ಬೆಂಗಳೂರು: ವಾಟರ್ ಟ್ಯಾಂಕರ್ ವಾಹನ ಹರಿದ ಪರಿಣಾಮ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ದುರ್ಘಟನೆ ಸರ್ಜಾಪುರ ರಸ್ತೆ ಸೆರಿನಿಟಿ ಲೇಔಟ್ ನ ಶ್ವೇತ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಬಳಿ ನಡೆದಿದೆ. ಪ್ರತಿಷ್ಟ್ ಸಾವಿಗೀಡಾದ ಮಗು.
ನೇಪಾಳ ಮೂಲದ ಜಯಂತಿ-ಕೀಮ್ ರಾಜ್ ದಂಪತಿ ಕಳೆದ ಐದಾರು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾರೆ. ಕೀಮ್ ರಾಜ್ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದರು. ಪಕ್ಕದ ಅಪಾರ್ಟ್ ಮೆಂಟ್ ಮನೆಯವರು ಟ್ಯಾಂಕರ್ನಲ್ಲಿ ನೀರು ತರಿಸಿಕೊಂಡಿದ್ದರು. ನೀರನ್ನು ಅನ್ಲೋಡ್ ಮಾಡಿ ವಾಹನವನ್ನು ರಿವರ್ಸ್ ತೆಗೆಯುವಾಗ ಆಟ ಆಡುತ್ತಿದ್ದ ಮಗುವಿನ ಮೇಲೆ ಹರಿದಿದೆ.
ಚಕ್ರಕ್ಕೆ ಸಿಲುಕಿದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬಂದ ಹೆಚ್.ಎಸ್ ಆರ್.ಲೇಔಟ್ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಚಾಲಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: 'ರಜತ್' ಆರ್ಸಿಬಿ ಸೇರಿದ್ದು ರೋಚಕ.. ಮದುವೆಗೆ ಸಿದ್ಧವಾಗ್ತಿದ್ದ ಪಾಟಿದಾರ್ ದಿಢೀರ್ ತಂಡ ಸೇರಿದ್ಹೇಗೆ!?