ETV Bharat / state

ಕನಕದಾಸರ ಪುತ್ಥಳಿಗೆ ಸಿಎಂ ಪುಷ್ಪಾರ್ಚನೆ: ಹೆಚ್‌ಡಿಡಿ ಶುಭಾಶಯ

ಕೀರ್ತನೆಯಲ್ಲಿ ಮಾನವೀಯತೆ ಹಾಗೂ ಸಮಸಮಾಜದ ಕಾಳಜಿಯನ್ನು ಸರಳವಾಗಿ ಜನರಿಗೆ ಹೇಳುತ್ತಿದ್ದ ಮಹಾನ್​​ ದಾರ್ಶನಿಕ‌ ಕನಕದಾಸರು ಎಂದು ಸಿಎಂ ಯಡಿಯೂರಪ್ಪ ಕೊಂಡಾಡಿದ್ದಾರೆ.

cm bsy covey his wishes for kanakadasa jayanti
ಕನಕದಾಸರ ಪುತ್ಥಳಿಗೆ ಸಿಎಂ ಪುಷ್ಪಾರ್ಚನೆ....ಕನಕ‌ ಜಯಂತಿಗೆ ಶುಭಕೋರಿದ ದೇವೇಗೌಡರು
author img

By

Published : Dec 3, 2020, 1:09 PM IST

Updated : Dec 3, 2020, 1:20 PM IST

ಬೆಂಗಳೂರು: ಕನಕದಾಸ ಜಯಂತಿ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಶಾಸಕರ ಭವನದ ಬಳಿಯ ಕನಕದಾಸರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.

ಕನಕದಾಸರ ಪುತ್ಥಳಿಗೆ ಸಿಎಂ ಪುಷ್ಪಾರ್ಚನೆ

ಬಳಿಕ‌ ಮಾತನಾಡಿದ ಸಿಎಂ, ಕನಕದಾಸರು ಕನ್ನಡ ‌ಸಾರಸ್ವತ ಲೋಕದ ಹಾಗೂ ಕೀರ್ತನಾ ಸಾಹಿತ್ಯದ ಅದ್ಭುತ ಪ್ರತಿಭೆ. ಕಾವ್ಯದಲ್ಲಿ ಮಾನವೀಯತೆ ಹಾಗೂ ಸಮಸಮಾಜದ ಕಾಳಜಿಯನ್ನು ಸರಳವಾಗಿ ಜನರಿಗೆ ಹೇಳುತ್ತಿದ್ದ ದಾರ್ಶನಿಕ‌ರು ಎಂದು ಸ್ಮರಿಸಿದರು.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ನಾಡಿನ ಸಮಸ್ತರಿಗೂ ಸಂತಕವಿ, ದಾಸಶ್ರೇಷ್ಠ ಕನಕದಾಸ ಜಯಂತಿಯ ಶುಭಾಶಯ ಕೋರಿದ್ದಾರೆ. 16ನೇ ಶತಮಾನದಲ್ಲಿಯೇ ಸಮಾಜದಲ್ಲಿ ಸಮಾನತೆಯ ಸಂದೇಶ ಸಾರಿದ ಕನಕದಾಸರಿಗೆ ನಮನಗಳು. ಅವರು ತೋರಿದ ಸಮಾನತೆಯ ದಾರಿಯಲ್ಲಿ ನಾವೆಲ್ಲರೂ ನಡೆಯುವುದು ಅವಶ್ಯಕ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

hd devegowda tweet
ಹೆಚ್.ಡಿ. ದೇವೇಗೌಡ ಟ್ವೀಟ್​

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್​​ನ ಶಾಸಕರ ಭವನದಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಹಾರ ಸಚಿವ ಕೆ. ಗೋಪಾಲಯ್ಯ, ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಇದ್ದರು.

ಈ ಸುದ್ದಿಯನ್ನೂ ಓದಿ: ಅಗಾಧ ನೆನಪಿನ ಶಕ್ತಿಯೇ ಈತನಿಗೆ ವರದಾನ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​​ನಲ್ಲಿ ಸ್ಥಾನ ಪಡೆದ ಹುಬ್ಬಳ್ಳಿಯ ಪೋರ

ಈ ವೇಳೆ ಮಾತನಾಡಿದ ಸಚಿವರು, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ಜನರಲ್ಲಿದ್ದ ಮೌಢ್ಯತೆಗಳನ್ನು ಹೋಗಲಾಡಿಸಲು ಶ್ರಮಿಸಿದ ಹರಿಕಾರರು. ಸಮಾಜದ ಅಂಕುಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿಕೊಂಡರು.

Last Updated : Dec 3, 2020, 1:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.