ETV Bharat / state

ರೈತಪರ ಕೃಷಿ ಯೋಜನೆಗಳು ಇಂದಿನ ಅಗತ್ಯ: ಸಿಎಂ ಬೊಮ್ಮಾಯಿ - undefined

ಬೆಂಗಳೂರಿನಲ್ಲಿ ನಟ ವಿಜಯ್ ರಾಘವೇಂದ್ರ, ಹರ್ಷಿಕಾ ಪೂಣಾಚ್ಚ ಅಭಿನಯದ ಕಾಸಿನಸರ ಚಿತ್ರದ ಆಡಿಯೋವನ್ನು ಸಿಎಂ ಬೊಮ್ಮಾಯಿ ಬಿಡುಗಡೆಗೊಳಿಸಿದರು.

CM Basavaraj Bommai release audio of Kasina Sara movie
ಕಾಸಿನಸರ ಚಿತ್ರದ ಆಡಿಯೋ ಸಿ ಎಂ ಬಸವರಾಜ ಬೊಮ್ಮಾಯಿ ಬಿಡುಗಡೆ
author img

By

Published : Feb 3, 2023, 10:25 PM IST

ಬೆಂಗಳೂರು: ರೈತ ಉದ್ಧಾರವಾಗಲು ರೈತಕೇಂದ್ರಿತ ಕೃಷಿ ಯೋಜನೆಗಳು ಅಗತ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ವಿಜಯ್ ರಾಘವೇಂದ್ರ ಹಾಗೂ ಹರ್ಷಿಕಾ ಪೂಣಚ್ಚ ಇದೇ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿರುವ ಸಿನಿಮಾ ಕಾಸಿನಸರ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮೌಲ್ಯಗಳಿಂದ ಕೂಡಿದ ಕಾಯಕ ಕೃಷಿ. ಇದೊಂದು ಪವಿತ್ರ ಕಾರ್ಯ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಒಕ್ಕಲುತನವಿರುತ್ತದೆ. ಅನಿಶ್ಚಿತತೆಯ ಮಧ್ಯೆಯೂ ಭರವಸೆ ಭೂಮಿತಾಯಿಯ ಸಂಬಂಧದಿಂದ ಬರುತ್ತದೆ. ನಾವು ಎಲ್ಲೆಡೆ ಜಾದೂ, ಹಣ ಕೊಟ್ಟು ನೋಡುತ್ತೇವೆ. ಆದರೆ ಸೃಷ್ಟಿಕರ್ತನ ಭೂಮಿಗಿಂತ ದೊಡ್ಡ ಜಾದೂ ಮತ್ತೊಂದಿಲ್ಲ. ಒಂದು ಕಾಳು ಹಾಕಿದರೆ ನೂರಾರು ಕಾಳುಗಳನ್ನು ಬೆಳೆಯಬಹುದು. ಆಧುನೀಕರಣ ಮತ್ತು ಸಂಶೋಧನೆಗಳು ಪ್ರಾರಂಭವಾಗಿ 130 ಕೋಟಿ ಜನರಿಗೆ ಆಹಾರ ಭದ್ರತೆ ಸಾಧಿಸಲಾಗಿದೆ. ಆದರೆ ರೈತ ಮಾತ್ರ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದಾನೆ ಎಂದರು.

ಹೆಣ್ಣುಮಕ್ಕಳಿಗೆ ಜೀವನದಲ್ಲಿ ಒಂದು ಕಾಸಿನ ಸರ ಮಾಡಿಸಿಕೊಳ್ಳಬೇಕು ಎಂಬ ಕನಸಿರುತ್ತದೆ. ಕಾಸಿನಸರದ ಹಿಂದಿರುವ ಕಥೆಯನ್ನು ಊಹಿಸಿಕೊಳ್ಳಬಹುದು. ಅಂಥ ಪ್ರಯೋಗವನ್ನು ಮಾಡಿರುವ ನಿರ್ದೇಶಕ ನಂಜುಂಡೇಗೌಡರಿಗೆ ಅಭಿನಂದನೆಗಳು. ನಿರ್ಮಾಪಕ ದೊಡ್ಡನಾಗೇಗೌಡರು ನಾಡಿಗೆ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ ಎಂದು ಸಿಎಂ ಶ್ಲಾಘಿಸಿದರು.

ರೈತನ ಬದುಕಿಗೆ ಎಲ್ಲ ರೀತಿಯ ಸಹಾಯ ಮಾಡುವ ಪ್ರಯತ್ನ ಮಾಡಲಾಗುವುದು. ಈ ಹಿಂದೆ ಹೆಣ್ಣುಮಕ್ಕಳ ಭ್ರೂಣ ಹತ್ಯೆ ಬಹಳ ಇತ್ತು. ತನ್ನ ಅಣ್ಣ ತಮ್ಮಂದಿರ ರೀತಿ ನನ್ನನ್ನೂ ಉಳಿಸಿಕೋ, ನಾನು ಕುಟುಂಬವನ್ನು ನೋಡಿಕೊಳ್ಳುತ್ತೇನೆ ಎಂದು ಹೆಣ್ಣು ಭ್ರೂಣ ಹೇಳುವಂತೆ ಭೂಮಿತಾಯಿಯು, ತಾನು ಜನರಿಗೆ ಅನ್ನ, ಬದುಕು, ಜೀವ, ಆಸರೆ ನೀಡುತ್ತಿದ್ದರೂ ನನಗೇಕೆ ವಿಷ ಬೆರೆಸುತ್ತೀರಿ ಎಂದು ಕೂಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಎಲ್ಲರ ಅನ್ನದ ಚೀಲವೂ ತುಂಬಬೇಕು. ಅಂತೆಯೇ ಭೂಮಿಗೆ ವಿಷ ಬೆರೆಸಬಾರದೆಂಬ ಸವಾಲು ನಮ್ಮ ಮುಂದಿದೆ. ಇದನ್ನು ಸಮರ್ಥವಾಗಿ ನಿರ್ವಹಿಸುವುದು ಬಹಳ ಮುಖ್ಯ ಎಂದು ಸಿಎಂ ಹೇಳಿದರು.

ಸಾವಯವ ಕೃಷಿ ಅತ್ಯಗತ್ಯ: ಬರುವ ದಿನಗಳಲ್ಲಿ ವಿಶ್ವದಲ್ಲಿ ಆಹಾರಕ್ಕೆ ಹಾಹಾಕಾರ ಉಂಟಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ಸಾವಯವ ಕೃಷಿ, ನೈಸರ್ಗಿಕ ಕೃಷಿಯನ್ನು ಹಂತಹಂತವಾಗಿ, ವ್ಯವಸ್ಥಿತವಾಗಿ ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸಬೇಕಿದೆ. ಈ ನಿಟ್ಟಿನಲ್ಲಿ ತಜ್ಞರು ಹೆಚ್ಚು ಗಮನಹರಿಸಬೇಕಿದೆ. ಆಹಾರ ಸುರಕ್ಷತೆಯನ್ನು ಗಮನದಲ್ಲಿರಿಸಿ, ಸಾವಯವ ಕೃಷಿಯ ಮೂಲಕ ಹೆಚ್ಚು ಆಹಾರ ಉತ್ಪಾದನೆಗೆ ಒತ್ತು ನೀಡಬೇಕು. ಆರೋಗ್ಯಕರ ಆಹಾರ ಉತ್ಪಾದನೆ ಮೂಲಕ ದೊಡ್ಡ ಬದಲಾವಣೆಯನ್ನು ತರಬಹುದು ಎಂದರು.

ಸಚಿವ ಎಸ್.ಟಿ.ಸೋಮಶೇಖರ್, ಕಲಾವಿದೆ ಹಾಗೂ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ, ತಾರಾ ಅನುರಾಧ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ವಿಜಯ್ ರಾಘವೇಂದ್ರ, ಚಿತ್ರದ ನಾಯಕ ನಟಿ ಹರ್ಷಿಕಾ ಪೂಣಾಚ್ಚ, ನೀನಾಸಂ ಸತೀಶ್ ಉಪಸ್ಥಿತರಿದ್ದರು.

ಇದನ್ನೂಓದಿ:ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಅದ್ಧೂರಿ ವಿವಾಹಕ್ಕೆ ಭರದ ಸಿದ್ಧತೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.