ಬೆಂಗಳೂರು: ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಬಿ.ಎಸ್.ಯಡಿಯೂರಪ್ಪ ಸಂಪುಟ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಫೈನಲ್ ಆಗಿದ್ದು, ಮೂವರಿಗೆ ಡಿಸಿಎಂ ಸ್ಥಾನ ನೀಡಲಾಗಿದೆ. ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳುಹಿಸಿ ಕೊಟ್ಟಿದ್ದ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಅಳೆದು ತೂಗಿ ಸಂಪುಟ ವಿಸ್ತರಣೆ ಮಾಡಿದ್ದ ಸಿಎಂ ಇದೀಗ ಹೈಕಮಾಂಡ್, ಆರ್.ಎಸ್.ಎಸ್.ನಾಯಕರ ಭೇಟಿ ನಂತರ ಖಾತೆ ಹಂಚಿಕೆ ಪಟ್ಟಿಯನ್ನು ಫೈನಲ್ ಮಾಡಿದ್ದರು.
ಮೂವರಲ್ಲಿ ಡಿಸಿಎಂ ಸ್ಥಾನ:
ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ್ ಹಾಗೂ ಲಕ್ಷ್ಮಣ ಸವದಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.
- ಜಗದೀಶ್ ಶೆಟ್ಟರ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಕ್ಕರೆ
- ಲಕ್ಣ್ಮಣ ಸವದಿ-ಸಾರಿಗೆ
- ಆರ್.ಅಶೋಕ್- ಕಂದಾಯ
- ಬಸವರಾಜ ಬೊಮ್ಮಾಯಿ- ಗೃಹ ಖಾತೆ, (ಗುಪ್ತಚರ ವಿಭಾಗ ಹೊರತು)
- ವಿ.ಸೋಮಣ್ಣ- ವಸತಿ,
- ಕೆ.ಎಸ್.ಈಶ್ವರಪ್ಪ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್,
- ಗೋವಿಂದ ಕಾರಜೋಳ- ಲೋಕೋಪಯೋಗಿ, ಸಮಾಜ ಕಲ್ಯಾಣ,
- ಅಶ್ವತ್ಥನಾರಾಯಣ್- ಉನ್ನತ ಶಿಕ್ಷಣ,ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ
- ಜೆ.ಸಿ ಮಾಧುಸ್ವಾಮಿ-ಕಾನೂನು ಮತ್ತು ಸಂಸದೀಯ, ಸಣ್ಣ ನೀರಾವರಿ
- ಸುರೇಶ್ ಕುಮಾರ್ - ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ, ಸಕಾಲ
- ಸಿ.ಟಿ ರವಿ - ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ
- ಕೋಟಾ ಶ್ರೀನಿವಾಸ ಪೂಜಾರಿ, ಮುಜರಾಯಿ ಬಂದರು ಮತ್ತು
ಮೀನುಗಾರಿಕೆ,ಒಳನಾಡು ಸಾರಿಗೆ - ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, (ವೈದ್ಯಕೀಯ ಶಿಕ್ಷಣ ಹೊರತುಪಡಿಸಿ)
- ಸಿಸಿ ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ
- ಪ್ರಭು ಚೌಹಾಣ್, ಪಶು ಸಂಗೋಪನೆ
- ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
- ಹೆಚ್.ನಾಗೇಶ್- ಅಬಕಾರಿ