ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾಗುತ್ತದೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲಾಗುತ್ತದೆ ಎಂದು ವಿಶ್ಲೇಷಿಸುತ್ತಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಹೊಸ ಸೂಟ್ ಸಿದ್ಧಪಡಿಸಿಟ್ಟುಕೊಂಡು ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿರುವ ಪಕ್ಷದೊಳಗಿನ ಬಂಡಾಯ ನಾಯಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಅವರನ್ನು ವಿಶ್ವಾಸಕ್ಕೆ ತಗೆದುಕೊಳ್ಳುವ ಮೂಲಕ ಬಿಜೆಪಿ ಸರ್ಕಾರಕ್ಕೆ ತಮ್ಮ ನಾಯಕತ್ವ ಅಭಾಧಿತ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
-
Chief Minister @BSYBJP called on Prime Minister @narendramodi today in New Delhi and discussed various issues regarding development projects in Karnataka.@PMOIndia pic.twitter.com/7Cc5DCwQIw
— CM of Karnataka (@CMofKarnataka) July 16, 2021 " class="align-text-top noRightClick twitterSection" data="
">Chief Minister @BSYBJP called on Prime Minister @narendramodi today in New Delhi and discussed various issues regarding development projects in Karnataka.@PMOIndia pic.twitter.com/7Cc5DCwQIw
— CM of Karnataka (@CMofKarnataka) July 16, 2021Chief Minister @BSYBJP called on Prime Minister @narendramodi today in New Delhi and discussed various issues regarding development projects in Karnataka.@PMOIndia pic.twitter.com/7Cc5DCwQIw
— CM of Karnataka (@CMofKarnataka) July 16, 2021
ಯಡಿಯೂರಪ್ಪ ಅವರು ಶುಕ್ರವಾರ ದೆಹಲಿಗೆ ತೆರಳುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲಿದೆ, ಹೊಸ ಮುಖ್ಯಮಂತ್ರಿಗಳನ್ನು ನೇಮಕ ಮಾಡಲಿದೆ, ಬಿಎಸ್ವೈ ಆಂಧ್ರ ರಾಜ್ಯಪಾಲರಾಗಿ ನೇಮಕಗೊಳ್ಳಲಿದ್ದಾರೆ ಎನ್ನುವ ಊಹಾಪೋಹದ ಸುದ್ದಿಗಳು ಹರಿದಾಡಿದ್ದವು.
ಅಷ್ಟೇ ಅಲ್ಲದೇ ಸಿಎಂ ವಿರೋಧಿ ಬಣದಿಂದಲೂ ಈ ತರಹದ ಸುದ್ದಿಗಳನ್ನು ವದಂತಿ ತರಹ ಹಬ್ಬಿಸಲಾಗಿತ್ತೆಂದು ಹೇಳಲಾಗುತ್ತಿದೆ. ಈ ಎಲ್ಲ ರಾಜಕೀಯ ವಿದ್ಯಮಾನಗಳ ಬಗ್ಗೆ ಅರಿವು ಇದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಾವೇ ಖುದ್ದಾಗಿ ಪ್ರದಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಮಾಡುವ ಮೂಲಕ ರಾಜಕೀಯ ವಿರೋಧಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ.
ಸಾಮಾನ್ಯವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಯೋಚನೆ ಬಿಜೆಪಿ ಹೈಕಮಾಂಡ್ಗೆ ಇದ್ದಿದ್ದರೆ ಪ್ರಧಾನಿ ಮೋದಿಯವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಭೇಟಿಗೆ ಅವಕಾಶವನ್ನೇ ನೀಡುತ್ತಿರಲಿಲ್ಲ. ಪ್ರಧಾನಿ ಮೋದಿಯವರು ಸಿಎಂ ಯಡಿಯೂರಪ್ಪನವರ ಜತೆ ಬಹಳ ನಗುಮುಖದಿಂದಲೇ ಮಾತುಕತೆ ನಡೆಸಿದ್ದಲ್ಲದೇ, ಇಬ್ಬರ ಭೇಟಿ ಫೋಟೊವನ್ನು ಮೋದಿ ಪ್ರಧಾನಿ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ತಾವು ಸಹ ಯಡಿಯೂರಪ್ಪನವರ ಬೆಂಬಲಕ್ಕೆ ಇರುವುದಾಗಿ ಸಂದೇಶ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಪ್ರಧಾನಿ ಭೇಟಿ ಬಳಿಕ ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಿದ್ದಾರೆ. ಇವರ ಜತೆಗಿನ ಭೇಟಿಯೂ ಫಲಪ್ರದವಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಿಎಂ ಕುರ್ಚಿ ಮತ್ತಷ್ಟು ಭದ್ರವಾದಂತೆಯೇ ಸರಿ. ಅಲ್ಲಿಗೆ ಬಿಜೆಪಿಯೊಳಗಿನ ಭಿನ್ನಮತೀಯರಿಗೆ ಸಿಎಂ ಪಕ್ಷದ ಹೈಕಮಾಂಡ್ ತಮ್ಮ ಬೆಂಬಲಕ್ಕಿದೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದಂತಾಗುತ್ತದೆ.
ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಬಿಎಸ್ವೈ: ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ ನೀಡಲು ಮನವಿ