ETV Bharat / state

Unlock 3.O: ನಾಳೆ ಚಿತ್ರಮಂದಿರ, ಮಾಲ್​, ಸ್ವಿಮ್ಮಿಂಗ್​ ಪೂಲ್​ ಆರಂಭಕ್ಕೆ ಸಿಗುತ್ತಾ ಗ್ರೀನ್​ ಸಿಗ್ನಲ್?​ - ಅನ್​ಲಾಕ್ ಸಂಬಂಧ ಸಭೆ

ಅನ್​ಲಾಕ್ 3.O ಸಂಬಂಧ ನಾಳೆ ಸಂಜೆ 5.30ಕ್ಕೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಕೋವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ಮಖ್ಯಮಂತ್ರಿ ಬಿ ಎಸ್​​ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.

cm bs yadiyurappa
ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ
author img

By

Published : Jul 1, 2021, 3:06 PM IST

ಬೆಂಗಳೂರು: ಕೋವಿಡ್ ಎರಡನೇ ಅಲೆ ಹಿನ್ನೆಲೆ ಜಾರಿಗೊಳಿಸಲಾಗಿದ್ದ ಲಾಕ್​ಡೌನ್ ನಿರ್ಬಂಧ ಸಡಿಲಿಕೆಯ ಅನ್​ಲಾಕ್ 2.O ಜುಲೈ 5ಕ್ಕೆ ಅಂತ್ಯಗೊಳ್ಳಲಿದೆ. ಅನ್​ಲಾಕ್ 3.O ಕುರಿತು ಕೋವಿಡ್ ಉಸ್ತುವಾರಿ ಸಚಿವರು ಹಾಗು ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಾಳೆ ಮಹತ್ವದ ಸಭೆ ನಡೆಸಲಿದ್ದಾರೆ.

ಶುಕ್ರವಾರ ಸಂಜೆ 5.30ಕ್ಕೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಕೋವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದು, ಮೂರನೇ ಹಂತದ ಲಾಕ್​ಡೌನ್​ ಸಡಿಲಿಕೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಯಾವೆಲ್ಲ ವರ್ಗಕ್ಕೆ ಲಾಕ್​ಡೌನ್ ಸಡಲಿಕೆ‌ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: ತಪ್ಪು ಗ್ರಹಿಕೆಯಿಂದ ಲಸಿಕೆ ಪಡೆಯಲು ಹಿಂದೇಟು: ಸಿದ್ದರಾಮಯ್ಯ

ಮಾಲ್​ಗಳ ಆರಂಭಕ್ಕೆ ಒತ್ತಡ ಬಂದಿದ್ದು, ಜಿಮ್​ಗಳಿಗೆ ನೀಡಿದಂತೆ ಸ್ವಿಮ್ಮಿಂಗ್ ಪೂಲ್​ಗಳ ಆರಂಭಕ್ಕೂ ಅವಕಾಶ ನೀಡಬೇಕು ಎಂಬ ಬೇಡಿಕೆ ಬಂದಿದೆ. ಸಿನಿಮಾ ಮಂದಿರಗಳ ಆರಂಭ, ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ, ಚರ್ಚ್, ಮಸೀದಿ ಸೇರಿ ಎಲ್ಲ ಸಮುದಾಯವರ ಪ್ರಾರ್ಥನಾ ಸ್ಥಳಗಳಿಗೂ ಆ ಸಮುದಾಯದ ಜನರ ಪ್ರವೇಶಕ್ಕೆ ಅವಕಾಶ, ವೀಕೆಂಡ್ ಕರ್ಫ್ಯೂ ತೆರವು, ರಾತ್ರಿ ಕರ್ಫ್ಯೂ ಅವಧಿ ಕಡಿತ, ವ್ಯಾಪಾರ ವಹಿವಾಟಿಗೆ ಸಂಜೆ 5ರ ಮಿತಿಯನ್ನು 7ಕ್ಕೆ ವಿಸ್ತರಣೆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.