ಬೆಂಗಳೂರು: ಶಾಸಕರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲು ಹಾಗೂ ಪ್ರತ್ಯೇಕ ಸಭೆಯಂತಹ ಚಟುವಟಿಕೆಗೆ ಕಡಿವಾಣ ಹಾಕಲು ಪಕ್ಷದ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೋಜನ ಕೂಟ ಏರ್ಪಡಿಸಿದ್ದು, ಶಾಸಕರು ಸಿಎಂ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ. ಆದರೆ, ರೆಬಲ್ ಶಾಸಕರು ಇನ್ನೂ ಬಾರದಿರುವುದು ಅಸಮಧಾನ ಶಮನವಾಗಿಲ್ಲ ಎನ್ನುವ ಸುಳಿವು ನೀಡಿದೆ.
ಸಿಎಂ ನಿವಾಸ ಕಾವೇರಿಯಲ್ಲಿ ಶಾಸಕರ ಡಿನ್ನರ್ ಮೀಟಿಂಗ್ ಸಭೆ ಆರಂಭಗೊಂಡಿದೆ. ನಿನ್ನೆ ಲಂಚ್ ಮೀಟಿಂಗ್ ಮಾಡಿದ್ದ ಶಾಸಕರೇ ಇಂದು ನಾಪತ್ತೆಯಾಗಿದ್ದಾರೆ. ಸಿಎಂ ಬಿಎಸ್ವೈ ಭೋಜನ ಕೂಟಕ್ಕೆ ಇನ್ನೂ ಬಾರದ ನಿಷ್ಟ ಶಾಸಕರು ರೆಬಲ್ ಚಟುವಟಿಕೆ ನಿಂತಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.
ಸುನೀಲ್ ಕುಮಾರ್, ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್, ಅರವಿಂದ್ ಬೆಲ್ಲದ್ ಆಗಮಿಸಿಲ್ಲ. ನಿನ್ನೆ ಶಾಸಕರ ಭವನದಲ್ಲಿ ಮಧ್ಯಾಹ್ನದ ಭೋಜನ ನೆಪದಲ್ಲಿ ಸಭೆ ನಡೆಸಿದ್ದ ಈ ಶಾಸಕರು, ಇದೀಗ ಇಂದಿನ ಸಿಎಂ ಡಿನ್ನರ್ ಸಭೆಗೆ ಇನ್ನೂ ಬಾರದೇ ದೂರ ಉಳಿದಿದ್ದಾರೆ. ಈ ಮೂಲಕ ಸಿಎಂ ಬಿಎಸ್ವೈ ವಿರುದ್ಧ ಮುನಿಸು ಮುಂದುವರೆಸಿದ್ದಾರೆ.
ಈ ವರೆಗೆ ಸಿಎಂ ಡಿನ್ನರ್ ಪಾರ್ಟಿಗೆ ಬಂದಿರುವ ಶಾಸಕರ ವಿವರ
- ರೇಣುಕಾಚಾರ್ಯ
- ಎ ಎಸ್ ಪಾಟೀಲ್ ನಡಹಳ್ಳಿ
- ರಾಜುಗೌಡ
- ರಾಮಪ್ಪ ಲಮಾಣಿ
- ಶ್ರೀರಾಮುಲು
- ಡಾ. ಕೆ ಸುಧಾಕರ್
- ಬೈರತಿ ಬಸವರಾಜ
- ಎಸ್ ಆರ್ ವಿಶ್ವನಾಥ
- ಬಸವರಾಜ ಬೊಮ್ಮಾಯಿ
- ಶಿವರಾಜ್ ಪಾಟೀಲ್
- ರವಿ ಸುಬ್ರಹ್ಮಣ್ಯ
- ಬಸವರಾಜ ದಡೇಸೂಗೂರು
- ಎಸ್.ವಿ. ರಾಮಚಂದ್ರ
- ಹರತಾಳ್ ಹಾಲಪ್ಪ
- ಸಂಜಿವ್ ಮಟಂದೂರ್
- ಎಸ್ ಆರ್ ಅಂಗಾರ್
- ವಿರೂಪಾಕ್ಷಪ್ಪಾ
- ಪಿ ರಾಜೀವ್
- ವಿಧಾನ ಪರಿಷತ್ ಸದಸ್ಯರಾದ - ಭಾರತಿ ಶೆಟ್ಟಿ, ವೈ ಎ ನಾರಾಯಣಸ್ವಾಮಿ, ಅ ದೆವೇಗೌಡ, ರುದ್ರೆಗೌಡ, ಎನ್.ರವಿಕುಮಾರ್ ಹಾಗೂ ತೆಜಸ್ವಿನಿ ರಮೇಶ್
- ಹರಿಶ್ ಪೂಂಜಾ
- ಲಕ್ಷ್ಮಣ ಸವದಿ
- ಮಸಾಲೆ ಜಯರಾಂ
- ಎಸ್ ಟಿ ಸೋಮಶೇಖರ್
- ಶ್ರೀಮಂತಪಾಟೀಲ
- ಪರಣ್ಣಾ ಮನವಳ್ಳಿ
- ದುರ್ಯೋಧನ ಐಹೋಳೆ
- ಸಚಿವ ಉಮೇಶ್ ಕತ್ತಿ,
- ಎಂಟಿಬಿ ನಾಗರಾಜ್
- ಸಿಸಿ ಪಾಟೀಲ್.
- ಎಂ ಕೃಷ್ಣಪ್ಪ
- ಜೋತಿ ಗಣೇಶ್
- ರಾಜೆಶ್ ಗೌಡ
- ಬಾಲಚಂದ್ರ ಜಾರ್ಕಿಹೋಳಿ
- ಎಸ್ ರಘು
- ಉಪ ಸಭಾಪತಿ ಪ್ರಾಣೇಶ್
- ಗೋಪಾಲಯ್ಯ
- ಎನ್ ವೈ ಗೋಪಾಲಕೃಷ್ಣ
- ಪ್ರೊ. ಲಿಂಗಣ್ಣ
- ಅಶೋಕ ನಾಯಕ್
- ಎನ್ ವೈ ಗೋಪಾಲಕೃಷ್ಣ
- ಕೆ ಆರ್ ಪೆಟೆ ನಾರಾಯಣ ಗೌಡ
- ಎನ್ ವೈ ಗೋಪಾಲಕೃಷ್ಣ
- ಶಶಿಕಲಾ ಜೋಲ್ಲೆ
- ಪ್ರೋ ಲಿಂಗಣ್ಣಾ
- ಮುರಗೇಶ್ ನಿರಾಣಿ
- ಕೆ ಜಿ ಬೋಪಯ್ಯ
- ರಘುಪತಿ ಭಟ್
- ಮಾಡಳ್ ವಿರೂಪಾಕ್ಷ
- ಡಾ ಅವಿನಾಶ್ ಜಾದವ್
- ಸುಕುಮಾರ್ ಶೆಟ್ಟಿ
- ಲಾಲಾಜಿ ಮೆಂಡನ್
- ನೆಹರು ಓಲೇಕಾರ
- ಅರವಿಂದ್ ಲಿಂಬಾವಳಿ
- ವಿ.ಸೋಮಣ್ಣ
- ಆರಗ ಜ್ನಾನೇಂದ್ರ
- ರಾಮಚಂದ್ರಪ್ಪಾ
- ರಾಜೇಶ್ ನಾಯಕ್