ಬೆಂಗಳೂರು : ಕೊರೊನಾ ವಾರಿಯರ್‌ಗಳಾದ ಪೊಲೀಸರಲ್ಲಿ ಸೋಂಕು ಪತ್ತೆಯಾಗುತ್ತಿರುವ ಕಾರಣ ಸದ್ಯ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಬ್ಬಂದಿಗಳಿಗೆ ಧೈರ್ಯ ತುಂಬಿದರು. ಸಿಬ್ಬಂದಿ ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಧೈರ್ಯದಿಂದ ಕೊರೊನಾ ಜೊತೆ ಜೊತೆಗೆ ಕೆಲಸ ನಿರ್ವಹಣೆ ಮಾಡಬೇಕು. ಪೊಲೀಸರೆಂದರೆ ಧೈರ್ಯವಂತರು ಎಂದರ್ಥ. ಹೀಗಾಗಿ ಪೊಲೀಸರಾಗಿ ನಾವು ಹೆದರೋದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.
ಠಾಣೆ ಸೀಲ್‌ಡೌನ್ ಬಗ್ಗೆ ಗೊಂದಲ ಬೇಡ:
ಸದ್ಯ ಠಾಣೆಯ ಸಿಬ್ಬಂದಿಗಳಲ್ಲಿ ಕೊರೊನಾ ಲಕ್ಷಣ ಹೆಚ್ಚಾಗಿ ಕಂಡುಬರುತ್ತಿವೆ. ಹೀಗಾಗಿ ಕಮೀಷನರ್ ಕಚೇರಿ ಸೇರಿದಂತೆ ಹಲವು ಠಾಣೆಗಳು ಸೀಲ್ ಡೌನ್ ಆಗಿವೆ. ಕೊರೊನಾ ಬಾರದ ಇತರೆ ಸಿಬ್ಬಂದಿಗಳಲ್ಲಿಯೂ ಗೊಂದಲವಿದೆ. ಸದ್ಯ ಸ್ಟೇಷನ್ ಮೂರು ದಿನ ಸೀಲ್ ಡೌನ್ ಆಗಲಿದೆ. ಈಗಾಗಲೇ ಹಲವು ಸ್ಟೇಷನ್‌ಗಳನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. ಹೆದರದೆ ಮೂರು ದಿನ ಎಂದಿನಂತೆ ಕಾರ್ಯನಿರ್ವಹಿಸಿ ಎಂದರು.