ETV Bharat / state

ಖ್ಯಾತ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ನಿಧನಕ್ಕೆ ಸಿಎಂ ಸಂತಾಪ: ಹೆಚ್​ಡಿಕೆ, ಅಶ್ವತ್ಥನಾರಾಯಣ, ಲಿಂಬಾವಳಿ ಕಂಬನಿ - ಮುಖ್ಯಮಂತ್ರಿ ಸಂತಾಪ

ಖ್ಯಾತ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ಗಣ್ಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ.

Yediyurappa
ಯಡಿಯೂರಪ್ಪ
author img

By

Published : Mar 6, 2021, 1:02 PM IST

ಬೆಂಗಳೂರು: ಖ್ಯಾತ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜಕೀಯ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

'ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು, ’ಭಾವಗೀತೆ, ಸಾಹಿತ್ಯ ವಿಮರ್ಶೆ, ಅನುವಾದ, ನವ್ಯಕವಿತೆ, ಮಕ್ಕಳಿಗಾಗಿ ಗೀತೆಗಳ ರಚನೆ ಮುಂತಾದ ಹಲವರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿ ವ್ಯಾಪಕ ಮನ್ನಣೆ ಪಡೆದಿದ್ದಾರೆ. ಅವರ ಜನಪ್ರಿಯ ಭಾವಗೀತೆಗಳಿಂದ ಕನ್ನಡಿಗರ ಮನೆ ಮಾತಾಗಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರದ ತಾರೆಯೊಂದು ಕಳಚಿದಂತಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬವರ್ಗ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸು ವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಹೆಚ್​.ಡಿ ಕುಮಾರಸ್ವಾಮಿ ಕಂಬನಿ

ನಾಡಿನ‌ ಖ್ಯಾತ ಕವಿ ಎನ್.ಎಸ್ ಲಕ್ಷ್ಮಿನಾರಾಯಣ ಭಟ್ ನಿಧನಕ್ಕೆ ಕಂಬನಿ ಮಿಡಿದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಎನ್.ಎಸ್ ಲಕ್ಷ್ಮಿನಾರಾಯಣ ಭಟ್ ಅವರು ವಿಧಿವಶರಾದದ್ದು ದುಃಖದ ಸಂಗತಿ ಎಂದಿದ್ದಾರೆ. ಭಾವಗೀತೆಗಳ ಲೋಕದ ಕವಿ ಇನ್ನಿಲ್ಲ ಎಂಬುದು ನಾಡಿನ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಭಾವಸಾರವನ್ನೇ ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಲೋಕದ ಮಹತ್ವದ ಕವಿ, ವಿಮರ್ಶಕ, ಶಿಶುಗೀತೆಕಾರರೂ, ಅನುವಾದಕರೂ ಆಗಿದ್ದ ಪ್ರೀತಿಯ 'ಎನ್ನೆಸ್ಎಲ್' ಅವರು ಜಗದ ತಾಯಿಯ ಮಾಯೆಯ ಲೀಲೆಯೊಳಗೆ ಕರಗಿಹೋದರು ಎಂದಿದ್ದಾರೆ.

ಡಿಸಿಎಂ ಕಂಬನಿ

ಶುದ್ಧ ಭಾವಗೀತೆಗಳನ್ನು ಬರೆದು ಸಾಹಿತ್ಯಪ್ರಿಯರ ಮತ್ತು ಸುಗಮ ಸಂಗೀತ ಪ್ರಿಯರ ಮನವನ್ನು ಜಾರಿಹೋಗದಂತೆ ಹಿಡಿದಿಟ್ಟಿದ್ದ ಕನ್ನಡದ ಹೆಸರಾಂತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ನಿಧನಕ್ಕೆ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಕಂಬನಿ ಮಿಡಿದಿದ್ದಾರೆ.

"ಎಲ್ಲಿ ಜಾರಿತೋ ಮನವು.." ದಂಥ ಅಮೋಘ ಗೀತೆಯನ್ನು ರಚಿಸಿದ್ದ ಅವರು, ವಿಭಿನ್ನ ಗದ್ಯವನ್ನೂ ಬರೆದವರು. ವಿಲಿಯಂ ಶೇಕ್ಸಪಿಯರರ ಐವತ್ತು ಸಾನೆಟ್ಟುಗಳ ಗುಚ್ಛ 'ಸುನೀತ' ಹಾಗೂ ಯೇಟ್ಸ್‌ ಕವಿಯ ಐವತ್ತು ಕವನಗಳ ಗುಚ್ಛ 'ಚಿನ್ನದ ಹಕ್ಕಿ'ಯಂಥ ಸರ್ವಶ್ರೇಷ್ಠ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಮಾಡಿದವರು.

ಸುಗಮ ಸಂಗೀತ ಆರಂಭದ ಹಾಗೂ ಮಧ್ಯಕಾಲದಲ್ಲಿ ಆ ಪ್ರಕಾರದ ಸಂಗೀತಕ್ಕೆ ಅತ್ಯಮೋಘ ನವ್ಯಕಾವ್ಯವನ್ನು ಸೃಷ್ಟಿಸಿಕೊಟ್ಟಿದ್ದ ಲಕ್ಷ್ಮೀನಾರಾಯಣ ಭಟ್ಟರು, ಅಂಕಿತ ಭಾವದಿಂದ ಸಾಹಿತ್ಯ ಕೃಷಿ ಮಾಡಿದವರು. ಅವರ ನಿಧನ ತೀವ್ರ ದುಃಖವನ್ನುಂಟು ಮಾಡಿದೆ. ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ನಷ್ಟವೂ ಆಗಿದೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಅವರ ಕುಟಿಂಬದವರಿಗೆ ಹಾಗೂ ಅವರೆಲ್ಲ ಸಾಹಿತ್ಯಾಭಿಮಾನಿಗಳಿಗೆ ಸಿಗಲಿ. ದೇವರು ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಅರವಿಂದ ಲಿಂಬಾವಳಿ ಶೋಕ

ಆಧುನಿಕ ಕನ್ನಡ ಕಾವ್ಯ ಪರಂಪರೆಗೆ ಅತಿದೊಡ್ಡ ಕೊಡುಗೆ ಕೊಟ್ಟ ಹಿರಿಯ ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೀನಾರಾಯಣ ಭಟ್ಟರು ಆಧುನಿಕ ಕನ್ನಡ ಕಾವ್ಯ ಪರಂಪರೆಯ ಬಹು ಮುಖ್ಯ ಕವಿಗಳಲ್ಲಿ ಒಬ್ಬರಾಗಿದ್ದರು. ಭಾವಗೀತೆಯ ಪ್ರಕಾರಕ್ಕೆ ಅವರ ಕೊಡುಗೆ ಅತ್ಯಂತ ಮಹತ್ವದ್ದು. ಅವರ ಗೀತೆ ಹಾಡದ ಗಾಯಕರೇ ಇಲ್ಲವೆಂದರೆ ಅತಿಶಯೋಕ್ತಿ ಅಲ್ಲ.
ಶೇಕ್ಸ್ಪಿಯರ್, ಎಲಿಯಟ್, ಏಟ್ಸ್ ಮುಂತಾದ ಕವಿಗಳನ್ನು ಅದ್ಭುತವಾಗಿ ಕನ್ನಡಕ್ಕೆ ಅನುವಾದಿಸಿದ ಲಕ್ಷ್ಮೀನಾರಾಯಣಭಟ್ಟಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಾಸ್ತಿ ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಗೌರವಗಳಿಗೆ ಪಾತ್ರರಾಗಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯದ ಆಧುನಿಕ ಕಾವ್ಯ ಪರಂಪರೆಯ ಕೊಂಡಿ ಕಳಚಿದಂತಾಗಿದೆ ಎಂದು ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.