ಬೆಂಗಳೂರು : ಲಾಕ್‌ಡೌನ್ ಸಮಯದಲ್ಲಿ ಬಡವರಿಗೆ ಅನುಕೂಲವಾಗಲು ಸರ್ಕಾರದಿಂದ ಬಡವರಿಗೆ ಉಚಿತ ಹಾಲು ವಿತರಣೆ ಕಾರ್ಯಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದರು.
ಅಶ್ವತ್ಥ್ ನಗರದಲ್ಲಿ ಮನೆ ಮನೆಗೆ ತೆರಳಿ ಬಡವರಿಗೆ ಹಾಲಿನ ಪ್ಯಾಕೇಟ್ ವಿತರಿಸುವ ಮೂಲಕ ಯೋಜನೆಗೆ ಸಿಎಂ ಚಾಲನೆ ನೀಡಿದರು. ಸಿಎಂಗೆ ಡಿಸಿಎಂ ಅಶ್ವತ್ಥ್ ನಾರಾಯಣ, ಸಚಿವ ಶಿವರಾಮ್ ಹೆಬ್ಬಾರ್ ಸಾಥ್ ನೀಡಿದರು.
ಕೆಎಂಎಫ್‌ನಲ್ಲಿ ಲಾಕ್‌ಡೌನ್ ಪರಿಣಾಮ ಉಳಿಯುತ್ತಿರುವ ಹೆಚ್ಚುವರಿ ಹಾಲನ್ನು ಖರೀದಿಸಿ ಬಡವರಿಗೆ ವಿತರಿಸುವ ಯೋಜನೆ ಇದಾಗಿದೆ. ಇಂದಿನಿಂದ ಏಪ್ರಿಲ್ 14ರವರೆಗೂ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತದೆ. ಕೊಳಗೇರಿ ಪ್ರದೇಶ ಸೇರಿದಂತೆ ರಾಜ್ಯಾದ್ಯಂತ ಹಾಲು ವಿತರಣೆ ಆಗಲಿದೆ.