ETV Bharat / state

ಬೆಲೆ ಏರಿಕೆ, ಇಳಿಕೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ: ಸಿಎಂ ಬೊಮ್ಮಾಯಿ - Basavaraja Bommai talk about petrol price

ಇದೇ ಮೊದಲ ಬಾರಿಗೆ ತೈಲಕ್ಕೆ 7 ರೂಪಾಯಿ ಕಡಿಮೆ ಆಗಿದೆ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಿ. ಟೀಕೆ ಮಾಡಬೇಕು ಅಂತ ಮಾಡೋದಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್​ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

cm-Basavaraja-bommai
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Nov 5, 2021, 3:02 PM IST

Updated : Nov 5, 2021, 3:41 PM IST

ಬೆಂಗಳೂರು: ಬೆಲೆ ಏರಿಕೆ ಅಥವಾ ಇಳಿಕೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಾಪಸಾದ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದವರು ತೈಲ ಬೆಲೆ ಇಳಿಕೆಗೆ ಟೀಕೆ ಮಾಡ್ತಾ ಇದ್ದಾರೆ. ಅನೇಕರು ಹೇಳ್ತಾರೆ, ಉಪ ಚುನಾವಣೆಯಲ್ಲಿ ಸೋತಿದ್ದಕ್ಕೆ ಮಾಡಿದ್ರು ಅಂತ. ಚುನಾವಣೆಗೂ ಮುನ್ನ ಮಾಡಿದ್ದರೂ ಟೀಕೆ ಮಾಡ್ತಾ ಇದ್ರು. ಟೀಕೆ ಮಾಡಬೇಕು ಅಂತ ಮಾಡಬಾರದು ಎಂದು ಕಿಡಿಕಾರಿದರು.

ಇದೇ ಮೊದಲ ಬಾರಿಗೆ ತೈಲಕ್ಕೆ 7 ರೂಪಾಯಿ ಕಡಿಮೆ ಆಗಿದೆ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಿ. ಟೀಕೆ ಮಾಡಬೇಕು ಅಂತ ಮಾಡೋದಲ್ಲ. ಅವರ ಸರ್ಕಾರ ಇದ್ದಾಗ ಅವರು ಬೆಲೆ ಕಡಿಮೆ ಮಾಡಿಲ್ಲ. ಕಾಂಗ್ರೆಸ್ ಆಡಳಿತ ಇರೋ ರಾಜ್ಯಗಳಲ್ಲಿ ಅವರು ಬೆಲೆ ಕಡಿಮೆ ಮಾಡಲು ನಿರಾಕರಿಸಿದ್ದಾರೆ. ಇದು ಅವರ ಪಕ್ಷದ ನಿಲುವಾ ಹಾಗಾದ್ರೆ?. ಸಿಲಿಂಡರ್ ಬೆಲೆ ಕಡಿಮೆ ಮಾಡುವ ವಿಚಾರವಾಗಿ ಕೇಂದ್ರ ನಿರ್ಧಾರ ಮಾಡುತ್ತದೆ ಎಂದರು.

ಬೆಂಗಳೂರಿನಲ್ಲಿ ಧಾರಾಕಾರ ಮಳೆಯಿಂದ ಹಾನಿ ಹಿನ್ನೆಲೆ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ. ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳು, ಬಿಬಿಎಂಪಿ ಹಿರಿಯ ಅಧಿಕಾರಿಗಳಿಂದ ಮಳೆಯಿಂದ ಆದ ಹಾನಿಯ ಬಗ್ಗೆ ವಿವರ ಪಡೆಯುತ್ತೇನೆ ಎಂದು ಸಿಎಂ ತಿಳಿಸಿದರು.

ಓದಿ: ದೇಶದಲ್ಲಿ ಕಾಂಗ್ರೆಸ್ ಒಡೆದು ಹೋಳಾಗುತ್ತಿದೆ: ಡಿಕೆಶಿಗೆ ಟಾಂಗ್ ಕೊಟ್ಟ ಸಿಎಂ

Last Updated : Nov 5, 2021, 3:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.