ETV Bharat / state

1 ಗಂಟೆ ತಡವಾಗಿ ಸಿಎಲ್​ಪಿ ಸಭೆ ಆರಂಭ.. ಸದನದಲ್ಲಿ ನಡೆಯಲಿದೆಯಾ ಹೈಡ್ರಾಮಾ? - ಸದನದಲ್ಲಿ ನಡೆಯಲಿದ್ಯಾ ಹೈಡ್ರಾಮಾ?

9 ಗಂಟೆಗೆ ಆರಂಭವಾಗಬೇಕಿದ್ದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ 1 ಗಂಟೆ ತಡವಾಗಿ ಆರಂಭವಾಗಿದೆ. ಇಂದಿನ ವಿಶ್ವಾಸಮತ ಸಾಬೀತು ಸಂದರ್ಭ ಸಂಖ್ಯಾಬಲ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಸಭಾತ್ಯಾಗ ಮಾಡಲು ನಿರ್ಧರಿಸಿದೆ ಎಂಬ ಮಾತು ಕೇಳಿ ಬರುತ್ತಿದೆ.

ಸಿಎಲ್​ಪಿ ಸಭೆ ಆರಂಭ
author img

By

Published : Jul 29, 2019, 10:49 AM IST

ಬೆಂಗಳೂರು: ವಿಧಾನಸೌಧದಲ್ಲಿ 9 ಗಂಟೆಗೆ ಆರಂಭವಾಗಬೇಕಿದ್ದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ 1 ಗಂಟೆ ತಡವಾಗಿ ಆರಂಭವಾಗಿದೆ.

ಶಾಸಕಾಂಗ ಸಭೆಯಲ್ಲಿ ಎಲ್ಲರೂ ಒಗ್ಗಟ್ಟಾಗಿರುವ ನಿರ್ಣಯ ಕೈಗೊಳ್ಳಲಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರು ವೈದ್ಯರ ಸಲಹೆ ಪಡೆದು ಬರುವ ಸಾಧ್ಯತೆ ಇದೆ. ಪಕ್ಷ ಬಯಸಿದಲ್ಲಿ, ಸಂಖ್ಯಾಬಲ ಅಗತ್ಯ ಎದುರಾದರೆ ಬರುವ ಸಾಧ್ಯತೆ ಇದೆ.

ಸಿಎಲ್​ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದ್ದು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಬಹುಮತ ಸಾಬೀತು ಸಂದರ್ಭ ಉಪಸ್ಥಿತರಿರುವುದೋ ಅಥವಾ ಸಭಾತ್ಯಾಗ ಮಾಡುವುದೋ ಎಂಬ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ.

ಸಿಎಲ್​ಪಿ ಸಭೆ ಆರಂಭ..

ಸದನದಲ್ಲಿ ನಡೆಯಲಿದೆ ಹೈಡ್ರಾಮಾ :

ಇಂದಿನ ವಿಶ್ವಾಸಮತ ಸಾಬೀತು ಸಂದರ್ಭ ಸಂಖ್ಯಾಬಲ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಸಭಾತ್ಯಾಗ ಮಾಡಲು ನಿರ್ಧರಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಬಿಜೆಪಿಯ ನಿಲುವನ್ನು ವಿರೋಧಿಸಿ ಕೈ ಶಾಸಕರು ಸಭಾತ್ಯಾಗ ಮಾಡುವ ಚಿಂತನೆ ನಡೆಸಿದ್ದಾರೆ. ಆಪರೇಷನ್ ಕಮಲ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಎಂಬ ಕಾರಣಕ್ಕೆ ಸಭಾತ್ಯಾಗ ಸಾಧ್ಯತೆ ಬಗ್ಗೆ ಸಿಎಲ್​ಪಿಯಲ್ಲಿ ಚರ್ಚೆ ನಡೆಯುತ್ತಿದೆಯಂತೆ. ಸಭಾತ್ಯಾಗ ಮಾಡುವ ಮೂಲಕ ಬಿಜೆಪಿಗೆ ಮುಖಭಂಗ ಮಾಡಲು ಕೈ ನಾಯಕರು ಚಿಂತಿಸಿದ್ದಾರೆ ಎನ್ನಲಾಗಿದೆ.

Intro:newsBody:ಕೊಂಚ ತಡವಾಗಿ ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭ

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವಿಧಾನಸೌಧದಲ್ಲಿ ಕೊಂಚ ತಡವಾಗಿ ಆರಂಭವಾಯಿತು.
79 ಸಂಖ್ಯಾಬಲ ಹೊಂದಿದ್ದ ಕಾಂಗ್ರೆಸ್ 13 ಶಾಸಕರ ಅನರ್ಹತೆ ಹಿನ್ನೆಲೆ ಜತೆಗೆ ಪಕ್ಷೇತರ ಶಾಸಕ ಆರ್. ಶಂಕರ್ ತಮ್ಮನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿಕೊಂಡು ನಂತರ ಬಿಜೆಪಿಗೆ ಬೆಂಬಲ ನೀಡಿದ ಹಿನ್ನೆಲೆ ಅನರ್ಹಗೊಂಡಿದ್ದು ಇವರೂ ಸೇರಿ 80 ಸದಸ್ಯರ ಬೆಂಬಲ ಹೊಂದಿದ್ದ ಕಾಂಗ್ರೆಸ್ ಈಗ 66 ಕ್ಕೆ ಕುಸಿದಿದೆ. ಇಂದು ಶಾಸಕಾಂಗ ಸಭೆ ನಡೆಸಿ ಎಲ್ಲರೂ ಒಗ್ಗಟ್ಟಾಗಿರುವಂತೆ ಸೂಚಿಸಲಾಗುವುದು. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರು ವೈದ್ಯರ ಸಲಹೆ ಪಡೆದು ಬರುವ ಸಾಧ್ಯತೆ ಇದೆ. ಪಕ್ಷ ಬಯಸಿದಲ್ಲಿ, ಸಂಖ್ಯಾಬಲ ಅಗತ್ಯ ಎದುರಾದರೆ ಬರುವ ಸಾಧ್ಯತೆ ಇದೆ.
ಸಭಾತ್ಯಾಗ
ಮಾಜಿ ಸಿಎಂ ಹಾಗೂ ಸಿಎಲ್ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಶಾಸಕಾಂಗ ಸಭೆ ನಡೆಯಲಿದ್ದು, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಬಹುಮತ ಸಾಬೀತು ಸಂದರ್ಭ ಉಪಸ್ಥಿತರಿರುವುದೋ, ಸಭಾತ್ಯಾಗ ಮಾಡುವುದೋ ಎಂಬ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ಮೂಲದ ಪ್ರಕಾರ ಇಂದಿನ ವಿಶ್ವಾಸಮತ ಸಾಬೀತು ಸಂದರ್ಭ ಸಂಖ್ಯಾಬಲ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಸಭಾತ್ಯಾಗ ಮಾಡಲು ನಿರ್ಧರಿಸಿದೆ ಎಂಬ ಮಾತಿದೆ. ಅದರ ಕುರಿತು ಕೂಡ ಇಂದಿನ ಸಭೆಯಲ್ಲಿ ಚರ್ಚೆ ಆಗಲಿದೆ.
ಸದನದಲ್ಲಿ ನಡೆಯಲಿದೆ ಹೈಡ್ರಾಮಾ
ಬಿಜೆಪಿಯ ನಿಲುವನ್ನು ವಿರೋಧಿಸಿ ಕಾಂಗ್ರೆಸ್ ಶಾಸಕರು ಸಭಾತ್ಯಾಗ ಮಾಡುವ ಚಿಂತನೆ ನಡೆದಿದೆ. ಆಪರೇಷನ್ ಕಮಲ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಎಂಬ ಕಾರಣಕ್ಕೆ ಸಭಾತ್ಯಾಗ ಸಾಧ್ಯತೆ ಬಗ್ಗೆ ಸಿಎಲ್ಪಿ ಯಲ್ಲಿ ಚರ್ಚೆ ನಡೆಯಲಿದೆ.
ಹೇಗಿದ್ದರೂ ವಿಶ್ವಾಸಮತಯಾಚನೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ಸಭಾ ತ್ಯಾಗ ಮಾಡುವ ಮೂಲಕ ಬಿಜೆಪಿಗೆ ಮುಖಭಂಗ ಮಾಡಲು ಕೈ ನಾಯಕರ ಯೋಚನೆ ನಡೆದಿದೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ಎಲ್ಲ ಶಾಸಕರು ಸಭಾ ತ್ಯಾಗದ ಬಗ್ಗೆ ಮಾತುಕತೆ ನಡೆದಿದೆ.
ಸದನದಲ್ಲಿ ಬಿಜೆಪಿ ಜೆಡಿಎಸ್ ತಂತ್ರವನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಕೊಂಚ ವಿಳಂಬ
ಬೆಳಗ್ಗೆ 9 ಕ್ಕೆ ಆಭವಾಗಬೇಕಿದ್ದ ಶಾಸಕಾಂಗ ಸಭೆ ಒಂದು ಗಂಟೆ ತಡವಾಗಿ ಆರಂಭವಾಗಿದೆ. ತರಾತುರಿಯಲ್ಲಿ ಸಭೆ ನಡೆಯುತ್ತಿದ್ದು, ಬೆಳಗ್ಗೆ11 ಕ್ಕೆ ಎರಡು ದಿನಗಳ ವಿಧಾನಸಭೆ ವಿಶೇಷ ಅಧಿವೇಷನ ಆರಂಭವಾಗಲಿದ್ದು ಇದರಲ್ಲಿ ಹಾಜರಾಗಬೇಕಿದೆ. ಎಲ್ಲಾ ಸದಸ್ಯರೂ ಹಾಜರಾಗಿ ನಂತರ ಸಭಾತ್ಯಾಗ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಬಹುಮತ ಸಾಬೀತು ಮತಕ್ಕೆ ಬೀಳುವ ಸಂದರ್ಭ ಹೊರನಡೆಯಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಇದೆ.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.