ETV Bharat / state

ಭಾವನಾತ್ಮಕ ಮೌಲ್ಯಗಳಿರುವ ಗಡಿ ಗ್ರಾಮಗಳ ಹೆಸರು ಬದಲಾವಣೆ ಬೇಡ: ಕೇರಳ ಸಿಎಂಗೆ ಬಿಎಸ್​ವೈ ಪತ್ರ - ಕಾಸರಗೋಡು ಹೆಸರು ಬದಲಾವಣೆ ವಿಚಾರವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಕರ್ನಾಟಕ ಸಿಎಂ ಯಡಿಯೂರಪ್ಪ ಪತ್ರ

ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಹಳ್ಳಿಗಳ ಹೆಸರುಗಳು ಜನರ ಭಾವನೆಗಳಿಗೆ ಬಹಳ ಹತ್ತಿರದಲ್ಲಿವೆ ಮತ್ತು ಅನಾದಿ ಕಾಲದಿಂದಲೂ ಭಾವನಾತ್ಮಕ ಮೌಲ್ಯವನ್ನು ಹೊಂದಿವೆ. ಆದ ಕಾರಣ ಆ ಗ್ರಾಮಗಳ ಹೆಸರನ್ನು ಕನ್ನಡದಿಂದ ಮಲಯಾಳಂ ಭಾಷೆಗೆ ಬದಲಾಯಿಸದಿರಲು ವಿನಂತಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರದ ಮೂಲಕ ಮನವಿ ಮಾಡಿದ್ದಾರೆ.

CM BS Yedyurappa letter to Kerala CM Pinarai Vijayan on Kasaragod issue
ಕೇರಳ ಮುಖ್ಯಮಂತ್ರಿಗೆ ಸಿಎಂ ಬಿಎಸ್​ವೈ ಪತ್ರ
author img

By

Published : Jun 29, 2021, 7:08 AM IST

ಬೆಂಗಳೂರು: ಕೇರಳ ರಾಜ್ಯದ ಮಂಜೇಶ್ವರ ಮತ್ತು ಕಾಸರಗೋಡು ತಾಲ್ಲೂಕುಗಳ ಗ್ರಾಮಗಳ ಹೆಸರನ್ನು ಕನ್ನಡದಿಂದ ಮಲಯಾಳಂ ಭಾಷೆಗೆ ಬದಲಾಯಿಸದಿರಲು ವಿನಂತಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರದ ಮೂಲಕ ಮನವಿ ಮಾಡಿದ್ದಾರೆ.

CM BS Yedyurappa letter to Kerala CM Pinarai Vijayan on Kasaragod issue
ಕೇರಳ ಮುಖ್ಯಮಂತ್ರಿಗೆ ಸಿಎಂ ಬಿಎಸ್​ವೈ ಪತ್ರ

ಬಿಎಸ್​ವೈ ಪತ್ರದಲ್ಲೇನಿದೆ?:

ನೆರೆ ರಾಜ್ಯದ ಗಡಿಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ನೆಲೆಗೊಂಡಿರುವ ಮಂಜೇಶ್ವರ ಮತ್ತು ಕಾಸರಗೋಡು ತಮ್ಮದೇ ಆದ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಐತಿಹಾಸಿಕ ಹಿನ್ನೆಲೆಗೆ ಹೆಸರುವಾಸಿಯಾಗಿದೆ. ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಹಳ್ಳಿಗಳ ಹೆಸರುಗಳು ಜನರ ಭಾವನೆಗಳಿಗೆ ಬಹಳ ಹತ್ತಿರದಲ್ಲಿವೆ ಮತ್ತು ಅನಾದಿ ಕಾಲದಿಂದಲೂ ಭಾವನಾತ್ಮಕ ಮೌಲ್ಯವನ್ನು ಹೊಂದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶಗಳ ನಿವಾಸಿಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಯಾವುದೇ ಅವಕಾಶವನ್ನು ನೀಡದೆ ಕೆಲವು ಹಳ್ಳಿಗಳ ಹೆಸರನ್ನು ಬದಲಾಯಿಸಲು ಸ್ಥಳೀಯ ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎಂಬುದು ಬಹಳ ಆಶ್ಚರ್ಯಕರವಾಗಿದೆ ಎಂದಿದ್ದಾರೆ.

ಹಳ್ಳಿಗಳ ಹೆಸರುಗಳ ಬದಲಾವಣೆಯು ಜನರ ಭಾವನೆಗಳಿಗೆ ಧಕ್ಕೆ ತರಲಿದೆ. ಇದು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ಕನ್ನಡ ಮತ್ತು ತುಳು ಸಂಸ್ಕೃತಿಯನ್ನು ಸಹ ನಾಶಪಡಿಸುತ್ತದೆ. ಕನ್ನಡದಲ್ಲಿರುವ ಈ ಹಳ್ಳಿಗಳ ಹೆಸರುಗಳನ್ನು ಬದಲಾಯಿಸುವ ಕಾರ್ಯವು ಅಲ್ಲಿನ ಸ್ಥಳೀಯ ಸಮುದಾಯಕ್ಕೆ ತೀವ್ರ ದುಃಖವನ್ನು ಉಂಟುಮಾಡುವ ಜೊತೆಗೆ ಇದು ಕನ್ನಡ ಮತ್ತು ಮಲಯಾಳಂ ಮಾತನಾಡುವ ಜನರಲ್ಲಿ ಇರುವ ಸಾಮರಸ್ಯ, ಸೌಹಾರ್ದತೆ ಮತ್ತು ಸಹೋದರತ್ವದ ಮೇಲೆ ಪರಿಣಾಮ ಬೀರಬಹುದು ಎಂದು ಪತ್ರದ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.

ಅಸ್ತಿತ್ವದಲ್ಲಿರುವ ಹೆಸರುಗಳು ಪ್ರಧಾನವಾಗಿ ಕನ್ನಡ ಮತ್ತು ತುಳು ಭಾಷೆಗಳಿಂದ ಬಂದಿವೆ. ಕೆಲವು ಸ್ಥಳಗಳಲ್ಲಿ ಇದು ಕನ್ನಡ ಮತ್ತು ತುಳು ಹೆಸರುಗಳ ಮಿಶ್ರಣವಾಗಿದೆ. ಈ ಹಳ್ಳಿಗಳ ಕೆಲವು ಹೆಸರುಗಳು ಹಲವಾರು ಶತಮಾನಗಳ ಸುದೀರ್ಘ ಇತಿಹಾಸವನ್ನು ಹೊಂದಿವೆ. ಹಾಗಾಗಿ ಈ ಗ್ರಾಮಗಳ ಹೆಸರುಗಳಲ್ಲಿ ಬದಲಾವಣೆ ಮಾಡುವ ನಿರ್ಧಾರವನ್ನು ಸ್ಥಗಿತಗೊಳಿಸುವಂತೆ ಕೋರಿ ವಿವಿಧ ಕನ್ನಡ ಪರ ಸಂಸ್ಥೆಗಳ ಪ್ರತಿನಿಧಿಗಳು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಾತಿನಿಧ್ಯ ನೀಡಿದ್ದಾರೆ‌.ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳ ಕೆಲವು ಗ್ರಾಮಗಳ ಹೆಸರನ್ನು ಬದಲಾಯಿಸುವ ಉದ್ದೇಶಿತ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿನಂತಿಸಿದ್ದಾರೆ.

ಕೇರಳ ಸರ್ಕಾರವು ಹಳ್ಳಿಗಳ ಕನ್ನಡ ಹೆಸರನ್ನು ಬದಲಾವಣೆ ಮಾಡುವ ಉದ್ದೇಶವನ್ನು ಹೊಂದಿಲ್ಲದಿರಬಹುದು. ಈ ಹಳ್ಳಿಗಳ ಹೆಸರುಗಳ ಬದಲಾವಣೆ ನಿರ್ಧಾರ ಏಕಪಕ್ಷೀಯವಾಗಿರಬಹುದು. ಈ ಬಗ್ಗೆ ಪರಿಶೀಲಿಸಬೇಕು, ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳ ಹಳ್ಳಿಗಳ ಹೆಸರನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಅಲ್ಲಿನ ಕನ್ನಡ ಮಾತನಾಡುವ ಜನರನ್ನು ಸಂತೋಷಪಡಿಸಬಹುದು ಅಂತ ನಾನು ಭಾವಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಪತ್ರದ ಮೂಲಕ ಮನವಿ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.