ETV Bharat / state

ಸರ್ಕಾರಿ‌ ನೌಕರರ ಸಂಘದ ಶತಮಾನೋತ್ಸವ ಭವನ ಉದ್ಘಾಟಿಸಿದ ಸಿಎಂ ಬಿಎಸ್​​ವೈ - Bangalore

13 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಕರ್ನಾಟಕ ರಾಜ್ಯ ಸರ್ಕಾರಿ‌ ನೌಕರರ ಸಂಘದ ಶತಮಾನೋತ್ಸವ ಭವನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು.

CM BSY
ಸಿಎಂ ಬಿಎಸ್​​ವೈ
author img

By

Published : Jul 1, 2021, 2:29 PM IST

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ‌ ನೌಕರರ ಸಂಘದ ಶತಮಾನೋತ್ಸವ ಭವನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು. ಡಿಸಿಎಂ ಗೋವಿಂದ ಕಾರಜೋಳ, ಲೋಕಸಭಾ ಸದಸ್ಯ ರಾಘವೇಂದ್ರ, ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸಾಥ್ ನೀಡಿದರು. ಇದೇ ವೇಳೆ, ಸಿಎಂ ಸರ್ಕಾರಿ ನೌಕರರ ಸಂಘದ ಬೈಲಾವನ್ನು ಸಹ ಉದ್ಘಾಟಿಸಿದರು.

13 ಕೋಟಿ ರೂ. ವೆಚ್ಚ:

ಬಳಿಕ ಸಿ.ಎಸ್ ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರ ಸಂಘದ ಕಟ್ಟಡವನ್ನು 13 ಕೋಟಿ ರೂ. ವೆಚ್ಚದಲ್ಲಿ ಒಂದು ವರ್ಷದಲ್ಲಿ ನಿರ್ಮಿಸಲಾಗಿದೆ. ಕೋವಿಡ್​​ನಿಂದಾಗಿ ಕಡಿಮೆ ಜನರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. 1920ರಲ್ಲೇ ಈ ಸಂಘ ಆರಂಭವಾಗಿತ್ತು. ರಾಜ್ಯದಲ್ಲಿ ಒಟ್ಟಾರೆ 6 ಲಕ್ಷ ನೌಕರರಿದ್ದಾರೆ. ಮೂಲ ಸೌಲಭ್ಯಕ್ಕೆ ಅತಿಹೆಚ್ಚು ಅನುದಾನ ಕೊಟ್ಟ ಪ್ರಥಮ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ. ಶಿವಮೊಗ್ಗದಲ್ಲಿಯೂ 12 ಕೋಟಿ ವೆಚ್ಚದಲ್ಲಿ ಕಟ್ಟಡಕ್ಕೆ ಸದ್ಯದಲ್ಲೇ ಶಂಕುಸ್ಥಾಪನೆ ಆಗಲಿದೆ ಎಂದರು.

ಪ್ರತೀ ವರ್ಷ ಏಪ್ರಿಲ್ 21ನೇ ತಾರೀಕು ನೌಕರರ ದಿನಾಚರಣೆಗೆ ಕರೆ ನೀಡಿದ್ದಾರೆ. ಸರ್ಕಾರಿ ನೌಕರರು ಹಾಗೂ 25 ಲಕ್ಷ ಕುಟುಂಬಸ್ಥರಿಗೆ ನಗದು ರಹಿತ ಆರೋಗ್ಯ ಸೇವೆ ಕೊಡುವ ಯೋಜನೆಗೂ ಸದ್ಯದಲ್ಲೇ ಜಾರಿಯಾಗುತ್ತಿರುವುದು ಸಂತಸದ ವಿಷಯ ಎಂದರು. ಅದಲ್ಲದೇ ಅವರು ಎರಡು ಬೇಡಿಕೆಗಳನ್ನು‌ ಸಲ್ಲಿಸಿದರು.

1. ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯ ತೆಗೆದು ಹಾಕಿ, ಬೇರೆ ರಾಜ್ಯದಲ್ಲಿರುವಂತೆ ವೇತನ ಶ್ರೇಣಿಯನ್ನು ರಾಜ್ಯಕ್ಕೂ ಕೊಡಬೇಕು.

2. ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟರು.

ಸರ್ಕಾರದ ಯೋಜನೆ ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು:

ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಇದು ಮಾದರಿ ಸಂಘ. ಸರ್ಕಾರಿ ನೌಕರರು ಆಡಳಿತ ಯಂತ್ರ‌ ಸುಗಮವಾಗಿ ನಡೆಯಲು ಸಹಕರಿಸಿದ್ದಾರೆ. ಈ ಭವನ ರಾಜ್ಯದ ಎಲ್ಲೆಡೆಯಿಂದ ಬರುವ ನೌಕರರಿಗೆ ಬಳಕೆಯಾಗಲಿ. ನೌಕರರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಕೆಲಸದ ವಾತಾವರಣ ಉತ್ತಮಗೊಳಿಸಲು ಪ್ರಯತ್ನಿಸಲಾಗಿದೆ. ಹಾಗೆಯೇ ಸರ್ಕಾರದ ಯೋಜನೆಗಳನ್ನು ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂದು ಮನವಿ ಮಾಡಿದರು.

ನೌಕರರಿಗೆ ಬೋನಸ್:

ರಾಜ್ಯ ಸರ್ಕಾರಿ ನೌಕರರ ಮೇಲೆ ಅನಾಮಧೇಯ ದೂರುಗಳಿಗೆ ವಿಚಾರಣೆ ಅಗತ್ಯವಿಲ್ಲ ಎಂದು ಘೋಷಣೆ ಹೊರಡಿಸಿದ್ದೇನೆ. ಅಲ್ಲದೇ ಮಹಿಳೆಯರಿಗೆ ಅನೇಕ ಯೋಜನೆಯನ್ನು ಕಳೆದ ಆಯವ್ಯಯದಲ್ಲಿ ಘೋಷಿಸಲಾಗಿದೆ. ಕೆಜೆಎಡಿಯ ಗಣಕೀಕರಣ ಸಂಪೂರ್ಣವಾಗಿದ್ದು, ಇದರಿಂದಾಗಿ ನೌಕರರಿಗೆ ಬೋನಸ್ ಸಿಗಲಿದೆ ಎಂದರು.

ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ನನ್ನ 40 ವರ್ಷದ ಅನುಭವದಲ್ಲಿ ನೋಡಿದ ಹಾಗೆ, ಹಿಂದೆ ಎಲ್ಲ ಸಂಘದ ಕಟ್ಟಡ ಕಟ್ಟಬೇಕಾದರೆ ಐದು ರೂ ಸಂಗ್ರಹ ಮಾಡಿ ಕಟ್ಟಬೇಕಿತ್ತು. ಯಡಿಯೂರಪ್ಪ ಸಿಎಂ ಆದ್ಮೇಲೆ, ಇಷ್ಟೊಂದು ಧಾರಾಳವಾಗಿ ಕೊಟ್ಟಿದ್ದಾರೆ. ಸಮಾಜದ ಯಾವುದೇ ವರ್ಗವನ್ನು ಖಾಲಿ ಕೈಯಲ್ಲಿ ಕಳಿಸಿ ಎಂದು ಗುಣಗಾನ ಮಾಡಿದರು.

ಇದನ್ನೂ ಓದಿ: ಮುದ್ರಣ ಮಾಧ್ಯಮದಲ್ಲಾದ ಹೊಸ ತಂತ್ರಜ್ಞಾನಗಳ ಬೆಳವಣಿಗೆ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.