ಬೆಂಗಳೂರು: ನಿನ್ನೆ ಸುರಿದ ಮಳೆಯಿಂದಾಗಿ ನಗರದ ಹಲವು ಪ್ರದೇಶದಲ್ಲಿ ಹಾನಿಯಾಗಿದ್ದು, ಹೊಸಕೆರೆಹಳ್ಳಿ ವಾರ್ಡ್ 161ರ ದತ್ತಾತ್ರೇಯ ನಗರ ವ್ಯಾಪ್ತಿಗೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸಿಎಂ ಮಳೆ ಹಾನಿಯಾದ ಪ್ರದೇಶಗಳ ಪರಿಶೀಲನೆ ಮಾಡುತ್ತಿದ್ದು, ಸಚಿವ ಆರ್.ಅಶೋಕ್ ನಿನ್ನೆಯ ಸನ್ನಿವೇಶದ ಬಗ್ಗೆ ಸಿಎಂಗೆ ಮಾಹಿತಿ ನೀಡುತ್ತಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಕೇಳುತ್ತಿದ್ದಾರೆ. ಹಾನಿಯ ಕುರಿತು ಮಾಹಿತಿ ಪಡೆದು ಪ್ರತಿ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.