ETV Bharat / state

ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಮುಂದೆ: 24 ಸಚಿವರಲ್ಲಿ 14 ಮಂದಿಗೆ ಹಿನ್ನಡೆ ಶಾಕ್​ - ಕರ್ನಾಟಕ ಕುರುಕ್ಷೇತ್ರ 2023

ಚುನಾವಣಾ ಅಖಾಡದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ 24 ಸಚಿವರು ಪರೀಕ್ಷೆಗೆ ಇಳಿದಿದ್ದು, ಯಾರ ಪಾಲಿಗೆ ಸಿಹಿ- ಕಹಿ ಸಿಗಲಿದೆ ಎಂಬುದು ಇಂದು ಗೊತ್ತಾಗಲಿದೆ. ಹಿರಿಯ ನಾಯಕರಾದ ವಿ.ಸೋಮಣ್ಣ ಮತ್ತು ಆರ್​ ಅಶೋಕ್​ ಅವರು 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ.

ಕನಕಪುರದಲ್ಲಿ ಅಶೋಕ್​ಗೆ ಹಿನ್ನಡೆ
ಕನಕಪುರದಲ್ಲಿ ಅಶೋಕ್​ಗೆ ಹಿನ್ನಡೆ
author img

By

Published : May 13, 2023, 8:45 AM IST

Updated : May 13, 2023, 10:53 AM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಚುನಾವಣಾ ಅಖಾಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಮತದಾರನ ತೀರ್ಪು ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರುವ ವಿ.ಸೋಮಣ್ಣ, ಆರ್​ ಅಶೋಕ್​ ಸೇರಿದಂತೆ ಸಂಪುಟದ 24 ಸಚಿವರ ರಾಜಕೀಯ ಹಣೆಬರಹ ಇಂದು ಗೊತ್ತಾಗಲಿದೆ.

ಸಿಎಂ ಬೊಮ್ಮಾಯಿ (ಶಿಗ್ಗಾಂವಿ): ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್​ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್​ ನಡುವೆ ಪೈಪೋಟಿ ಏರ್ಪಟ್ಟಿದೆ. ಬೊಮ್ಮಾಯಿ ಅವರು 12 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್​ ಮೊದಲಿಗೆ ಮೊಹಮ್ಮದ್ ಯೂಸುಫ್‌ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ನಂತರದಲ್ಲಿ ಏಕಾಏಕಿ ಅಭ್ಯರ್ಥಿಯನ್ನು ಬದಲಿಸಿ ಯಾಸಿರ್ ಅಹಮದ್ ಖಾನ್ ಪಠಾಣ್ ಅವರಿಗೆ ಟಿಕೆಟ್​ ನೀಡಿತ್ತು. ಬೊಮ್ಮಾಯಿ ಅವರು ಹಣಕಾಸು, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಹಲವು ಖಾತೆಗಳ ಹೊಣೆ ಹೊತ್ತಿದ್ದರು.

ಗೋವಿಂದ ಕಾರಜೋಳ (ಮಧೋಳ): ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದಿಂದ ಕಣದಲ್ಲಿರುವ ಹಿರಿಯ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್​ ಅಭ್ಯರ್ಥಿ ಆರ್​ಬಿ ತಿಮ್ಮಾಪೂರ ವಿರುದ್ಧ ಹಿನ್ನಡೆ ಸಾಧಿಸಿದ್ದಾರೆ. ಸತೀಶ್ ಬಂಡಿವಡ್ಡರ್ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್​ ಕೈ ತಪ್ಪಿದ ಕಾರಣ ಬಂಡಿವಡ್ಡರ್​​ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಇವರು ಬೊಮ್ಮಾಯಿ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆಯನ್ನು ನಿರ್ವಹಣೆ ಮಾಡಿದ್ದರು.

ಆರ್​. ಅಶೋಕ (ಪದ್ಮನಾಭನಗರ - ಕನಕಪುರ): ಸಚಿವ ಆರ್​.ಅಶೋಕ್​ ಕೂಡ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಪದ್ಮನಾಭನಗರದಲ್ಲಿ ಮುನ್ನಡೆ ಸಾಧಿಸಿದ್ದರೆ, ಕನಕಪುರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಹೈಕಮಾಂಡ್​ ತೀರ್ಮಾನದಂತೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ತಮ್ಮ ಹಿಂದಿನ ಪದ್ಮನಾಭನಗರ ಕ್ಷೇತ್ರದೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರನ್ನು ಕಟ್ಟಿ ಹಾಕುವ ಉದ್ದೇಶದಿಂದ ಕನಕಪುರದಲ್ಲೂ ಅಶೋಕ ಸ್ಪರ್ಧೆ ಮಾಡಿದ್ದು, ಸದ್ಯಕ್ಕೆ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್​ನ ಡಿಕೆ ಶಿವಕುಮಾರ್ ಮುನ್ನಡೆಯಲ್ಲಿದ್ದಾರೆ. ಕಂದಾಯ ಸಚಿವರಾಗಿದ್ದ ಆರ್​ ಅಶೋಕ್​, ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗಮನ ಸೆಳೆದಿದ್ದರು.

ಬಿ.ಶ್ರೀರಾಮುಲು (ಬಳ್ಳಾರಿ ಗ್ರಾಮೀಣ): ಸಾರಿಗೆ ಸಚಿವ ಆರ್​.ಅಶೋಕ್​ ಅವರು ಕ್ಷೇತ್ರದಲ್ಲಿ ಆಘಾತ ಅನುಭವಿಸಿದ್ದು, ಹಿನ್ನಡೆ ಹೊಂದಿದ್ದಾರೆ. ಈ ಹಿಂದೆ ಮೊಳಕಾಲ್ಮೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಚಿವ ಬಿ.ಶ್ರೀರಾಮುಲು ಈ ಬಾರಿ ಮತ್ತೆ ತಮ್ಮ ಹಳೆಯ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಚುನಾವಣೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್​ನಿಂದ ಬಿ.ನಾಗೇಂದ್ರ ಕಣದಲ್ಲಿದ್ದು, ನೇರ ಪೈಪೋಟಿ ಏರ್ಪಟ್ಟಿದೆ. ಸದ್ಯ ಟ್ರೆಂಡ್​ನಲ್ಲಿ ರಾಮುಲು ಮುನ್ನಡೆ ಕಾಯ್ದುಕೊಂಡಿದ್ದಾರೆ. ಶ್ರೀ ರಾಮುಲು ಬಿಎಸ್​ವೈ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಆ ಬಳಿಕ ಅವರು ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಂತಿಮವಾಗಿ ಅವರು ಸಾರಿಗೆ ಖಾತೆ ಸಚಿವರಾಗಿದ್ದರು.

ವಿ.ಸೋಮಣ್ಣ (ಚಾಮರಾಜನಗರ - ವರುಣ): ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಹಿರಿಯ ನಾಯಕ, ಸಚಿವ ವಿ.ಸೋಮಣ್ಣ ಅವರು ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಗೋವಿಂದ ರಾಜನಗರ ಬದಲಿಗೆ ಚಾಮರಾಜನಗರ ಮತ್ತು ವರುಣ ಎರಡೂ ಕಡೆ ಸಹ ಸೋಮಣ್ಣ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಾಮರಾಜ ನಗರದಿಂದ ಸ್ಪರ್ಧಿಸಲಷ್ಟೇ ಒಲವು ಹೊಂದಿದ್ದ ಸೋಮಣ್ಣಗೆ, ಹೈಕಮಾಂಡ್​​​ ವರುಣಾದಲ್ಲೂ ಟಿಕೆಟ್​ ನೀಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಲು ಹಚ್ಚಿತ್ತು. ಚಾಮರಾಜನಗರದಲ್ಲಿ ಕಾಂಗ್ರೆಸ್​ನಿಂದ ಹ್ಯಾಟ್ರಿಕ್ ಗೆಲುವು ಕಂಡಿರುವ ಪುಟ್ಟರಂಗ ಶೆಟ್ಟಿ ಅವರೊಂದಿಗೆ ಸೋಮಣ್ಣ ತೀವ್ರ ಜಿದ್ದಾಜಿದ್ದಿಗೆ ಪೈಪೋಟಿಗೆ ಇಳಿದಿದ್ದಾರೆ. ವಸತಿ ಖಾತೆ ಸಚಿವರಾಗಿ ಸೋಮಣ್ಣ ಬೊಮ್ಮಾಯಿ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಜೆಸಿ ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ): ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸಚಿವ ಜೆಸಿ ಮಾಧುಸ್ವಾಮಿ ಅವರು ಮೊದಲ ಹಂತದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಟಿಕೆಟ್​ ಸಿಗದ ಕಾರಣ ಕೆಎಸ್​ ಕಿರಣ್​ಕುಮಾರ್ ಕಾಂಗ್ರೆಸ್​ನಿಂದ ಕಣದಲ್ಲಿದ್ದರೆ, ಜೆಡಿಎಸ್​ನಿಂದ ಈ ಹಿಂದೆ ಮೂರು ಬಾರಿ ಗೆದ್ದಿದ್ದ ಮಾಜಿ ಶಾಸಕ ಸಿಬಿ ಸುರೇಶ ಬಾಬು ಸವಾಲು ಎಸೆದಿದ್ದಾರೆ. ಸದ್ಯದ ಟ್ರೆಂಡ್​ನಲ್ಲಿ ಏರಿಳಿತ ಕಂಡು ಬರುತ್ತಿದೆ. ಇವರು ಬೊಮ್ಮಾಯಿ ಸಚಿವ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿ ಕೆಲಸ ಮಾಡಿದ್ದಾರೆ.

ಆರಗ ಜ್ಞಾನೇಂದ್ರ (ತೀರ್ಥಹಳ್ಳಿ): ಶಿವಮೊಗ್ಗ ಕ್ಷೇತ್ರದಲ್ಲಿ ಸಚಿವ ಆರಗ ಜ್ಞಾನೇಂದ್ರ ಮುನ್ನಡೆ ಹೊಂದಿದ್ದಾರೆ. ಕಾಂಗ್ರೆಸ್​ನ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. 1983ರಿಂದ ಇಲ್ಲಿವರೆಗೂ ಆರಗ ಅವರು ಸತತ 10 ಬಾರಿ ಸ್ಪರ್ಧಿಸಿ ದಾಖಲೆ ಬರೆದಿದ್ದಾರೆ. ಇದುವರೆಗೂ ನಾಲ್ಕು ಬಾರಿ ಗೆದ್ದಿರುವ ಅವರು, ಐದು ಅವಧಿಗಳಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ಗೆದ್ದರೆ ಅವರಿಗೆ ಐದನೇ ಗೆಲುವು ದೊರೆಯಲಿದೆ. ಎರಡೂವರೆ ದಶಕದಿಂದ ಇಬ್ಬರು ನಡುವೆಯೇ ನೇರ ಪೈಪೋಟಿ ಇದೆ. ಸದ್ಯ ಸಚಿವ ಜ್ಞಾನೇಂದ್ರ ಮುನ್ನಡೆಯಲ್ಲಿದ್ದಾರೆ. ಹಲವು ಟೀಕೆಗಳ ನಡುವೆ ಸಂಪುಟ ಸೇರಿದ ಮೊದಲ ಯತ್ನದಲ್ಲೇ ಗೃಹ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.

ಸಿಎನ್​ ಅಶ್ವತ್ಥ ನಾರಾಯಣ (ಮಲ್ಲೇಶ್ವರ): ಬೆಂಗಳೂರಿನಲ್ಲಿ ಮಲ್ಲೇಶ್ವರ ಕ್ಷೇತ್ರದಲ್ಲಿ ಸಚಿವ ಸಿಎನ್​ ಅಶ್ವತ್ಥ ನಾರಾಯಣ ನಿರೀಕ್ಷೆಯಂತೆ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್​ನ ಅನೂಪ್ ಅಯ್ಯಂಗಾರ್ ನಡುವೆ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್​ನಿಂದ ಉತ್ಕರ್ಷ ಕಣದಲ್ಲಿದ್ದು, ಸದ್ಯ ಅಶ್ವತ್ಥ ನಾರಾಯಣ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಇವರು ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಮೊದಲು ಬಿಎಸ್​ವೈ ಸಂಪುಟದಲ್ಲಿ ಡಿಸಿಎಂ ಆಗಿದ್ದರು.

ಸಿಸಿ ಪಾಟೀಲ್ (ನರಗುಂದ): ಗದಗ ಜಿಲ್ಲೆಯ ನರಗುಂದ ಕ್ಷೇತ್ರದಲ್ಲಿ ಸಿಸಿ ಪಾಟೀಲ್ ಹಿನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​ನಿಂದ ಬಿಆರ್​ ಯಾವಗಲ್ ಕಣದಲ್ಲಿದ್ದಾರೆ. ಇದೇ ಕ್ಷೇತ್ರದಲ್ಲಿ ಈ ಹಿಂದೆ ಐದು ಬಾರಿ ಯಾವಗಲ್ ಗೆದ್ದಿದ್ದರು. ಸಿಸಿ ಪಾಟೀಲ್​ ಮೂರು ಮೂರು ಸಲ ಗೆಲುವು ಕಂಡಿದ್ದಾರೆ. ಇಬ್ಬರ ನಡುವೆ ಪೈಪೋಟಿ ಕಂಡು ಬರುತ್ತಿದೆ. ಸಿಸಿ ಪಾಟೀಲ್​ ಲೋಕೋಪಯೋಗಿ ಸಚಿವರಾಗಿದ್ದರು.

ಪ್ರಭು ಚವ್ಹಾಣ್ (ಔರಾದ್​): ಬೀದರ್​ ಜಿಲ್ಲೆಯ ಔರಾದ್​ ಕ್ಷೇತ್ರದಲ್ಲಿ ಪ್ರಭು ಚವ್ಹಾಣ್ ಕಣದಲ್ಲಿ ಮುನ್ನಡೆ ಹೊಂದಿದ್ದಾರೆ. ಕಾಂಗ್ರೆಸ್​ನಿಂದ ಭೀಮಸೇನ್ ರಾವ್ ಶಿಂಧೆ ಮತ್ತು ಜೆಡಿಎಸ್​ನಿಂದ ಜೈಸಿಂಗ್​ ಸ್ಪರ್ಧೆ ಮಾಡಿದ್ದಾರೆ. ಪಶುಸಂಗೋಪನೆ ಸಚಿವರಾಗಿ ಚವ್ಹಾಣ್​ ಮಹತ್ವದ ಮಸೂದೆಗಳನ್ನು ಮಂಡಿಸಿ ಗಮನ ಸೆಳೆದಿದ್ದರು.

ಮುರುಗೇಶ ನಿರಾಣಿ (ಬೀಳಗಿ): ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದಲ್ಲಿ ಸಚಿವ ಮುರುಗೇಶ ನಿರಾಣಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್​ನ ಜೆಟಿ ಪಾಟೀಲ್​ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬೀಳಗಿ ಕಳೆದ ಆರು ಚುನಾವಣೆಗಳು ಎಂದರೆ 1994 ರಿಂದಲೂ ನಿರಾಣಿ ಮತ್ತು ಪಾಟೀಲ್ ನಡುವಿನ ಜಿದ್ದಾಜಿದ್ದಿನ ಕಣವಾಗಿದ್ದು, ಇಬ್ಬರು ಕೂಡ ತಲಾ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಯಾರು ವಿಜಯ ಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಕಾಂಗ್ರೆಸ್​ನ ಟಿಕೆಟ್​ ವಂಚಿತ ಇತರ ಮುಖಂಡರು ಅತೃಪ್ತಿ ಹೊಂದಿದ್ದು, ಕಾಂಗ್ರೆಸ್​ಗೆ ಒಳೇಟಿನ ಭೀತಿಯೂ ಇದೆ. ಭಾರಿ ಕೈಗಾರಿಕಾ ಸಚಿವರಾಗಿದ್ದ ನಿರಾಣಿ, ಬಿಎಸ್​ವೈ ರಾಜೀನಾಮೆ ಬಳಿಕ ಸಿಎಂ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದರು.

ಶಿವರಾಮ ಹೆಬ್ಬಾರ್ (ಯಲ್ಲಾಪುರ): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಮುನ್ನಡೆ ಕಾಣುತ್ತಿದ್ದಾರೆ. 2013, 2018ರಲ್ಲಿ ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದ ಅವರು, ಬಳಿಕ ಬಿಜೆಪಿ ಸೇರಿ ಉಪಚುನಾವಣೆಯಲ್ಲೂ ಗೆಲುವು ಸಾಧಿಸಿದ್ದರು. 2013, 2018ರ ಎರಡೂ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿಎಸ್​ ಪಾಟೀಲ್​ ಸೋತಿದ್ದರು. ಈ ಬಾರಿ ಕಾಂಗ್ರೆಸ್​ನಿಂದ ವಿಎಸ್​ ಪಾಟೀಲ್​, ಹೆಬ್ಬಾರ್​ ವಿರುದ್ಧ ಕಣಕ್ಕಿಳಿದಿದ್ದರು. ನೇರಾನೇರ ಸ್ಪರ್ಧೆ ಇದೆ. ಹೆಬ್ಬಾರ್​ ಕಾರ್ಮಿಕ ಸಚಿವರಾಗಿ ಹಿಂದಿನ ಸರ್ಕಾರದಲ್ಲಿ ಕೆಲಸ ಮಾಡಿದ್ದಾರೆ.

ಎಸ್.​ಟಿ.ಸೋಮಶೇಖರ್ (ಯಶವಂತಪುರ): ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಸಚಿವ ಎಸ್.​ಟಿ.ಸೋಮಶೇಖರ್ ಹಿನ್ನಡೆಗೆ ಗುರಿಯಾಗಿದ್ದಾರೆ. ಜೆಡಿಎಸ್​ನಿಂದ ಜವರಾಯಿಗೌಡ ಹಾಗೂ ಕಾಂಗ್ರೆಸ್​ನಿಂದ​ ಎಸ್​.ಬಾಲರಾಜ್​ಗೌಡ ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ. 2013 ಮತ್ತು 2018ರಲ್ಲಿ ಎರಡು ಬಾರಿ ಕಾಂಗ್ರೆಸ್​ನಿಂದ ಗೆದ್ದಿದ್ದ ಸೋಮಶೇಖರ್ 2019ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಸೋಮಶೇಖರ್​ ಸಹಕಾರ ಸಚಿವರಾಗಿದ್ದರಲ್ಲದೇ, ಮೈಸೂರು ಜಿಲ್ಲಾ ವಸ್ತುವಾರಿ ಆಗಿ ಸಹ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.

ಬಿಸಿ ಪಾಟೀಲ್ (ಹಿರೇಕೆರೂರು): ಕೃಷಿ ಸಚಿವ ಸಚಿವ ಬಿಸಿ ಪಾಟೀಲ್ ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸುತ್ತಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಮಾಜಿ ಶಾಸಕ ಯು.ಬಿ.ಬಣಕಾರ್ ಕಣದಲ್ಲಿದ್ದಾರೆ. ಇಬ್ಬರ ನಡುವೆ ತೀವ್ರ ಹಣಾಹಣಿ ಇದೆ. 2004 ರಿಂದಲೂ ಇಬ್ಬರ ನಡುವೆ ತುರುಸಿನ ಸ್ಪರ್ಧೆ ನಡೆಯುತ್ತಿದೆ. ಇವರು ಬಿಎಸ್​ವೈ ಹಾಗೂ ಬೊಮ್ಮಾಯಿ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರು,

ಬೈರತಿ ಬಸವರಾಜ (ಕೆಆರ್ ಪುರಂ): ಬೆಂಗಳೂರಿನ ಕೆಆರ್ ಪುರಂ ಕ್ಷೇತ್ರದಲ್ಲಿ ಸಚಿವ ಬೈರತಿ ಬಸವರಾಜ್ ಕಣದಲ್ಲಿ ಮುನ್ನಡೆ ಹೊಂದಿದ್ದಾರೆ. ಈ ಹಿಂದೆ ಇವರು ಕೂಡ ಕಾಂಗ್ರೆಸ್​ನಿಂದ ಎರಡು ಬಾರಿ ಗೆಲುವು ಕಂಡಿದ್ದರು. ನಂತರ ಬಿಜೆಪಿ ಸೇರಿದ್ದಾರೆ. ಈ ಬಾರಿ ಕಾಂಗ್ರೆಸ್​ನಿಂದ ಡಿಕೆ ಮೋಹನ್​ ಸ್ಪರ್ಧೆ ಮಾಡಿದ್ದಾರೆ. ಇವರು ಈ ಹಿಂದಿನ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು.

ಡಾ. ಕೆ.ಸುಧಾಕರ್ (ಚಿಕ್ಕಬಳ್ಳಾಪುರ): ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಚಿವ ಡಾ.ಕೆ.ಸುಧಾಕರ್ ತೀವ್ರ ಸ್ಪರ್ಧೆಗೆ ಗುರಿಯಾಗಿದ್ದು, ಹಿನ್ನಡೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್​ನಿಂದ ಪ್ರದೀಪ್​ ಈಶ್ವರ್​ ಎದುರಾಳಿಯಾಗಿದ್ದಾರೆ. 2013 ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಗೆಲುವು ಕಂಡಿದ್ದ ಸುಧಾಕರ್, ನಂತರ ಬಿಜೆಪಿ ಸೇರಿದ್ದರು. ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಸುಧಾಕರ್​ ಕೋವಿಡ್ ಅವಧಿಯಲ್ಲಿ ಆರೋಗ್ಯ ಖಾತೆಯನ್ನು ವಹಿಸಿಕೊಳ್ಳುವ ಮೂಲಕ ಬೊಮ್ಮಾಯಿ ಸಂಪುಟದಲ್ಲಿ ಮಹತ್ವದ ಭೂಮಿಕೆ ನಿರ್ವಹಿಸಿದ್ದರು.

ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್): ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಕೆ.ಗೋಪಾಲಯ್ಯ ಕಣದಲ್ಲಿ ಮುನ್ನಡೆ ಹೊಂದಿದ್ದಾರೆ. ಕಾಂಗ್ರೆಸ್​ನಿಂದ ಕೇಶವಮೂರ್ತಿ ಎಸ್​. ಹಾಗೂ ಜೆಡಿಎಸ್​ನಿಂದ ಕೆಸಿ ರಾಜಣ್ಣ ಸ್ಪರ್ಧೆ ಮಾಡಿದ್ದಾರೆ. 2013, 2018ರಲ್ಲಿ ಜೆಡಿಎಸ್​ನಿಂದ ಗೆದ್ದಿದ್ದ ಗೋಪಾಲಯ್ಯ ನಂತರ ಪಕ್ಷ ಬದಲಿಸಿದ್ದರು. ಗೋಪಾಲಯ್ಯ ಹಾಸನ ಉಸ್ತುವಾರಿ ಸಚಿವರಾಗಿದ್ದರಲ್ಲದೇ ಅಬಕಾರಿ ಖಾತೆಯನ್ನು ನಿರ್ವಹಣೆ ಮಾಡಿದ್ದರು.

ಶಶಿಕಲಾ ಜೊಲ್ಲೆ (ನಿಪ್ಪಾಣಿ): ಬೆಳಗಾವಿಯ ಜಿಲ್ಲೆ ನಿಪ್ಪಾಣಿ ಕ್ಷೇತ್ರದಿಂದ ಸಚಿವ ಶಶಿಕಲಾ ಜೊಲ್ಲೆ ಮುನ್ನಡೆ ಸಾಧಿಸುತ್ತಿದ್ದಾರೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ಕಾಕಾಸಾಹೇಬ ಪಿ.ಪಾಟೀಲ ಕಣದಲ್ಲಿದ್ದು, ಪ್ರಬಲ ಸ್ಪರ್ಧೆಯನ್ನು ಒಡ್ಡಿದ್ದಾರೆ. 2018ರಲ್ಲಿ ಮೊದಲ ಚುನಾವಣೆ ಎದುರಿಸಿದ್ದ ಜೊಲ್ಲೆ ಸೋಲು ಕಂಡಿದ್ದರು. ನಂತರದಲ್ಲಿ 2013 ಮತ್ತು 2018ರ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಹ್ಯಾಟ್ರಿಕ್​ ಸಾಧನೆಯಲ್ಲಿ ಹುಮ್ಮಸ್ಸಿನಲ್ಲಿದ್ದಾರೆ. ಮೊದಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಇವರು ಕೊನೆಗೆ ಮುಜರಾಯಿ ಖಾತೆ ಸಚಿವರಾಗಿ ಕೆಲಸ ಮಾಡಿದ್ದರು.

ಎಂಟಿಬಿ ನಾಗರಾಜ್ (ಹೊಸಕೋಟೆ): ಸದ್ಯ ವಿಧಾನ ಪರಿಷತ್​ ಸದಸ್ಯರಾಗಿರುವ ಸಚಿವ ಎಂಟಿಎಂ ನಾಗರಾಜ್ ಹೊಸಕೋಟೆ ಕ್ಷೇತ್ರದಲ್ಲಿ ಹಿನ್ನಡೆಯಾಗಿದ್ದು, ಸ್ಪರ್ಧೆ ತೀವ್ರವಾಗಿದೆ. ಕಾಂಗ್ರೆಸ್​ ತೊರೆದು ನಾಗರಾಜ್​ ಬಿಜೆಪಿ ಸೇರಿದ್ದ ಎಂಟಿಎಂ 2019ರ ಉಪ ಚುನಾವಣೆಯಲ್ಲಿ ಸೋತಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದಿರುವ ಹಾಲಿ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ತೀವ್ರ ಪೈಪೋಟಿ ನೀಡಿದ್ದಾರೆ. ಇವರು ಬೊಮ್ಮಾಯಿ ಸರ್ಕಾರದಲ್ಲಿ ಪೌರಾಡಳಿತ ಖಾತೆ ಸಚಿವರಾಗಿದ್ದರು.

ಕೆಸಿ ನಾರಾಯಣ ಗೌಡ (ಕೆಆರ್ ಪೇಟೆ): ಮಂಡ್ಯದ ಕೆಆರ್ ಪೇಟೆ ಕ್ಷೇತ್ರದಲ್ಲಿ ಸಚಿವ ಕೆಸಿ ನಾರಾಯಣ ಗೌಡ ಹಿನ್ನಡೆ ಕಂಡಿದ್ದಾರೆ. 2013, 2018ರ ಚುನಾವಣೆಯಲ್ಲಿ ಜೆಡಿಎಸ್​ನಿಂದ ಗೆದ್ದಿದ್ದ ನಾರಾಯಣ ಗೌಡ, ಬಿಜೆಪಿ ಸೇರ್ಪಡೆಗೊಂಡಿದ್ದರು. ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್​ನ ಬಿಎಲ್​ ದೇವರಾಜ ತೀವ್ರ ಸ್ಪರ್ಧೆ ನೀಡುತ್ತಿದ್ದು, ಮುನ್ನಡೆ ಹೊಂದಿದ್ದಾರೆ. ಇದಲ್ಲದೇ, ಜೆಡಿಎಸ್​ನಿಂದ ಹೆಚ್​ಟಿ ಮಂಜು ಕಣದಲ್ಲಿದ್ದಾರೆ. ಇವರು ಯುವಜನಖಾತೆ ಸಚಿವರಾಗಿದ್ದರು, ಜೊತೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ.

ಬಿಸಿ ನಾಗೇಶ್ (ತಿಪಟೂರು): ತುಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರದಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಹಿನ್ನಡೆಯಲ್ಲಿದ್ದಾರೆ. ಕಾಂಗ್ರೆಸ್​ನ ಕೆ.ಷಡಕ್ಷರಿ ತೀವ್ರ ಸ್ಪರ್ಧೆ ನೀಡುತ್ತಿದ್ದು, ಮುನ್ನಡೆ ಸಾಧಿಸಿದ್ದಾರೆ. 1999ರಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದ ಷಡಕ್ಷರಿ, 2008ರಿಂದ ನಾಗೇಶ್ ಅವರೊಂದಿಗೆ ಪೈಪೋಟಿ ಎದುರಿಸುತ್ತಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಅವರೊಮ್ಮೆ, ಇವರೊಮ್ಮೆ ಜಯ ಸಾಧಿಸಿಕೊಂಡು ಬಂದಿದ್ದಾರೆ. ಈ ಬಾರಿ ಗೆಲ್ಲಲೇಬೇಕೆಂಬ ಜಿದ್ದಿಗೆ ಷಡಕ್ಷರಿ ಬಿದ್ದಿದ್ದಾರೆ. ಪ್ರಾಥಮಿಕ ಶಿಕ್ಷಣ ಸಚಿವರಾಗಿ ಇವರು ಪರಿಚಿತ. ಹಿಜಾಬ್ ವಿವಾದದ ವೇಳೆ ಇವರು ದೇಶಾದ್ಯಂತ ಸುದ್ದಿ ಆಗಿದ್ದರು.

ವಿ.ಸುನೀಲ್​ ಕುಮಾರ್ (ಕಾರ್ಕಳ)​: ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ಸಚಿವ ಸುನೀಲ್​ ಕುಮಾರ್ ಈ ಸಲ ಭಾರಿ ಪೈಪೋಟಿಯನ್ನು ಎದುರಿಸುತ್ತಿದ್ದರೂ, ಮುನ್ನಡೆ ಹೊಂದಿದ್ದಾರೆ. 2004ರಿಂದ ಒಮ್ಮೆ ಹೊರತು ಪಡಿಸಿ ಮೂರು ಬಾರಿ ಗೆದ್ದಿರುವ ಸುನೀಲ್​ ಕುಮಾರ್ ಅವರಿಗೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಪ್ರಬಲ ಪೈಪೋಟಿಯಾಗಿದ್ದಾರೆ. ಹಿಂದುತ್ವದ ಹೆಸರಲ್ಲಿ ಮುತಾಲಿಕ್​ ಸುನೀಲ್​ ಕುಮಾರ್ ಅವರಿಗೆ ಎದುರಾಳಿಯಾಗಿದ್ದಾರೆ. ಕಾಂಗ್ರೆಸ್​ನಿಂದ ಉದಯ ಶೆಟ್ಟಿ ಮುನಿಯಾಲ್ ಸಹ ಕಣದಲ್ಲಿದ್ದು, ಕಾರ್ಕಳ ಕುತೂಹಲದ ಕಣವಾಗಿದೆ. ಇಂಧನ ಖಾತೆ ಸಚಿವರಾಗಿ ಇವರು ಕಾರ್ಯ ನಿರ್ವಹಣೆ ಮಾಡಿದ್ದರು.

ಹಾಲಪ್ಪ ಆಚಾರ್ (ಯಲಬುರ್ಗಾ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದಲ್ಲಿ ಸಚಿವ ಹಾಲಪ್ಪ ಆಚಾರ್ ಕೂಡ ಕಠಿಣ ಸರ್ಧೆಯನ್ನು ಎದುರಿಸುತ್ತಿದ್ದು, ಸದ್ಯಕ್ಕೆ ಹಿನ್ನಡೆಯಲ್ಲಿದ್ದಾರೆ. ಕಾಂಗ್ರೆಸ್​ನ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮುನ್ನಡೆ ಸಾಧಿಸುತ್ತಿದ್ದಾರೆ. ಈ ಬಾರಿ ಗೆಲುವಿಗಾಗಿ ಸಾಕಷ್ಟು ಕಸರತ್ತು ಸಹ ನಡೆಸಿದ್ದಾರೆ. ಜೆಡಿಎಸ್​ನಿಂದ ಕೋಣನಗೌಡರ ಮಲ್ಲನಗೌಡ ಸಹ ಕಣದಲ್ಲಿದ್ದಾರೆ. ಬೊಮ್ಮಾಯಿ ಸರ್ಕಾರದಲ್ಲಿ ಹಾಲಪ್ಪ ಆಚಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿರಾಗಿ ಕೆಲಸ ಮಾಡಿದ್ದರು.

ಶಂಕರ್​ ಪಾಟೀಲ್​ ಮುನೇನಕೊಪ್ಪ (ನವಲಗುಂದ): ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮೊದಲ ಹಂತದಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ​ಎನ್​ಹೆಚ್ ಕೋನರೆಡ್ಡಿ ಅವರು ಮುನ್ನಡೆಯಲ್ಲಿದ್ದಾರೆ. ಕಣ ಜಿದ್ದಾಜಿದ್ದಿನಿಂದ ಕೂಡಿದೆ. 2013ರಲ್ಲಿ ಜೆಡಿಎಸ್​ನಿಂದ ಗೆದ್ದಿದ್ದ ಕೋನರೆಡ್ಡಿ, ಅವರನ್ನು 2018ರಲ್ಲಿ ಮುನೇನಕೊಪ್ಪ ಸೋಲಿಸಿದ್ದರು. ಹೀಗಾಗಿ ಬಾರಿ ಗೆಲುವು ಒತ್ತಡದಲ್ಲಿ ಕೋನರೆಡ್ಡಿ ಇದ್ದಾರೆ. ಇವರು ಸಕ್ಕರೆ ಖಾತೆ ಸಚಿವರಾಗಿ ಇವರು ಕರ್ತವ್ಯ ನಿರ್ವಹಿಸಿದ್ದರು.

ಮುನಿರತ್ನ (ಆರ್​ಆರ್​ ನಗರ): ಬೆಂಗಳೂರಿನ ಆರ್​ಆರ್​ ನಗರ ಕ್ಷೇತ್ರದಲ್ಲಿ ಸಚಿವ ಮುನಿರತ್ನ ಭಾರಿ ಪೈಪೋಟಿಯ ಮಧ್ಯೆ ಮುನ್ನಡೆಯಲ್ಲಿದ್ದಾರೆ. 2013, 2018ರಲ್ಲಿ ಕಾಂಗ್ರೆಸ್​ನಿಂದ ಗೆದ್ದಿದ್ದ ಮುನಿರತ್ನ, ನಂತರ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಮತ್ತೆ ಗೆದ್ದಿದ್ದರು. ಕಾಂಗ್ರೆಸ್​ನಿಂದ ಐಎಎಸ್ ಅಧಿಕಾರಿಯಾಗಿದ್ದ ದಿ. ಡಿಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರು ಹಿನ್ನಡೆ ಹೊಂದಿದ್ದಾರೆ. ಮುನಿರತ್ನ ಅವರು ತೋಟಗಾರಿಕಾ ಖಾತೆ ಜತೆ ಸಾಂಖಿಕ ಖಾತೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

Last Updated : May 13, 2023, 10:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.