ETV Bharat / state

ಅಧಿಕಾರ ವಿಕೇಂದ್ರೀಕರಣ ಆಗಬೇಕು.. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದ ಸಿಎಂ - CM Basavaraja Bommai speak about power decentralization

ಪ್ರಥಮ ಬಾರಿ ವಿಶೇಷವಾಗಿ ಸಿಇಒಗಳ ಜೊತೆ ಸಭೆ ಆಗಿದೆ. ಡಿಸಿ ಮತ್ತು ಸಿಇಒಗಳ ಜೊತೆ ಆಗಬೇಕು. ಹಲವು ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಜಲ ಜೀವನ್ ಮಿಷನ್, ಆವಾಸ್ ಯೋಜನೆ, ರಾಜ್ಯ ಸರ್ಕಾರದ ಹಲವಾರು ಯೋಜನೆ ಬಗ್ಗೆ ಚರ್ಚೆ ಆಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

cm-basavaraja-bommai
ಸಿಎಂ ಬಸವರಾಜ್ ಬೊಮ್ಮಾಯಿ
author img

By

Published : Dec 30, 2021, 5:34 PM IST

ಬೆಂಗಳೂರು: ನನ್ನ ಪ್ರಕಾರ ಅಧಿಕಾರ ವಿಕೇಂದ್ರೀಕರಣ ಆಗಬೇಕು. ಆಗ ಮಾತ್ರ ಅಭಿವೃದ್ಧಿಯತ್ತ ರಾಜ್ಯವನ್ನು ಕೊಂಡೊಯ್ಯಲು ಸಾಧ್ಯ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಥಮ ಬಾರಿ ವಿಶೇಷವಾಗಿ ಸಿಇಒಗಳ ಜೊತೆ ಸಭೆ ಆಗಿದೆ. ಡಿಸಿ ಮತ್ತು ಸಿಇಒಗಳ ಜೊತೆ ಇನ್ನೊಂದು ಸಭೆ ಆಗಬೇಕು. ಹಲವು ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಜಲ ಜೀವನ್ ಮಿಷನ್, ಆವಾಸ್ ಯೋಜನೆ, ರಾಜ್ಯ ಸರ್ಕಾರದ ಹಲವಾರು ಯೋಜನೆ ಬಗ್ಗೆ ಚರ್ಚೆ ಆಗಿದೆ ಎಂದರು.

ಬಡತನ ರೇಖೆಗಿಂತ ಕೆಳಗಿರೋರನ್ನ ಮೇಲೆತ್ತುವ ಯೋಜನೆ, ಕೋವಿಡ್ ನಿರ್ವಹಣೆ, ವ್ಯಾಕ್ಸಿನ್ ನೀಡುವ ಬಗ್ಗೆ ಚರ್ಚೆ ಆಗಿದೆ. ಕೆಲವೆಡೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ. ವಾರಕ್ಕೊಮ್ಮೆ ಪ್ರಗತಿ ಪರಿಶೀಲನೆ ಮಾಡಿ ರಿಪೋರ್ಟ್ ನೀಡುವಂತೆ ಸಿಇಒಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್​ಗೆ ಬುಡವೇ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅವರ ಆಸೆ ಎಂದಿಗೂ ನನಸಾಗಲ್ಲ. 2023ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಎಲ್ಲೋ ಅಲ್ಪಸಂಖ್ಯಾತರು ಇರುವ ಕಡೆ ಗೆದ್ದು, ಕನಸು ಕಾಣ್ತಿದ್ದಾರೆ ಅಷ್ಟೇ. ಕೆಲವು ನಗರ ಸಭೆಗಳಲ್ಲಿ ಅಲ್ಪಸಂಖ್ಯಾತರಿಂದ ಮತ ಜಾಸ್ತಿ ಬಂದಿದೆ ಎಂದು ಬೀಗುವುದು ಅವಶ್ಯಕತೆ ಇಲ್ಲ. ಕನಸು ಕಾಣೋದಕ್ಕೆ ಯಾವುದೇ ಟ್ಯಾಕ್ಸ್ ಇಲ್ಲ. 2023ರ ನಂತರವೂ 5 ವರ್ಷಗಳ ಕಾಲ ಬಿಜೆಪಿ ಸರ್ಕಾರವೇ ಇರಲಿದೆ ಎಂದರು.

ಈಶ್ವರಪ್ಪ ಲೇವಡಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಮಾತನಾಡಿ, 25 ವರ್ಷಗಳ ನಂತರ ಕಾಂಗ್ರೆಸ್​ಗೆ ಗಂಡು ಮಗು ಹುಟ್ಟಿದೆ. ಆ ರೀತಿ ಅವರು ಸಂಭ್ರಮಿಸುತ್ತಿದ್ದಾರೆ. ಅವರಿಂದಲೂ ಕೆಲವು ಸಲಹೆ ಪಡೆದಿದ್ದೇವೆ. ಅದನ್ನ ಡಿಪಿಎಆರ್ ಮಾಡುವ ಚಿಂತನೆ ಇದೆ. ಅವರು ಹೆಚ್ಚಿನ ಸಾಧನೆ ಮಾಡುವಂತೆ ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.

ಚುನಾವಣಾ ಫಲಿತಾಂಶ ವಿಚಾರ ಮಾತನಾಡಿ, ಈಗ ನಡೆಯುವ ನಗರಸಭೆ, ಪುರಸಭೆ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ನಮಗೆ ದೊಡ್ಡ ಪ್ರಮಾಣದ ಯಶಸ್ಸು ಸಿಕ್ಕಿದೆ. ಈ ಭಾಗದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದರಿಂದ ನಮಗೆ ಸಾಧನೆ ಮಾಡಲಾಗಿರಲಿಲ್ಲ. ನಮ್ಮ‌ ಕ್ಷೇತ್ರದಲ್ಲಿ ಯಾವತ್ತೂ ಕೂಡ ಗೆದ್ದಿರಲಿಲ್ಲ. ನಮ್ಮಲ್ಲಿ ಅಲ್ಪ ಸಂಖ್ಯಾತರು ಶೇ 60ರಷ್ಟಿದ್ದಾರೆ ಎಂದು ಹೇಳಿದರು. ಎಲ್ಲಿಲ್ಲಿ ಗೆದ್ದಿದ್ದೇವೆ ಅಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತೇವೆ. ಬರುವಂತಹ ದಿನಗಳಲ್ಲಿ ಎಲ್ಲಾ ಕಡೆ ಅಧಿಕಾರ ತರುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಓದಿ: ಸಿಇಒಗಳ ಕಾರ್ಯನಿರ್ವಹಣೆಗೆ ಜಿಲ್ಲಾವಾರು ಶ್ರೇಯಾಂಕ ವ್ಯವಸ್ಥೆ ಜಾರಿ: ಸಿಎಂ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.