ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಳಸುವ ಕಾರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ನಾಲ್ಕು ತಿಂಗಳು ದಂಡ ಕಟ್ಟಿಲ್ಲ ಎಂಬ ವಿಚಾರ ಇದೀಗ ಬಯಲಾಗಿದೆ.
ಸರ್ಕಾರಿ ವಾಹನ ಬಳಸದೇ ಸ್ವಂತ ವಾಹನ ಬಳಸುತ್ತಿರುವ ಸಿಎಂ ಅವರ ರೇಂಜ್ ರೋವರ್ ಕಾರ್ ಮೇಲೆ 4 ತಿಂಗಳಿನಿಂದ ನಿಯಮ ಉಲ್ಲಂಘನೆ ಆರೋಪವಿದೆ.
ಕಳೆದ ಫೆ.10 ರಂದು ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘನೆಯಾಗಿತ್ತು. ಕಾರು ಚಾಲಕ ಮೊಬೈಲ್ ಬಳಕೆ ಮಾಡಿದ್ದು ಆಟೋಮೆಟೆಡ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಸಂಚಾರಿ ಪೊಲೀಸರು ನೋಟಿಸ್ ಕಳಿಸಿದ್ದರು.
ಆಟೋಮೇಟೆಡ್ ಚಲನ್ ಜನರೇಟ್ ಆಗಿ ಈಗಲೇ ಎರಡು ವಾರಗಳಾಗಿದೆ. ಸಂಚಾರ ನಿಯಮದ ಪ್ರಕಾರ ಚಲನ್ ಜನರೇಟ್ ಆದ 7 ದಿನಗಳಲ್ಲಿ ದಂಡ ಪಾವತಿಸಬೇಕು. ಇಲ್ಲವಾದಲ್ಲಿ ಪೊಲೀಸರೇ ತಡೆ ಹಿಡಿದು ದಂಡ ವಸೂಲಿ ಮಾಡಬಹುದು. ಆದರೆ ಇನ್ನೂ ದಂಡ ಕಟ್ಟಿಲ್ಲ. ಆದಷ್ಟು ಬೇಗ ದಂಡ ವಸೂಲಿ ಮಾಡುವುದಾಗಿ ಸಂಬಂಧಪಟ್ಟ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.