ETV Bharat / state

ಚೆಕ್​ಬೌನ್ಸ್​ ಪ್ರಕರಣದಲ್ಲಿ ನೆರೆಪೀಡಿತ ಪ್ರದೇಶದ ರೈತರನ್ನು ಬಂಧಿಸುವಂತಿಲ್ಲ: ಸಿಎಂ ಖಡಕ್​ ಸೂಚನೆ

ನೆರೆಪೀಡಿತ ಪ್ರದೇಶಗಳಲ್ಲಿ ಚೆಕ್​ಬೌನ್ಸ್ ಪ್ರಕರಣಗಳ ಆರೋಪದ ಮೇಲೆ ರೈತರನ್ನು ಬಂಧಿಸದಂತೆ ಕ್ರಮ‌ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಸಿಎಂ ಖಡಕ್​ ಸೂಚನೆ
author img

By

Published : Nov 12, 2019, 7:56 PM IST

ಬೆಂಗಳೂರು: ನೆರೆಪೀಡಿತ ಪ್ರದೇಶಗಳಲ್ಲಿ ಚೆಕ್​ಬೌನ್ಸ್ ಪ್ರಕರಣಗಳ ಆರೋಪದ ಮೇಲೆ ರೈತರನ್ನು ಬಂಧಿಸದಂತೆ ಕ್ರಮ‌ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಅವರ ನೇತೃತ್ವದಲ್ಲಿ ರೈತರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು. ನೆರೆಪೀಡಿತ ಪ್ರದೇಶಗಳಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಆಲಿಸಿದರು.

ಸಭೆಯ ಪ್ರಮುಖ ಹಕ್ಕೊತ್ತಾಯಗಳು:

  • ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 10 ಲಕ್ಷಕ್ಕಿಂತ ಕಡಿಮೆಯಾಗದ ರೀತಿಯಲ್ಲಿ ಗುಣಮಟ್ಟದ ಮನೆ ನಿರ್ಮಾಣ ಮಾಡಬೇಕು.
  • ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ. ನೀಡಬೇಕು
  • ಪ್ರವಾಹದಿಂದ ನಷ್ಟವಾದ ಆಯಾಯ ಬೆಳೆಗಳಿಗೆ ಅನುಗುಣವಾಗಿ ಡಾ.ಸ್ವಾಮಿನಾಥನ್ ವರದಿಯಂತೆ ನಷ್ಟ ತುಂಬಿಕೊಡಬೇಕು.
  • ಪ್ರವಾಹದಿಂದ ಪ್ರತಿ ವರ್ಷ ಮುಳುಗಡೆಯಾಗುವ ಹಳ್ಳಿಗಳನ್ನು ಸ್ಥಳಾಂತರ ಮಾಡಬೇಕು.
  • ಪ್ರವಾಹದಿಂದ ಸಂಪೂರ್ಣವಾಗಿ ಹಾಳಾಗಿರುವ ಭೂಮಿಗೆ ಪರ್ಯಾಯ ಭೂಮಿ ನೀಡಬೇಕು.
  • ಬರಗಾಲ ಮತ್ತು ಪ್ರವಾಹದಿಂದ ತತ್ತರಿಸಿರುವ ಸಮಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಾತಿಗೆ ಕಡಿವಾಣ ಹಾಕಬೇಕು.
  • ಬರಗಾಲ ಪೀಡಿತ ರೈತರ ಜಮೀನುಗಳಿಗೆ ಎಕರೆಗೆ 25 ಸಾವಿರ ರೂ. ನೀಡಬೇಕು.
  • ಎಲ್ಲಾ ರಾಷ್ಟ್ರೀಯ ಬ್ಯಾಂಕ್​ಗಳ ಸಾಲ ಮನ್ನಾ ಮಾಡಬೇಕು.
  • ನೀರಾವರಿ ಯೋಜನೆಗಳಿಗೆ ಬಜೆಟ್​ನಲ್ಲಿ 1 ಲಕ್ಷ ಕೋಟಿ ನಿಗದಿ ಮಾಡಬೇಕು.
  • 60 ವರ್ಷ ತುಂಬಿದ ಪ್ರತಿ ರೈತರಿಗೆ ಪ್ರತಿ ತಿಂಗಳು 10 ಸಾವಿರ ಮಾಸಾಶನ ನೀಡಬೇಕು.
  • ಬೆಳೆ ವಿಮೆಯನ್ನು ವೈಜ್ಞಾನಿಕವಾಗಿ ಮಾಡಬೇಕು.
  • ಒಂದು ಲೀಟರ್ ಹಾಲಿಗೆ 50 ರುಪಾಯಿ ನಿಗದಿ ಮಾಡಬೇಕು.
  • ಡಾ.ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕು.
  • ರೈತರ ಮೇಲೆ ಹಾಕಿರುವ ಎಲ್ಲಾ ಕೇಸ್​ಗಳನ್ನು ವಾಪಸ್ ಪಡೆಯಬೇಕು.
  • ಪ್ರತಿ ಟನ್ ಕಬ್ಬಿಗೆ 3500 ರೂ. ಗಳನ್ನು ನಿಗದಿ ಮಾಡಬೇಕು.
  • ಎತ್ತಿನಹೊಳೆ ನೀರಾವರಿ ಯೋಜನೆ ಹಾಗೂ ಮಹದಾಯಿ ನೀರಾವರಿ ಯೋಜನೆಯ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಬೇಕು.
  • ಒಂದು ಕೆಜಿ ರೇಷ್ಮೆ ಗೂಡಿಗೆ 500 ರೂ.ಗಳ ಬೆಲೆ ನಿಗದಿ ಮಾಡಬೇಕು.
  • ರೈತ ಚಳವಳಿ ವೇಳೆ ಗೋಲಿಬಾರ್​ನಲ್ಲಿ ಮೃತಪಟ್ಟ ರೈತನ ಕುಟುಂಬಕ್ಕೆ 10,000 ರೂ.ಗಳನ್ನು ಮಾಸಾಶನ ನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು.
  • ಹೈನುಗಾರಿಕೆ, ಹೂವು ತರಕಾರಿ ಮತ್ತು ಇತರೆ ಗೃಹ ಕೈಗಾರಿಕೆಗಳಿಗೆ ಶೇ. 75 ರಷ್ಟು ಸಹಾಯಧನ ನೀಡಬೇಕು.

ಇವಿಷ್ಟು ಸೇರಿದಂತೆ ಇತರೆ ಹಲವು ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಬಳಿ ರೈತ ಮುಖಂಡರು ಚರ್ಚೆ ನಡೆಸಿದರು.
ರೈತರ ಮನವಿಯನ್ನು ಸ್ವೀಕಾರ ಮಾಡಿದ ಮುಖ್ಯಮಂತ್ರಿಗಳು ನಿಮ್ಮ ಸಲಹೆ ಸೂಚನೆಗಳನ್ನು ಪರಿಗಣಿಸುತ್ತೇನೆ. ನಮ್ಮ ಸರ್ಕಾರದ ಇತಿಮಿತಿಗಳಲ್ಲಿ ಎಷ್ಟೋ ಸಾಧ್ಯವೋ ಅಷ್ಟು ಬೇಗ ಬಗೆಹರಿಸುತ್ತೇನೆ ಎಂದು ರೈತರಿಗೆ ಭರವಸೆ ‌ನೀಡಿದರು.

ನಂತರ ಬೆಳಗಾವಿ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ನೆರೆ ಸಂತ್ರಸ್ತರಿಂದ ಕೆಲವರು ಲಂಚ ಪಡೆಯುತ್ತಿರುವ ಮಾಹಿತಿ ಬಂದಿದೆ. ಕೂಡಲೇ ಕ್ರಮ ಕೈಗೊಂಡು ವರದಿ ನೀಡುವಂತೆ ರೈತರ ಸಮ್ಮುಖದಲ್ಲಿಯೇ ಸೂಚನೆ ನೀಡಿದರು.

Intro:

ಬೆಂಗಳೂರು: ನೆರೆಪೀಡಿತ ಪ್ರದೇಶಗಳಲ್ಲಿ ಚೆಕ್ ಬೌನ್ಸ್ ಪ್ರಕರಣಗಳ ಆರೋಪದ ಮೇಲೆ ಯಾವುದೇ ರೈತರನ್ನು ಬಂಧಿಸದಂತೆ ಕ್ರಮ‌ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಅವರ ನೇತೃತ್ವದ ರೈತರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು.ನೆರೆಪೀಡಿತ ಪ್ರದೇಶಗಳಲ್ಲಿ ರೈತರ ಎದುರಿಸುತ್ತಿರುವ ಸಂಕಷ್ಟವನ್ನು ಆಲಿಸಿದರು.

ಸಭೆಯ ಪ್ರಮುಖ ಹಕ್ಕೋತ್ತಾಯಗಳು

• ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 10 ಲಕ್ಷಕ್ಕೆ ಕಡಿಮೆಯಾಗದ ರೀತಿಯಲ್ಲಿ ಗುಣಮಟ್ಟದ ಮನೆ ನಿರ್ಮಾಣ ಮಾಡಬೇಕು

• ಪ್ರವಾಹದಲ್ಲಿ ಪ್ರಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂಗಳನ್ನು ನೀಡಬೇಕು

• ಪ್ರವಾಹದಿಂದ ನಷ್ಟವಾದ ಆಯಾಯ ಬೆಳಗಳಿಗೆ ಅನುಗುಣವಾಗಿ ಡಾ.ಸ್ವಾಮಿನಾಥನ್ ವರದಿಯಂತೆ ನಷ್ಟ ತುಂಬಿಕೊಡಬೇಕು

• ಪ್ರವಾದಿಂದ ಪ್ರತಿ ವರ್ಷ ಮುಳುಗಡೆಯಾಗುವ ಹಳ್ಳಿಗಳನ್ನು ಸ್ಥಾಳಾಂತರ ಮಾಡಬೇಕು

• ಪ್ರವಾಹದಿಂದ ಸಂಪೂರ್ಣವಾಗಿ ಹಾಳಾಗಿರುವ ಭೂಮಿಗೆ ಪರ್ಯಾಯ ಭೂಮಿ ನೀಡಬೇಕು

• ಬರಗಾಲ ಮತ್ತು ಪ್ರವಾಹದಿಂದ ತತ್ತರಿಸಿರುವ ಸಮಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಾತಿಗೆ ಕಡಿವಾಣ ಹಾಕಬೇಕು

• ಬರಗಾಲ ಪೀಡಿತ ರೈತರ ಜಮೀನುಗಳಿಗೆ ಎಕರೆಗೆ 25 ಸಾವಿರ ನೀಡಬೇಕು

• ಎಲ್ಲಾ ರಾಷ್ಟ್ರೀಯ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು

• ನೀರಾವರಿ ಯೋಜನೆಗಳಿಗೆ ಬಜೆಟ್ ನಲ್ಲಿ 1 ಲಕ್ಷ ಕೋಟಿ ನಿಗದಿ ಮಾಡಬೇಕು

• 60 ವರ್ಷ ತುಂಬಿದ ಪ್ರತಿ ರೈತರಿಗೆ ಪ್ರತಿ ತಿಂಗಳು 10 ಸಾವಿರ ಮಾಸಾಶನ ನೀಡಬೇಕು

• ಬೆಳೆ ವಿಮೆಯನ್ನು ವೈಜ್ನಾನಿಕ ವಾಗಿ ಮಾಡಬೇಕು..

• ಒಂದು ಲೀಟರ್ ಹಾಲಿಗೆ 50 ರುಪಾಯಿ ನಿಗಧಿ ಮಾಡಬೇಕು

• ಡಾ.ಸ್ವಾಮಿನಾಥನ್ ವರದಿಯಂತೆ ಕೃಷ್ಇ ಉತ್ಪನ್ನಗಳಿಗೆ ಬೆಲೆ ನಿಗಧಿ ಮಾಡಬೇಕು

• ರೈತರ ಮೇಲೆ ಹಾಕಿರುವ ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆಯಬೇಕು

• ಪ್ರತಿ ಟನ್ ಕಬ್ಬಿಗೆ 3.500 ರೂ ಗಳನ್ನು ನಿಗಧಿ ಮಾಡಬೇಕು

• ಎತ್ತಿನಹೊಳೆ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕು

• ಮಹದಾಯಿ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕು

• ಒಂದು ಕೆಜಿ ರೇಷ್ಮೆ ಗೂಡಿಗೆ 500 ರೂಗಳ ಬೆಲೆ ನಿಗಧಿ ಮಾಡಬೇಕು.

• ರೈತ ಚಳವಳಿ ಯಲ್ಲಿ ಗೋಲಿಬಾರ್ ನಲ್ಲಿ ಮೃತಪಟ್ಟ ರೈತನ ಕುಟುಂಬಕ್ಕೆ 10.000 ರೂಗಳನ್ನು ಮಾಸಾಶನ ನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು

• ಕುರಿ ಕೋಳಿ ಹಂದಿ ಮೀನು ಹೈನುಗಾರಿಕೆ ಹೂವು ತರಕಾರಿ ಮತ್ತು ಇತರೆ ಗೃಹ ಕೈಗಾರಿಕೆಗಳಿಗೆ ಶೇ. 75 ರಷ್ಟು ಸಹಾಯಧನ ನೀಡಬೇಕು

ಇವಿಷ್ಟು ಸೇರಿದಂತೆ ಇತರೆ ಹಲವು ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಬಳಿ ರೈತ ಮುಖಂಡರು ಚರ್ಚೆ ನಡೆಸಿದರು
ರೈತರ ಮನವಿಯನ್ನು ಸ್ವೀಕಾರ ಮಾಡಿದ ಮುಖ್ಯಮಂತ್ರಿಗಳು ನಿಮ್ಮ ಸಲಹೆ ಸೂಚನೆಗಳನ್ನು ಪರಿಗಣಿಸುತ್ತೇನೆ. ನಮ್ಮ ಸರ್ಕಾರದ ಇತಿಮಿತಿಗಳಲ್ಲಿ ಎಷ್ಟೋ ಸಾಧ್ಯವೋ ಅಷ್ಟು ಆದಷ್ಟು ಬೇಗ ಬಗೆಹರಿಸುತ್ತೇನೆ ಅಂತ ರೈತರಿಗೆ ಭರವಸೆ ‌ನೀಡಿದರು.ಅಷ್ಟೇ ಅಲ್ಲದೆ ಚೆಕ್ ಬೌನ್ಸ್ ಗಳಲ್ಲಿ ಯಾವುದೇ ರೈತರನ್ನು ಬಂಧಿಸದಂತೆ ಕ್ರಮ‌ ಕೈಗೊಳ್ಳಬೇಕು ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಬೆಳಗಾವಿ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ನೆರೆ ಸಂತ್ರಸ್ತರಿಂದ ಕೆಲವರು ಲಂಚ ಪಡೆಯುತ್ತಿರುವ ಮಾಹಿತಿ ಬಂದಿದೆ ಕೂಡಲೇ ಕ್ರಮ ಕೈಗೊಂಡು ವರದಿ ನೀಡುವಂತಹ ರೈತರ ಸಮ್ಮುಖದಲ್ಲಿಯೇ ಸೂಚನೆ ನೀಡಿದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.