ಬೆಂಗಳೂರು: ಮಕ್ಕಳ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ರಂಗೋಲಿ ಮೆಟ್ರೋ ಆರ್ಟ್ ಕೇಂದ್ರದ ಬಳಿ ಭಿಕ್ಷಾಟನೆ ಮಾಡುತ್ತಿದ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಯಿತು.
ಸ್ಪರ್ಶ ಟ್ರಸ್ಟ್ ಮತ್ತು ಮಕ್ಕಳ ರಕ್ಷಣಾ ಆಯೋಗ ಆಯೋಜಿಸಿದ ಸ್ಥಳದಲ್ಲೇ ಚಿತ್ರ ಬಿಡಿಸಿ ಕಾರ್ಯಕ್ರಮ
'ಬಣ್ಣದ ಕೈಗಳು' ಎಂಬ ಶೀರ್ಷಿಕೆಯಡಿ ಸ್ಪರ್ಶ ಟ್ರಸ್ಟ್ ಮತ್ತು ಮಕ್ಕಳ ರಕ್ಷಣಾ ಆಯೋಗ ಜಂಟಿಯಾಗಿ ಈ ಸ್ಪರ್ಧೆ ಆಯೋಜಿಸಿದವು. ಸ್ಥಳದಲ್ಲೇ ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಬಿಡಿಸಿದ್ದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಯಿತು.
ಸ್ಪರ್ಶ ಟ್ರಸ್ಟ್, ಬೀದಿಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳನ್ನು ಕರೆತಂದು ಶೈಕ್ಷಣಿಕ ಕಲಿಕೆಗೆ ನೆರವಾಗುತ್ತಿದೆ. ಮಕ್ಕಳೇ ಬಿಡಿಸಿರುವ ಕಲಾಕೃತಿಗಳು ಭಾನುವಾರದವರೆಗೂ ಪ್ರದರ್ಶನಕ್ಕೆ ಇರಿಸಲಾಗುತ್ತಿದೆ. ಈ ಕಲಾಕೃತಿಗಳು ಮಾರಾಟಕ್ಕಿದ್ದು, ಇದರಿಂದ ಬಂದ ಹಣವನ್ನ ಮಕ್ಕಳ ಶೈಕ್ಷಣಿಕ ವೆಚ್ಚಗಳಿಗೆ ಭರಿಸಲಾಗುತ್ತದೆ.