ಬೆಂಗಳೂರು: ಮುಂದಿನ 20 ವರ್ಷವನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರು ಮಿಷನ್ 2022 ರೂಪಿಸಿದ್ದು, ಈ ಯೋಜನೆಯಡಿ ರೂಪಿಸುವ ಕಾರ್ಯಕ್ರಮಗಳು ಎರಡು ವರ್ಷದಲ್ಲಿ ಪೂರ್ಣವಾಗಲಿವೆ ಅದಕ್ಕೆ ಹಣಕಾಸು ಕೊರತೆ ಎದುರಾಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಎರಡು ವರ್ಷದ ಮಿಷನ್ 2022 ರ ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಬೆಂಗಳೂರು ಪ್ರಗತಿ ಪಥದಲ್ಲಿ ಸದಾ ಮುಂದಿದೆ, ಕೆಂಪೇಗೌಡರ ದೂರದೃಷ್ಟಿ ಫಲವಾಗಿ ಐದು ಶತಮಾನದ ಹಿಂದೆ ಮಹಾನಗರ ಅಸ್ತಿತ್ವಕ್ಕೆ ಬಂತು. ಪ್ರಗತಿಯ ಮುನ್ನಡೆಯಲ್ಲಿ ಮುಂಚೂಣಿಯಲ್ಲಿದ್ದು, 21ನೇ ಶತನಮಾನದಲ್ಲಿ ಮುಂದಿನ 20 ವರ್ಷದಲ್ಲಿ ಹೇಗಿರಬೇಕು ಎನ್ನುವ ಕಲ್ಪನೆಯಲ್ಲಿ ವಿಷನ್ 2022 ರ ನೀಲ ನಕ್ಷೆ ರೂಪಿಸಲಾಗಿದೆ ಎಂದರು.
ಸಿಎಂ ಆಗಿ ಮೊದಲ ದೆಹಲಿ ಭೇಟಿ ವೇಳೆಯಲ್ಲಿಯೇ ಬೆಂಗಳೂರು ಮಹಾನಗರ ವಿಷಯ ಪ್ರಸ್ತಾಪಿಸಿದ್ದೆ, ಪ್ರತಿ ದೆಹಲಿ ಭೇಟಿಯಲ್ಲೂ ಬೆಂಗಳೂರು ನಗರದ ಉದ್ಯಮಶೀಲತ, ಐಟಿಬಿಟಿ, ವಿಜ್ಞಾನ ತಂತ್ರಜ್ಞಾನ, ಆವಿಷ್ಕಾರ ಕೇಂದ್ರ, ಉನ್ನತ ಅಧ್ಯಯನ ಕೇಂದ್ರಗಳ, ಬಗ್ಗೆ ಪ್ರಸ್ತಾಪಿಸಿ, ಪಿಎಂ ಸಲಹೆ ನೀಡಿದ್ದರು. ಪ್ರಧಾನಿ ಮೋದಿ ಅವರಿಂದ ಬಂದ ಉತ್ತೇಜನಾಕರಿ ಮಾತುಗಳಿಂದ ಪ್ರಭಾವಿತನಾಗಿ ಅಭಿವೃದ್ಧಿ ದಿಸೆಯಲ್ಲಿ ಬೆಂಗಳೂರಿನ ಸ್ಥಾನಕ್ಕೆ ದಕ್ಕೆಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದು, ಬೆಂಗಳೂರು ಪ್ರಗತಿ ಸರ್ಕಾರದ ಆಧ್ಯತೆ ವಿಷಯವಾಗಿದೆ, ವಿಜ್ಞಾನ ರಾಜಧಾನಿ, ಐಟಿಯ ಪರಮೋಚ್ಛ ನೆಲೆ, ಸಿಲಿಕಾನ್ ವ್ಯಾಲಿಗೆ ಮುಕ್ಕಾಗದಂತೆ ಯೋಜನೆ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಸಂಚಾರ ದಟ್ಟಣೆ ಸುಧಾರಣೆ, ಹಸಿರು ಬೆಂಗಳೂರು, ಸ್ವಚ್ಛ ಪರಿಸರ ನಗರವಾಗಿ ಮಾರ್ಪಡಿಸುವುದು, ಜನರ ಕುಂದುಕೊರತೆಗಳನ್ನು ಆಲಿಸುವುದು, ಜನ ಜೀವನ ಸರಳೀಕರಣಗೊಳಿಸುವುದು ನಮ್ಮಗುರಿ ಎಂದು ತಿಳಿಸಿದರು.
ಮುಂದಿನ ಎರಡು ವರ್ಷದಲ್ಲಿ ಮಹಾನಗರಕ್ಕೆ ಎದುರಾಗಲಿರುವ ಪ್ರಮುಖ ಸವಾಲು, ಸಮಸ್ಯೆಗಳನ್ನು ಕೇಂದ್ರೀಕರಿಸಿ ಯೋಜನೆ ರೂಪಿಸಲಾಗುತ್ತದೆ. ಬೆಂಗಳೂರನ್ನು ಎಲ್ಲ ಆಯಾಮಗಳಲ್ಲಿಯೂ ವಿಶ್ವದರ್ಜೆಯ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆ ನಮ್ಮದಾಗಿದೆ ಎಂದರು.
ಸುಗಮ ಸಂಚಾರಕ್ಕೆ ಅತ್ಯುತ್ತಮ ರಸ್ತೆ ನಿರ್ವಹಣೆ, ಸ್ಮಾರ್ಟ್ ಸಂಚಾರ, ನನ್ನ ಕಸ ನನ್ನ ಜವಾಬ್ದಾರಿ, ಹಸಿರು ಬೆಂಗಳೂರಿಗೆ ಹಸಿರು ನೆರೆಹೊರೆ, ಜಲಮೂಲಗಳ ಶುದ್ಧೀಕರಣ ಹಾಗು ಸಂರಕ್ಷಣೆ, ಜನ ಸಂಪರ್ಕಕ್ಕೆ ಏಕೀಕೃತ ಜನಸಂಪರ್ಕ ವೇದಿಕೆ, ಬೆಂಗಳೂರಿಗೊಂದು ಬೆಳಕಿಂಡಿ ಮೂಲಕ ಬೆಂಗಳೂರಿನ ಸರ್ವಾಂಗೀಣ ಪ್ರಗತಿಯ ದೂರದೃಷ್ಠಿ ಹೊಂದಿರುವ ಕಾರ್ಯಕ್ರಮ, ವಿಶ್ವದರ್ಜೆಯ ನಗರವಾಗಿ ಬೆಂಗಳೂರು ನಗರ ನಿರ್ಮಾಣದ ಕನಸು ನನಸಾಗಿಸುವಲ್ಲಿ ಬೆಂಗಳೂರು ಮಿಷನ್ 2022 ಮಹತ್ವಪೂರ್ಣವಾದ ಹೆಜ್ಜೆಯಾಗಿದೆ.
ಇದೇ ವೇಳೆ ಡಿಸಿಎಂ ಅಶ್ವತ್ಥನಾರಾಯಣ್, ಕಂದಾಯ ಸಚಿವ ಆರ್.ಅಶೋಕ್,ಶಿಕ್ಷಣ ಸಚಿವ ಸುರೇಶ್ ಕುಮಾರ್, ಬೈರತಿ ಬಸವರಾಜ್, ಗೋಪಾಲಯ್ಯ ಭಾಗಿ, ಸಂಸದರು, ಶಾಸಕರು ಭಾಗಿಯಾಗಿದ್ದರು.
ಓದಿ...ಮಹಿಳೆಯೊಂದಿಗಿನ ದೀರ್ಘಕಾಲ ದೈಹಿಕ ಸಂಬಂಧ ಅತ್ಯಾಚಾರವಲ್ಲ: ಹೈಕೋರ್ಟ್ನಿಂದ ಮಹತ್ವದ ತೀರ್ಪು!