ETV Bharat / state

ಪರ್ಫಾರ್ಮೆನ್ಸ್​ನತ್ತ ಸಿಎಂ ಚಿತ್ತ: ಇಲಾಖೆವಾರು ಸರಣಿ ಸಭೆ, ಆಡಳಿತಕ್ಕೆ ಮತ್ತಷ್ಟು ಚುರುಕು - ಬೊಮ್ಮಾಯಿ ತಮ್ಮದೇ ಆದ ಶೈಲಿಯಲ್ಲಿ ಆಡಳಿತದಲ್ಲಿ ಬ್ಯುಸಿ

ಬಿಜೆಪಿ ಹೈಕಮಾಂಡ್​ನಲ್ಲಿ ಪ್ರಮುಖರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿ ತೆರಳಿದ ಬಳಿಕ ಆಡಳಿತಕ್ಕೆ ಹೆಚ್ಚಿನ ಚುರುಕು ನೀಡಿ ಉತ್ತಮ ಆಡಳಿತದ ಸರ್ಕಾರ ತಮ್ಮದಾಗಿದೆ ಎನ್ನುವ ಸಂದೇಶವನ್ನು ರವಾನಿಸಲು ಬಸವರಾಜ್ ಬೊಮ್ಮಾಯಿ ಮುಂದಾಗಿದ್ದಾರೆ.

CM Basavaraj Bommai Series Meeting
ಪರ್ಫಾರ್ಮೆನ್ಸ್​ನತ್ತ ಸಿಎಂ ಚಿತ್ತ
author img

By

Published : May 6, 2022, 10:47 PM IST

ಬೆಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲು ಇನ್ನು ಒಂದು ವರ್ಷ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಆಡಳಿತಕ್ಕೆ ಹೆಚ್ಚಿನ ವೇಗ ನೀಡಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವ ಸಂದೇಶವನ್ನು ಬಿಜೆಪಿ ಹೈಕಮಾಂಡ್ ಮತ್ತು ಜನತೆಗೆ ನೀಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮದೇ ಆದ ಶೈಲಿಯಲ್ಲಿ ಆಡಳಿತದಲ್ಲಿ ಬ್ಯುಸಿ ಮಾಡಿಕೊಂಡಿದ್ದಾರೆ. ನಾಯಕತ್ವ ಬದಲಾವಣೆಯ ರಾಜಕೀಯ ಕಸರತ್ತಿನ ಕಡೆ ಹೆಚ್ಚು ತಲೆಕೆಡಿಸಿಕೊಳ್ಳದೇ ಉತ್ತಮ ಪ್ರಫಾರ್ಮೆನ್ಸ್ ನೀಡುವತ್ತ ಹೆಚ್ಚಿನ ಗಮನ ಹರಿಸಿದ್ದಾರೆ.

ಇದನ್ನೂ ಓದಿ: ಸಾವಿರ ಕೋಟಿ ವೆಚ್ಚದಲ್ಲಿ 6,500 ಶಾಲಾ ಕೊಠಡಿಗಳ ನಿರ್ಮಾಣ: ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬದಲಾಯಿಸಬೇಕೆನ್ನುವ ಕೂಗ ಬಲವಾಗುತ್ತಿದ್ದಂತೆ ಹೆಚ್ಚು ಅಲರ್ಟ್ ಆಗಿ ಕಳೆದ ಏಪ್ರಿಲ್ ತಿಂಗಳಿನಾದ್ಯಂತ ವಿಶ್ರಾಂತಿ ಇಲ್ಲದೇ ರಾಜ್ಯದಾದ್ಯಂತ ಪ್ರವಾಸ ಮಾಡಿ ಸರ್ಕಾರದ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದರು. ಹೆಚ್ಚಿನ ಜನ ಸೇರಿಸಿ ಸರ್ಕಾರ ಕ್ರಿಯಾಶೀಲ ಆಡಳಿತ ನೀಡುತ್ತಿರುವುದನ್ನ ಮನವರಿಕೆ ಮಾಡಿಕೊಟ್ಟಿದ್ದಾರೆ. ಪಕ್ಷದ ಸಭೆ ನಡೆಸಿ ಸಮಸ್ಯೆ ಗಳನ್ನು ಬಗೆಹರಿಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ್ದಾರೆ.

ಪರ್ಫಾರ್ಮೆನ್ಸ್​ನತ್ತ ಸಿಎಂ ಚಿತ್ತ
ಪರ್ಫಾರ್ಮೆನ್ಸ್​ನತ್ತ ಸಿಎಂ ಚಿತ್ತ

ಇದನ್ನೂ ಓದಿ: ಐಐಟಿ ಮಾದರಿಯಲ್ಲಿ 7 ಇಂಜಿನಿಯರಿಂಗ್ ಕಾಲೇಜುಗಳ ಮೇಲ್ದರ್ಜೆಗೆ ಟಾಸ್ಕ್ ಫೋರ್ಸ್: ಸಿಎಂ

ಈಗಾಗಲೇ ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ದಾವಣಗೆರೆ, ಚಿತ್ರದುರ್ಗ, ಧಾರವಾಡ,ಗದಗ, ಬೆಳಗಾವಿ, ವಿಜಯನಗರ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಡುವಿಲ್ಲದೇ ಪ್ರವಾಸ ಕೈಗೊಂಡು ಆಡಳಿತಕ್ಕೆ ವೇಗ ನೀಡಿದರು.

ಕಳೆದ ತಿಂಗಳು ಜಿಲ್ಲಾ ಪ್ರವಾಸ ಮಾಡುತ್ತಿದ್ದಂತೆ ಈಗ ಮೇನಲ್ಲಿ ಇಲಾಖಾವಾರು ಸರಣಿ ಸಭೆ ನಡೆಸುತ್ತಿದ್ದಾರೆ. ಈ ಹಣಕಾಸು ವರ್ಷದ ಬಜೆಟ್​ನಲ್ಲಿ ಘೋಷಿಸಿದ ಯೋಜನೆಗಳ ಅನುಷ್ಠಾನ ಬಗ್ಗೆ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ಕರೆದು ಬಜೆಟ್ ಯೋಜನೆಗಳ ಜಾರಿಗೆ ಆದೇಶ ನೀಡುತ್ತಿದ್ದಾರೆ.

ಪರ್ಫಾರ್ಮೆನ್ಸ್​ನತ್ತ ಸಿಎಂ ಚಿತ್ತ
ಪರ್ಫಾರ್ಮೆನ್ಸ್​ನತ್ತ ಸಿಎಂ ಚಿತ್ತ

ಇದನ್ನೂ ಓದಿ: ಗ್ರಾಮೀಣ ಜನರಿಗೆ ಗುಡ್​ನ್ಯೂಸ್​: ಯಶಸ್ವಿನಿ ಯೋಜನೆ ಅ.2 ರಂದು ಉದ್ಘಾಟನೆ: ಬೊಮ್ಮಾಯಿ

ಕಳೆದ ಮೂರ್ನಾಲ್ಕು ದಿನಗಳಲ್ಲಿ ವೈದ್ಯಕೀಯ, ಶಿಕ್ಷಣ, ಸಹಕಾರ, ವಸತಿ, ಕಂದಾಯ, ಅರಣ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಜಲ ಸಂಪನ್ಮೂಲ ಇಲಾಖೆಗಳ ಸಭೆ ಮಾಡಿದ್ದಾರೆ. ಇಲಾಖೆಗಳ ಸರಣಿ ಸಭೆ ಮಾತ್ರವಲ್ಲದೇ ಬರುವ ವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲಾ ಪಂಚಾಯಿತಿ ಸಿಇಒಗಳ ಸಭೆಯನ್ನೂ ಸಿಎಂ ಕರೆದಿದ್ದಾರೆ.

ಇದನ್ನೂ ಓದಿ: ಡಿಸೆಂಬರ್​ ಒಳಗೆ 6 ಲಕ್ಷ ಮನೆಗಳನ್ನು ಪೂರ್ಣಗೊಳಿಸಿ: ವಸತಿ ಇಲಾಖೆಗೆ ಸಿಎಂ ಬೊಮ್ಮಾಯಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.