ಬೆಂಗಳೂರು : ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರಿಗೆ ಶ್ವಾನ ಎಂದರೆ ಎಲ್ಲಿಲ್ಲದ ಪ್ರೀತಿ. ಈ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಬಿ ಎಸ್ ಬೊಮ್ಮಾಯಿ ಅವರ ಮನೆಯಲ್ಲಿ ಸನ್ನಿ ಎಂಬ ಹೆಸರಿನ ಶ್ವಾನ ಕುಟುಂಬದ ಸದಸ್ಯನಂತಿತ್ತು. ಆದರೆ, ಇತ್ತೀಚೆಗೆ ಅವರ ಪ್ರೀತಿಯ ಸನ್ನಿ ಮೃತಪಟ್ಟಾಗ ಅವರು ತುಂಬಾ ಭಾವುಕರಾಗಿದ್ದರು.
ಬೊಮ್ಮಾಯಿಯವರ ಮನೆಯಲ್ಲಿ ನಾಯಿಯೊಂದನ್ನು ಬಲು ಪ್ರೀತಿಯಿಂದ ಸಾಕಿದ್ದರು. ಸನ್ನಿ ಎಂಬ ಹೆಸರಿನ ಶ್ವಾನ ಕುಟುಂಬ ಸದಸ್ಯರಂತೆ ಅವರ ಮನೆಯಲ್ಲಿತ್ತು. ಆದರೆ, ವರ್ಷಗಳವರೆಗೂ ಮನೆಯವರೊಂದಿಗೆ ಬೆರೆತು ತುಂಟಾಟ ಆಡುತ್ತಿದ್ದ ಸನ್ನಿ ಮೃತಪಟ್ಟ ದಿನ ಈಗಿನ ಸಿಎಂ, ಆಗಿನ ಗೃಹ ಸಚಿವರಾಗಿದ್ದ ಬೊಮ್ಮಾಯಿ ನೊಂದುಕೊಂಡಿದ್ದರು.
ಈ ಕುರಿತು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು ಬೊಮ್ಮಾಯಿ. ತಮ್ಮ ಮುದ್ದಿನ ನಾಯಿಯನ್ನು ಕಳೆದುಕೊಂಡು ನೋವಿನಲ್ಲಿ ಬೊಮ್ಮಾಯಿಯವರು ಸನ್ನಿಯ ಮೈ ಸವರಿ ಮುದ್ದಾಡಿ ಕಣ್ಣೀರಿಟ್ಟ ದೃಶ್ಯ ಇದೇ ವಿಡಿಯೋದಲ್ಲಿದೆ. ಮನೆಯವರೆಲ್ಲ ಮನೆ ಸದಸ್ಯನನ್ನು ಕಳೆದುಕೊಂಡಂತೆ ಕಣ್ಣೀರಿನೊಂದಿಗೆ ಪ್ರೀತಿಯ ಸನ್ನಿಗೆ ವಿದಾಯ ಹೇಳಿದ್ದರು.
ಇಂದು ನಮ್ಮ ಮನೆಯ ಮುದ್ದಿನ ನಾಯಿ ಸನ್ನಿ ವಯೋಸಹಜವಾಗಿ ಸಾವನ್ನಪ್ಪಿದ್ದು, ತೀವ್ರ ದುಃಖ ತಂದಿದೆ. ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು. ಓಂ ಶಾಂತಿಃ ಎಂದು ಈ ಹಿಂದೆ ಬೊಮ್ಮಾಯಿ ಅವರು ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಓದಿ: ಪ್ರತಿಪಕ್ಷವಾಗಿ ಸೈದ್ಧಾಂತಿಕ ಸಂಘರ್ಷವಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ತಂಡವಾಗಿ ಕೆಲಸ ಮಾಡೋಣ: ಸಿದ್ದರಾಮಯ್ಯ