ETV Bharat / state

ಕೊರೊನಾ ಸೋಂಕಿಗೆ ಸಿಐಡಿ ಕಚೇರಿ ಸಿಬ್ಬಂದಿ ಬಲಿ!

ಸಿಐಡಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ, ಕೊರೊನಾದಿಂದ ಮೃತಪಟ್ಟಿದ್ದು, ಇತ್ತೀಚೆಗೆ ಬಿಪಿ ಹಾಗೂ ಡಯಾಬಿಟಿಸ್​​ನಿಂದ ಬಳಲುತ್ತಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು‌‌.

CID office staff death from corona infection
ಕೊರೊನಾ ಸೋಂಕಿಗೆ ಸಿಐಡಿ ಕಚೇರಿ ಸಿಬ್ಬಂದಿ ಬಲಿ
author img

By

Published : Jul 13, 2020, 9:05 PM IST

ಬೆಂಗಳೂರು: ಕೊರೊನಾ ಸೋಂಕಿಗೆ‌ ಪೊಲೀಸ್ ಇಲಾಖೆಯ ಮತ್ತೊಬ್ಬ ಸಿಬ್ಬಂದಿ ಬಲಿಯಾಗಿದ್ದಾರೆ. ಹಲವು ವರ್ಷಗಳಿಂದ ಸಿಐಡಿ ಕಚೇರಿಯಲ್ಲಿ ಸೆಂಟ್ರಿಯಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ, ಇತ್ತೀಚೆಗೆ ಬಿಪಿ ಹಾಗೂ ಡಯಾಬಿಟಿಸ್​​ನಿಂದ ಬಳಲುತ್ತಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು‌‌.

ಮುಂಜಾಗ್ರತಾ ಕ್ರಮವಾಗಿ ಕೊರೊನಾ ಸ್ವ್ಯಾಬ್ ಟೆಸ್ಟ್​​ಗೊಳಪಡಿಸಿದಾಗ ಸೋಂಕಿರುವುದು ದೃಢವಾಗಿತ್ತು. ಕ್ವಾರಂಟೈನ್​​ನಲ್ಲಿದ್ದ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇದುವರೆಗೂ ಸಿಐಡಿ ಕಚೇರಿಯಲ್ಲಿ 12 ಸಿಬ್ಬಂದಿಗೆ ಕೊರೊನಾ ವಕ್ಕರಿಸಿದ್ದು, ಆರು ಮಂದಿ ಡಿಸ್ಚಾರ್ಜ್ ಆಗಿದ್ದಾರೆ‌‌. ನಗರ ಪೊಲೀಸ್ ಇಲಾಖೆಯಲ್ಲಿ 550ಕ್ಕಿಂತ ಹೆಚ್ಚು ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.