ETV Bharat / state

ಆಸ್ಪತ್ರೆಯಿಂದಲೇ ಸಭೆ ನಡೆಸಿದ ಸಿಎಂ ಬಿಎಸ್​ವೈ.. ವೆಂಟಿಲೇಟರ್​ ಬೆಡ್​ ಹೆಚ್ಚಳ ಕುರಿತು ಚರ್ಚೆ - bsy latest news

ಕೇಂದ್ರ ಸರ್ಕಾರ ರಾಜ್ಯಕ್ಕೆ ಒದಗಿಸಿರುವ 1279 ವೆಂಟಿಲೇಟರ್​​ಗಳು ಈ ತಿಂಗಳ ಕೊನೆಯಲ್ಲಿ ದೊರಕಲಿವೆ. ಈ ಎಲ್ಲಾ ವೆಂಟಿಲೇಟರ್​ಗಳನ್ನು ತಕ್ಷಣವೇ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು..

CM bsy held meeting from the hospital
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
author img

By

Published : Aug 4, 2020, 4:11 PM IST

ಬೆಂಗಳೂರು : ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಸಿಎಂ ಬಿ ಎಸ್ ಯಡಿಯೂರಪ್ಪ ಅಲ್ಲಿಂದಲೇ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಭೆ ನಡೆಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

CM bsy held meeting from the hospital
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ರಾಜ್ಯದಲ್ಲಿ ವೆಂಟಿಲೇಟರ್ ಬೆಡ್​ಗಳನ್ನು ಹೆಚ್ಚಿಸುವ ಸಂಬಂಧ ಇಂದು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾದಲ್ಲಿರುವ ಸಿಎಂ ವಿಶ್ರಾಂತಿಯ ಜೊತೆಗೆ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ಬೆಳಗಿನ ವೈದ್ಯಕೀಯ ತಪಾಸಣೆ ಮುಕ್ತಾಯದ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಕೈಗೊಂಡ ತೀರ್ಮಾನಗಳು : ಭಾರತ ಸರ್ಕಾರದ ಪಿಎಂ ಕೇರ್ಸ್ ಅಡಿ ರಾಜ್ಯಕ್ಕೆ 681 ವೆಂಟಿಲೇಟರ್​ಗಳು ದೊರಕಿವೆ. ಕಳೆದ ವಾರ ಬೆಂಗಳೂರಿನಲ್ಲಿ 166 ಹಾಗೂ ರಾಜ್ಯದಲ್ಲಿ ವೆಂಟಿಲೇಟರ್ ಬೆಡ್​ಗಳ ಸಂಖ್ಯೆಯನ್ನು ಒಟ್ಟು 335ಕ್ಕೆ ಹೆಚ್ಚಿಸಲಾಗಿದೆ. ಈ ವಾರಾಂತ್ಯದಲ್ಲಿ ಉಳಿದ 346 ವೆಂಟಿಲೇಟರ್​ಗಳನ್ನು ಅಳವಡಿಸಲಾಗುವುದು ಎಂದು ಸಿಎಂ ಸಭೆಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಒದಗಿಸಿರುವ 1279 ವೆಂಟಿಲೇಟರ್​​ಗಳು ಈ ತಿಂಗಳ ಕೊನೆಯಲ್ಲಿ ದೊರಕಲಿವೆ. ಈ ಎಲ್ಲಾ ವೆಂಟಿಲೇಟರ್​ಗಳನ್ನು ತಕ್ಷಣವೇ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅನೆಸ್ಥಿಟಿಕ್ಸ್, ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ತಕ್ಷಣವೇ ನೇಮಕ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ವೆಂಟಿಲೇಟರ್​ಗಳನ್ನು ಒದಗಿಸಲು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಸೂಚಿಸಿದ ಸಿಎಂ, ಕೋವಿಡ್-19 ಸಂಬಂಧ ತಾತ್ಕಾಲಿಕವಾಗಿ ಒದಗಿಸಲು ಷರತ್ತು ಮತ್ತು ನಿಯಮಗಳ ಬಗ್ಗೆ ತೀರ್ಮಾನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.