ETV Bharat / state

ಗೋಪಾಲಗೌಡರ ಹೆಸರಿನಲ್ಲಿ ಕೃಷಿಕ, ಸಂಸದೀಯ ಪಟು ಪ್ರಶಸ್ತಿ: ಸಿಎಂ ಘೋಷಣೆ

ಒಂದು ಸಂದರ್ಭದಲ್ಲಿ ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಸೇರಿದಂತೆ ಎಲ್ಲ ನಾಯಕರು ಶಾಂತವೇರಿ ಗೋಪಾಲಗೌಡರನ್ನು ಯಾಕೆ ಮುಖ್ಯಮಂತ್ರಿ ಮಾಡಬಾರದು ಎಂದು ಯೋಚನೆ ಮಾಡಿದ್ದರು. ಆದರೆ, ಸಂಖ್ಯಾಬಲ ನಮ್ಮ ಬಳಿ ಇರಲಿಲ್ಲ. ಗೋಪಾಲಗೌಡರು ಆ ಸ್ಥಾನಕ್ಕೆ ಮೀರಿದ ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂದು ಸಿಎಂ ಹೇಳಿದರು.

shantaveri gopalagowda
shantaveri gopalagowda
author img

By

Published : Mar 14, 2022, 12:59 PM IST

ಬೆಂಗಳೂರು: ಹೋರಾಟಗಾರ ಶಾಂತಾವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಎರಡು ಪ್ರಶಸ್ತಿ ನೀಡಲು ತೀರ್ಮಾನಿಸಿದ್ದೇವೆ. ಒಂದು ಅತ್ಯಂತ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ಮತ್ತೊಂದು ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಒಬ್ಬ ಶ್ರೇಷ್ಠ ಸಂಸದೀಯ ಪಟು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಸೋಮವಾರ ಶಾಂತಾವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನ ಹಾಗೂ ಜನ್ಮ ಶತಮಾನೋತ್ಸವ ಆಚರಣೆ ಸಮಿತಿ ಆಯೋಜಿಸಿದ್ದ ಶಾಂತಾವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷವೂ ಗೋಪಾಲಗೌಡರ ಹೆಸರಲ್ಲಿ ಎರಡು ಪ್ರಶಸ್ತಿ ಕೊಡಲಾಗುವುದು. ಅವರ ವಿಚಾರಧಾರೆ ಮುಂದಿಟ್ಟುಕೊಂಡು ಆಡಳಿತ ನಡೆಸಲಾಗುವುದು ಎಂದರು.

ಗೋಪಾಲಗೌಡರು ಉತ್ತಮ ಹೋರಾಟಗಾರರು. ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರ ಸಮಕಾಲೀನರು ಹಾಗೂ ಸಮಾನ ಹೋರಾಟಗಾರರಾಗಿದ್ದರು. ತಮ್ಮದೇ ಆದಂತಹ ವ್ಯಕ್ತಿತ್ವ ಹೊಂದಿದ್ದ ಅವರು ಸುದೀರ್ಘಕಾಲ ವೈಚಾರಿಕ ಕ್ರಾಂತಿಯಿಂದ ನಮ್ಮನ್ನೆಲ್ಲ ಸೆಳೆದಿದ್ದಾರೆ. ರಾಜಕಾರಣದಲ್ಲಿ ಬಹಳ ಅಪರೂಪದ ವ್ಯಕ್ತಿತ್ವ. ರಾಜಕಾರಣಕ್ಕೆ ವಿಶ್ವಾಸಾರ್ಹತೆ ಇಂದಿಗೂ ಉಳಿದುಕೊಂಡಿದ್ದರೆ ಅದು ಶಾಂತವೇರಿ ಗೋಪಾಲಗೌಡರಂತಹ ವ್ಯಕ್ತಿಗಳಿಂದ ಲಭಿಸಿದೆ ಎಂದು ಬಣ್ಣಿಸಿದರು.

ಗೋಪಾಲಗೌಡರ ಹೆಸರಿನಲ್ಲಿ ಕೃಷಿಕ, ಸಂಸದೀಯ ಪಟುವಿಗೆ ಪ್ರಶಸ್ತಿ: ಸಿಎಂ ಘೋಷಣೆ

ಶಾಂತವೇರಿ ಗೋಪಾಲಗೌಡರು ಬಹಳ ಆದರ್ಶಮಯ ಬದುಕನ್ನು ಬದುಕಿದ್ದರು. ಜನರಿಗೆ ಬೇಕಾಗಿರುವ ವೈಚಾರಿಕತೆ ಹಾಗೂ ವ್ಯವಸ್ಥೆಯನ್ನು ಕಲ್ಪಿಸಿರುವುದು ಅವರ ಆಸ್ತಿ. ಅವರು ಬಿಟ್ಟುಹೋಗಿರುವ ವೈಚಾರಿಕತೆಯ ಆಸ್ತಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಅವರು ಜೀವಂತವಾಗಿ ನಮ್ಮ ಜೊತೆ ಇರುತ್ತಾರೆ. ಸಾಧನೆ ಮನೆಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನೇ ಸಾಧಕ ಎಂದು ವಿವೇಕಾನಂದರು ಹೇಳಿದ ಮಾತು ನನಗೆ ಇಲ್ಲಿ ನೆನಪಾಗುತ್ತದೆ. ಎಂದರು.

ಸಣ್ಣ ವಯಸ್ಸಿನಲ್ಲಿ ದೊಡ್ಡ ಹೋರಾಟ: ಉಳುವವನೇ ಭೂಮಿಯ ಒಡೆಯ ಎಂಬ ಹೋರಾಟಕ್ಕೆ ಶಿವಮೊಗ್ಗ ತೀರ್ಥಹಳ್ಳಿ ಭಾಗದಲ್ಲಿ ಒಬ್ಬ ನಾಯಕರ ಅಗತ್ಯ ಇತ್ತು. ಶಾಂತವೇರಿ ಗೋಪಾಲಗೌಡರು ಆ ಸಂದರ್ಭದಲ್ಲಿ ಅಂತಹದ್ದೊಂದು ನಾಯಕತ್ವ ವಹಿಸಿಕೊಂಡು ಗೆಲುವು ತಂದು ಕೊಟ್ಟರು. ರಾಮ್ ಮನೋಹರ್ ಲೋಹಿಯಾ ಅವರ ತತ್ವ ಮತ್ತು ಆದರ್ಶವನ್ನು ಇಟ್ಟುಕೊಂಡು ಹೋರಾಡಿದರು. ಅತಿ ಸಣ್ಣ ವಯಸ್ಸಿನಲ್ಲಿಯೇ ಮಹತ್ವದ ಜವಾಬ್ದಾರಿ ವಹಿಸಿಕೊಂಡು ದೊಡ್ಡವರ ಜೊತೆ ಕೈಜೋಡಿಸಿ ಮಹತ್ವದ ಹೋರಾಟ ನಡೆಸಿ ಯಶಸ್ಸು ಕಂಡವರು. ತಮ್ಮ ಬಳಿಯೇ ಭೂಮಿ ಇಲ್ಲದಿದ್ದರೂ ಗೇಣಿದಾರರ ಪರವಾಗಿ ನಿಸ್ವಾರ್ಥ ಹೋರಾಟ ನಡೆಸಿದ ವ್ಯಕ್ತಿ ಗೋಪಾಲಗೌಡರು ಎಂದು ಸಿಎಂ ಸ್ಮರಿಸಿದರು.

ಅವರು ವಿಧಾನಸಭೆಯ ಅತ್ಯಂತ ಪ್ರಮುಖರಲ್ಲಿ ಒಬ್ಬರಾಗಿದ್ದರು. 1967ರಲ್ಲಿ ಕಾಂಗ್ರೆಸ್ಸೇತರ ಪಕ್ಷಗಳಿಗೆ ಅತಿಹೆಚ್ಚು ಬಹುಮತ ಬಂದು ಆರರಿಂದ ಏಳು ರಾಜ್ಯದಲ್ಲಿ ಅಧಿಕಾರ ಹಿಡಿಯುವ ಅವಕಾಶ ಲಭಿಸಿತು. ಲೋಕಸಭೆಯಲ್ಲೂ ಸಹ ಅತಿ ಹೆಚ್ಚು ಸ್ಥಾನಗಳು ಪ್ರತಿಪಕ್ಷಗಳಿಗೆ ಇದೇ ವರ್ಷ ದೊರಕಿದ್ದವು. ಒಂದು ಸಂದರ್ಭದಲ್ಲಿ ನಮ್ಮ ತಂದೆಯವರು ಸೇರಿದಂತೆ ಎಲ್ಲ ನಾಯಕರು ಶಾಂತವೇರಿ ಗೋಪಾಲಗೌಡರನ್ನು ಯಾಕೆ ಮುಖ್ಯಮಂತ್ರಿ ಮಾಡಬಾರದು ಎಂದು ಯೋಚನೆ ಮಾಡಿದ್ದರು. ಆದರೆ, ಸಂಖ್ಯಾಬಲ ನಮ್ಮ ಬಳಿ ಇರಲಿಲ್ಲ. ಗೋಪಾಲಗೌಡರು ಆಸ್ಥಾನಕ್ಕೆ ಮೇರಿದ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.