯಿಂದ ನಿರ್ಮಿಸಿರುವ ತಲಾ 50 ಹಾಸಿಗೆಗಳ ಸಾಮರ್ಥ್ಯದ ಘಟಕಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಉದ್ಘಾಟಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ನಂತರ ಮಾತನಾಡಿದ ಅವರು, ಕೆ ಸಿ ಜನರಲ್ ಆಸ್ಪತ್ರೆಯ ಆವರಣದಲ್ಲಿ 200 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್) ಮತ್ತು 50 ಹಾಸಿಗೆಗಳ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಈ ಆಸ್ಪತ್ರೆಯು ವಿಕ್ಟೋರಿಯಾ ಆಸ್ಪತ್ರೆಯಂತೆ ಸಮಗ್ರವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಅವರು ಹೇಳಿದರು.

ಡಯಾಲಿಸಿಸ್ ಚಿಕಿತ್ಸೆಗೆ ನೆರವು: ರಾಜ್ಯ ಸರಕಾರವು ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಶ್ರವಣ ದೋಷವಿರುವ ಬಡವರಿಗೆ ಕಾಕ್ಲಿಯರ್ ಶಸ್ತ್ರಚಿಕಿತ್ಸೆಗೆ ನೆರವಾಗಲು ಸರಕಾರವು 500 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಜತೆಗೆ, ನಿತ್ಯ 60 ಸಾವಿರ ಜನರಿಗೆ ಡಯಾಲಿಸಿಸ್ ಚಿಕಿತ್ಸೆಗೆ ನೆರವು ನೀಡಲಾಗುತ್ತಿದೆ.

ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳ ಲಾಭ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನುಡಿದರು.ಸರಕಾರಿ ಆಸ್ಪತ್ರೆಗಳಿಗೆ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಇದನ್ನು ಪರಿಗಣಿಸಿ ರಾಜ್ಯದ 12 ಕಡೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

CM inaugurated the Jayadeva Heart Hospital Unit
ಜಯದೇವ ಹೃದ್ರೋಗ ಆಸ್ಪತ್ರೆ ಘಟಕ ಉದ್ಘಾಟಿಸಿದ ಸಿಎಂ

ನಗರದ ಉತ್ತರ ಭಾಗದ ಜನರಿಗೆ ಅನುಕೂಲ: ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಮತ್ತು ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗಳು ತಲಾ 50 ಹಾಸಿಗೆಗಳ ಘಟಕಗಳನ್ನು ಸ್ಥಾಪಿಸಿರುವುದರಿಂದ ಬೆಂಗಳೂರು ನಗರದ ಉತ್ತರ ಭಾಗದ ಜನರಿಗೆ ಅನುಕೂಲ ಆಗಲಿದೆ ಎಂದರು.

ಇಒಎಂ ಮಾದರಿಯಲ್ಲಿ ಘಟಕಗಳ ಸ್ಥಾಪನೆ: ಈಗ ಈ ಘಟಕಗಳನ್ನು ಕ್ರಮವಾಗಿ 15 ಕೋಟಿ ರೂ. ಮತ್ತು 3.53 ಕೋಟಿ ರೂ. ವೆಚ್ಚದಲ್ಲಿ ಇಒಎಂ ಮಾದರಿಯಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆ 900ಕ್ಕೆ ಏರಲಿದೆ. ಇಂದಿನಿಂದ ಆರಂಭವಾಗಿರುವ ಎರಡೂ ಘಟಕಗಳನ್ನು ಒಂದು ವರ್ಷದ ಅವಧಿಯೊಳಗೆ ನಿರ್ಮಿಸಲಾಗಿದೆ. ಈ ಘಟಕಗಳನ್ನು ಜಯದೇವ ಹೃದ್ರೋಗ ಸಂಸ್ಥೆಯ ಹಾಗೂ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗಳೇ ನಿರ್ವಹಿಸಲಿವೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಕೆ ಸಿ ಜನರಲ್ ಆಸ್ಪತ್ರೆಯು ಮೈಸೂರು ಮಹಾರಾಜರ ಕೊಡುಗೆಯಾಗಿದೆ. ಇಲ್ಲಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು. ಇಲ್ಲಿನ ಸಿಬ್ಬಂದಿ ಅಂತಹ ಸಂವೇದನಾಶೀಲತೆಯನ್ನು ಬೆಳೆಸಿ ಕೊಳ್ಳಬೇಕು ಎಂದು ಅವರು ಸೂಚಿಸಿದರು.

ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ಒಂದು ಕೋಟಿಗೂ ಹೆಚ್ಚು ಜನರಿರುವ ಬೆಂಗಳೂರಿನಲ್ಲಿ ಜನರಿಗೆ ತೃತೀಯ ಸ್ತರದ ಆರೋಗ್ಯ ಸೇವೆಗಳು ಹೆಚ್ಚಾಗಿ ಸಿಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ವಲಯವನ್ನು ಸದೃಢವಾಗಿ ಬೆಳೆಸಲಾಗುತ್ತಿದೆ. ಪಿಎಚ್ಸಿ, ಸಿಎಚ್ಸಿ ಮತ್ತು ಟರ್ಷರಿ ಆರೋಗ್ಯ ಕೇಂದ್ರಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಆರ್ಥಿಕ ದುರ್ಬಲರಿಗೆ ಇದರ ಲಾಭ ಸಿಗಲಿದ್ದು, ಉಚಿತವಾಗಿ ಚಿಕಿತ್ಸೆ ದೊರೆಯಲಿದೆ ಎಂದು ಅವರು ತಿಳಿಸಿದರು.

ಸೌಲಭ್ಯದ ವಿಶೇಷಗಳು:

  • ಹಾಸಿಗೆಗಳ ಸಾಮರ್ಥ 453ರಿಂದ 653ಕ್ಕೆ ಏರಿಕೆ. ಮುಂದಿನ ದಿನಗಳಲ್ಲಿ 800 ಹಾಸಿಗೆಗೆ ಏರಿಕೆ.
  • ವೆಂಟಿಲೇಟರ್ ಸಹಿತ 100 ಹಾಸಿಗೆಗಳ ತೀವ್ರ ನಿಗಾ ಘಟಕದ ವ್ಯವಸ್ಥೆ
  • ಎಲ್ಲ ಹಾಸಿಗೆಗಳಿಗೂ ಆಕ್ಸಿಜನ್ ಪೈಪ್ ಲೈನ್ ಅಳವಡಿಕೆ
  • ಆಸ್ಪತ್ರೆಯ ಆಮ್ಲಜನಕ ಸಾಮರ್ಥ್ಯ 3 ಕೆಎಲ್ ನಿಂದ 18 ಕೆಎಲ್ ಗೆ ಏರಿಕೆ
  • 2,000 ಎಲ್ಪಿಎಂ ಸಾಮರ್ಥ್ಯದ 3 ಆಮ್ಲಜನಕ ಘಟಕಗಳ ಸ್ಥಾಪನೆಗೆ ಕ್ರಮ
  • 300 ಹಾಸಿಗೆಗಳಿಗೆ ಬೆಡ್ ಸೈಟ್ ಮಾನಿಟರ್ ಅಳವಡಿಕೆ
  • ಎಕೋ, ಟ್ರೆಡ್ ಮಿಲ್, ಅತ್ಯಾಧುನಿಕ ಕ್ಯಾತ್ ಲ್ಯಾಬ್ ಸೌಲಭ್ಯ.
  • ಜಯದೇವ ಹೃದ್ರೋಗ ಸಂಸ್ಥೆಯ ಉಪಘಟಕದಲ್ಲಿ 20 ತುರ್ತು ನಿಗಾ ಮತ್ತು 30 ಸಾಮಾನ್ಯ ಹಾಸಿಗೆಗಳು ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.