ಬೆಂಗಳೂರು: ಒಬ್ಬರನ್ನು ಸಂಪುಟದಿಂದ ಕೈಬಿಡಲಿದ್ದು, ಯಾರು ಎನ್ನುವ ವಿಚಾರವನ್ನು ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟಕ್ಕೆ 8 ಜನರ ಸೇರ್ಪಡೆ ಆಗಲಿದೆ. ಯಾರು ಆ 8 ಜನ ಎಂಬ ಪಟ್ಟಿಯನ್ನು ರಾತ್ರಿಯೊಳಗೆ ಬಿಡುಗಡೆ ಮಾಡುತ್ತೇನೆ. ಈಗಾಗಲೇ ಖಾತೆ ಖಚಿತ ಆಗಿರುವ ಕೆಲವರಿಗೆ ತಿಳಿಸಿದ್ದೇನೆ. ಇನ್ನೂ ಕೆಲವರಿಗೆ ಸಣ್ಣ ಪಟ್ಟು ವ್ಯತ್ಯಾಸಗಳಿಂದ ಖಚಿತ ಆಗಬೇಕು. ಹೀಗಾಗಿ ಅಂತಿಮವಾಗಿ ಚರ್ಚಿಸಿ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದರು.
ನಾಳೆ ಸಂಜೆ 3.30ಗೆ ಸಂಪುಟ ಸೇರುವ ನೂತನ ಸಚಿವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ಸಿಎಂ ತಿಳಿಸಿದರು.
ಇದೇ ವೇಳೆ, ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್ನಲ್ಲಿ ಬಿಎಸ್ವೈ: ಹೋಟೆಲ್ನಲ್ಲಿ ಬಿಸಿ ಬಿಸಿ ದೋಸೆ ಸವಿದ ಸಿಎಂ