ETV Bharat / state

ಸೀಲ್​​ ಡೌನ್ ಭೀತಿಯಲ್ಲಿ ಸಿಎಂ ಗೃಹ ಕಚೇರಿ... ಕೊರೊನಾ ಆತಂಕದಲ್ಲಿ ಸಚಿವರು, ಅಧಿಕಾರಿಗಳು! - latest news at bangalore

ಗೃಹ ಕಚೇರಿ ಕೃಷ್ಣಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾನ್ಸ್​​ಟೇಬಲ್ ಪತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಸಿಎಂ ಕಚೇರಿಗೆ ಭೇಟಿ ನೀಡಿದ್ದ ಸಚಿವರು ಹಾಗೂ ಅಧಿಕಾರಿಗಳೂ ಕೊರೊನಾ ಭೀತಿಗೆ ಒಳಗಾಗಿದ್ದಾರೆ.

CM Home Office in panic of seal down
ಸೀಲ್​​ಡೌನ್ ಭೀತಿಯಲ್ಲಿ ಸಿಎಂ ಗೃಹ ಕಚೇರಿ
author img

By

Published : Jun 19, 2020, 2:37 PM IST

ಬೆಂಗಳೂರು: ಲೇಡಿ ಕಾನ್ಸ್​​ಟೇಬಲ್ ಪತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಸೀಲ್​ ಡೌನ್ ಭೀತಿ ಎದುರಾಗಿದೆ. ಮಾತ್ರವಲ್ಲ ಸಿಎಂ ಕಚೇರಿಗೆ ಭೇಟಿ ನೀಡಿದ್ದ ಸಚಿವರು ಹಾಗೂ ಅಧಿಕಾರಿಗಳು ಕೊರೊನಾ ಆತಂಕಕ್ಕೆ ಒಳಗಾಗಿದ್ದಾರೆ.

ದಿನೇ ದಿನೆ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿಕಾಸಸೌಧದ ನಂತರ ಇದೀಗ ಮುಖ್ಯಮಂತ್ರಿಗಳ ಗೃಹ ಕಚೇರಿ ಬಾಗಿಲಿಗೂ ತಲುಪಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾನ್ಸ್​​ಟೇಬಲ್ ಪತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳಾ ಕಾನ್ಸ್​​ಟೇಬಲ್​ರನ್ನು ಕ್ವಾರಂಟೈನ್ ಮಾಡಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಸಿಬ್ಬಂದಿ ಪತಿಗೆ ಕೊರೊನಾ ಸೋಂಕು ದೃಢವಾಗುತ್ತಿದ್ದಂತೆ ಸಂಪೂರ್ಣ ಕಚೇರಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಜೊತೆಗೆ ಕಚೇರಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಸೀಲ್​​ ಡೌನ್ ಭೀತಿಯಲ್ಲಿ ಸಿಎಂ ಗೃಹ ಕಚೇರಿ

ಇದಕ್ಕೆ ಸಂಬಂಧಿಸಿದಂತೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗೆ ಕೃಷ್ಣಾದಲ್ಲಿ ನಡೆದ ಸ್ಟಾರ್ಟ್ ಅಪ್ ಯೋಜನೆಯಡಿ ಕ್ಯಾರವಾನ್ ಪ್ರವಾಸೋದ್ಯಮ ಉತ್ತೇಜನಕ್ಕಾಗಿ, ನೂತನ ಕ್ಯಾರವಾನ್​​ಗಳಿಗೆ ಸಿಎಂ ಹಸಿರು ನಿಶಾನೆ ತೋರಿದ್ದರು. ಆ ದಿನ ಮಹಿಳಾ ಕಾನ್ಸ್​​ಟೇಬಲ್ ಕರ್ತವ್ಯ ನಿರ್ವಹಿಸಿದ್ದರು. ಹಾಗಾಗಿ ಅಂದು ಕೃಷ್ಣಾಗೆ ಭೇಟಿ ನೀಡಿದ್ದ ಡಿಸಿಎಂ ಅಶ್ವತ್ಥ್​​ ನಾರಾಯಣ, ಸಚಿವರಾದ ಸಿ.ಟಿ.ರವಿ, ಬಿ.ಸಿ.ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಗೃಹ ಕಚೇರಿ ಕೃಷ್ಣಾದ ಇಡೀ ಸಿಬ್ಬಂದಿ ವರ್ಗ ಇದೀಗ ಕ್ವಾರಂಟೈನ್ ಭೀತಿಗೆ ಸಿಲುಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.