ETV Bharat / state

ಗಣರಾಜ್ಯೋತ್ಸವ ಪರೇಡ್ ನಲ್ಲಿ 'ಸ್ವಚ್ಛತಾ ಯೋಧರು' ಈ ಬಾರಿಯ ಹೈಲೈಟ್ - ಮಾಣಿಕ್ ಷಾ ಪೆರೇಡ್ ಮೈದಾನ

ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಚಿಣ್ಣರು, ಯೋಧರು ಸೇರಿದಂತೆ ಇನ್ನಿತರರು ಹೆಜ್ಜೆ ಹಾಕುವುದು ಸಹಜ. ಆದರೆ, ಈ ವರ್ಷ ಗಣರಾಜ್ಯೋತ್ಸವದಲ್ಲಿ ಬಿಬಿಎಂಪಿಯ ಪೌರಕಾರ್ಮಿಕರು ಸಹ ಪಥಸಂಚಲನ ನಡೆಸಲಿದ್ದಾರೆ

Anil Kumar
ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಹೇಳಿಕೆ
author img

By

Published : Jan 24, 2020, 8:11 PM IST

ಬೆಂಗಳೂರು: ಕರ್ನಾಟಕ ರಾಜ್ಯ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸುವ ಈ ಬಾರಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ನಗರದ ಪೌರಕಾರ್ಮಿಕರು ಹೆಜ್ಜೆ ಹಾಕಲಿದ್ದಾರೆ.

ಸ್ವಚ್ಛತಾ ಯೋಧರೆಂದು ಬಿಬಿಎಂಪಿ, ಪೌರಕಾರ್ಮಿಕರ ಒಂದು ತಂಡವನ್ನು ಗುರುತಿಸಿದ್ದು, ತಮ್ಮ ಕೆಲಸ ಕಾರ್ಯದ ಮಹತ್ವವನ್ನು ಪರೇಡ್​​ ಮೂಲಕ ಸಾರಲಿದ್ದಾರೆ. ನಿತ್ಯ ಮುಂಜಾನೆ ಆರು ಗಂಟೆಯಿಂದಲೇ ನಗರದ ಬೀದಿ-ಬೀದಿಯನ್ನು ಗುಡಿಸಿ, ಮನೆಗಳ ಕಸ ಸಂಗ್ರಹಿಸಿ ನಗರ ನೈರ್ಮಲ್ಯಕ್ಕೆ ಕಾರಣರಾಗಿರುವ ಹದಿನೆಂಟು ಸಾವಿರ ಪೌರಕಾರ್ಮಿಕರ ಮಹತ್ವವನ್ನು ಈ ತಂಡ ಪ್ರತಿನಿಧಿಸಲಿದೆ.

ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಹೇಳಿಕೆ

ಇನ್ನು ಈ ಬಗ್ಗೆ ಮಾತನಾಡಿದ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್, ಪೌರ ಕಾರ್ಮಿಕರಿಗೆ ನಮ್ಮ ನಗರವನ್ನು ಸ್ವಚ್ಛವಾಗಿಡುವ ಸಂಪೂರ್ಣ ಜವಾಬ್ದಾರಿ ಇದೆ. ನಗರಕ್ಕೆ ಶೋಭೆ ತಂದು ಕೊಡುವವರು ಪೌರಕಾರ್ಮಿಕರು. ಕೆಲಸದ ಗೌರವ ಘನತೆಯನ್ನು ಕಾಪಾಡುವಲ್ಲಿ ಎಡವಿದ್ದೇವೆ ಎಂದು ಭಾಸವಾಗಿದ್ದರಿಂದ ಅವರನ್ನು ಈ ಪಥಸಂಚಲನದಲ್ಲಿ ತೊಡಗಿಸಿಕೊಂಡಿದ್ದೇವೆ. ಅವರ ಕೆಲಸವನ್ನು ಗುರುತಿಸಿ, ಈ ಮೂಲಕ ಗೌರವ ಕೊಡುತ್ತಿದ್ದೇವೆ ಎಂದರು.

Intro:...

Body:...

Conclusion:...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.