ಬೆಂಗಳೂರು: ವಿಧಾನಸೌಧದಲ್ಲಿ ನಡೆಯುತ್ತಿರುವ ಡಿಸಿಗಳ ಸಭೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಭೆ ವೇಳೆ ಮೃತಪಟ್ಟವರ ಹೆಸರಲ್ಲಿ ವಿವಿಧ ಪಿಂಚಣಿಗಳ ದುರ್ಬಳಕೆ ಪ್ರಕರಣ ಪತ್ತೆಯಾಗಿದೆ. ಈ ವೇಳೆ ಮೃತಪಟ್ಟವರ ಹೆಸರಲ್ಲಿ ಪಿಂಚಣಿ ದುರ್ಬಳಕೆ ನಿಲ್ಲಿಸಲು ತಾಕೀತು ಮಾಡಿದ ಅವರು, ಪಿಂಚಣಿ ರೂಪದಲ್ಲಿ 300 ಕೋಟಿ ರೂ. ಹಣ ದುರ್ಬಳಕೆಯಾಗಿದೆ. ಇದನ್ನು ಒಂದು ತಿಂಗಳೊಳಗೆ ಸರಿಪಡಿಸಿ ಎಂದು ಸೂಚನೆ ನೀಡಿದ್ದಾರೆ.
72 ಲಕ್ಷ ಪಿಂಚಣಿ ಫಲಾನುಭವಿಗಳಿದ್ದು, ನಿಜವಾದ ಫಲಾನುಭವಿಗಳಿಗೆ ಪಿಂಚಣಿ ತಲುಪಿಸಲು ವ್ಯವಸ್ಥೆ ಮಾಡಬೇಕು ಎಂದಿರುವ ಅವರು, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವಲ್ಲಿ ಆಗುತ್ತಿರುವ ವಿಳಂಬಕ್ಕೂ ತರಾಟೆ ತೆಗೆದುಕೊಂಡಿದ್ದಾರೆ.
ಓದಿ: ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಬಲ ಪ್ರದರ್ಶಿಸಿದ್ರೇ ಶಾಸಕಿ ಸೌಮ್ಯರೆಡ್ಡಿ!?
ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಯಾಕೆ ವಿಳಂಬ? ಈ ವಿಷಯದಲ್ಲಿ ಸಾಕಷ್ಟು ದೂರುಗಳು ಬರ್ತಿವೆ. ಮೊದಲು ಇದನ್ನು ಸರಿಪಡಿಸಿ ಎಂದು ತಾಕೀತು ಮಾಡಿದರು. ಗ್ರಾಮೀಣ ಭಾಗದಲ್ಲಿ ಸ್ಮಶಾನಗಳಿಗೆ ಜಾಗದ ಸಮಸ್ಯೆ ನಿವಾರಿಸುವಂತೆ ಸೂಚಿಸಿದ ಅವರು, ಸ್ಮಶಾನಗಳಿಗೆ ಜಾಗ ಇಲ್ಲ, ಎಸ್ಸಿ-ಎಸ್ಟಿ ಸಮುದಾಯಗಳಿಗೆ ಈ ಸಮಸ್ಯೆ ಹೆಚ್ಚಾಗಿದೆ, ಇದರತ್ತ ಗಮನ ಕೊಡಿ. ನದಿ ಮೂಲಗಳಿಂದ ಕುಡಿಯುವ ನೀರು ಸೌಕರ್ಯ ಒದಗಿಸಿ ಎಂದು ಸೂಚಿಸಿದ್ದಾರೆ.