ETV Bharat / state

ಒಟ್ಟಾಗಿ ಲಾಕ್ ಡೌನ್ ಪಾಲಿಸೋಣ, ಕೊರೊನಾ ಸರಪಳಿಗೆ ತಡೆಯೊಡ್ಡೋಣ: ಸಿಎಂ ಕರೆ

author img

By

Published : Jul 5, 2020, 2:48 PM IST

ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಎಂ ನಿವಾಸ ಹಾಗೂ ಕಚೇರಿಯಲ್ಲಿ ಇಂದು ಯಾವುದೇ ರೀತಿಯ ಚಟುವಟಿಕೆ ನಡೆಯುತ್ತಿಲ್ಲ. ಅಧಿಕೃತ, ಪೂರ್ವನಿಗದಿತ ಸಭೆಗಳನ್ನೂ ಸಹ ಆಯೋಜಿಸಿಲ್ಲ. ಇಂದು ನಾವೆಲ್ಲರೂ ಒಂದಾಗಿ ಲಾಕ್​ಡೌನ್​ ಪಾಲಿಸೋಣ, ಕೊರೊನಾ ಸರಪಳಿಗೆ ತಡೆಯೊಡ್ಡೋಣವೆಂದು ಸಿಎಂ ಯಡಿಯೂರಪ್ಪ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಪ್ರತಿ ಭಾನುವಾರ ಲಾಕ್ ಡೌನ್​​ ಜಾರಿಗೆ ‌ತರಲಾಗಿದ್ದು, ಅದರಂತೆ ಜುಲೈ ತಿಂಗಳ ಮೊದಲ ಲಾಕ್ ಡೌನ್ ಜಾರಿ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ತಮ್ಮ ನಿವಾಸದಲ್ಲಿಯೇ ಉಳಿದು ಲಾಕ್ ಡೌನ್ ಪಾಲಿಸುತ್ತಿದ್ದಾರೆ.

ಅಧಿಕೃತ ನಿವಾಸ ಕಾವೇರಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂಜಾನೆ ಎಂದಿನಂತೆ ಕಾವೇರಿ ಆವರಣದಲ್ಲೇ ವಾಯುವಿಹಾರ ನಡೆಸಿದರು. ನೆಚ್ಚಿನ ಕರು ಭೀಮ ಹಾಗೂ ಇತ್ತೀಚೆಗೆ ಆಗಮಿಸಿದ ಮತ್ತೊಂದು ಕರುವಿನ ಜೊತೆ ಕೆಲ ಸಮಯ ಕಳೆದರು.

  • ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯಸರ್ಕಾರ ಪ್ರತೀ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು, ಶನಿವಾರ ರಾತ್ರಿ 8ಗಂಟೆಯಿಂದ ಸೋಮವಾರ ಬೆಳಗ್ಗೆ 5ಗಂಟೆವರೆಗೆ ಜಾರಿಯಲ್ಲಿರಲಿದೆ. ನಾವೆಲ್ಲರೂ ಒಂದಾಗಿ ಕೊರೋನಾ ಸೋಂಕಿನ ಸರಪಳಿಗೆ ತಡೆಯೊಡ್ಡೋಣ, ಸುರಕ್ಷತೆ ಪಾಲಿಸೋಣ.

    — B.S. Yediyurappa (@BSYBJP) July 5, 2020 " class="align-text-top noRightClick twitterSection" data=" ">

ಸಿಎಂ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಕುಟುಂಬ ಸದಸ್ಯರ ಜೊತೆ ಕೆಲಹೊತ್ತು ಸಮಯ ಕಳೆದರು. ಇತರೆ ಅತಿಥಿಗಳ ಭೇಟಿಯನ್ನು ಸಿಎಂ ನಿರ್ಬಂಧಿಸಿದ್ದಾರೆ. ರಾಜಕೀಯ ನಾಯಕರನ್ನೂ ಭೇಟಿಯಾಗದಿರಲು ನಿರ್ಧರಿಸಿದ್ದಾರೆ. ಕೊರೊನಾ ತುರ್ತು ವಿಷಯಕ್ಕೆ ಸಂಬಂಧಿಸಿದ ತುರ್ತು ವಿಷಯ ಇದ್ದಲ್ಲಿ ಮಾತ್ರ ಆಗಮಿಸುವಂತೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಎಂ ನಿವಾಸ ಹಾಗೂ ಕಚೇರಿಯಲ್ಲಿ ಇಂದು ಯಾವುದೇ ರೀತಿಯ ಚಟುವಟಿಕೆ ನಡೆಯುತ್ತಿಲ್ಲ, ಅಧಿಕೃತ, ಪೂರ್ವನಿಗದಿತ ಸಭೆಗಳನ್ನೂ ಸಹ ಆಯೋಜಿಸಿಲ್ಲ.

ಲಾಕ್ ಡೌನ್ ಪಾಲಿಸುತ್ತಿರುವ ಸಿಎಂ, ಕೋವಿಡ್-19 ನಿಯಂತ್ರಣ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ ಭಾನುವಾರ ರಾಜ್ಯಾದ್ಯಂತ ಸಂಪೂರ್ಣವಾಗಿ ಲಾಕ್ ಡೌನ್ ಘೋಷಿಸಿದ್ದು ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ ಐದು ಗಂಟೆಯವರೆಗೆ ಜಾರಿಯಲ್ಲಿದೆ ನಾವೆಲ್ಲರೂ ಒಂದಾಗಿ ಕೊರೊನಾ ಸೋಂಕಿನ ಸರಪಳಿಗೆ ತಡೆಯೊಡ್ಡೋಣ, ಸುರಕ್ಷತೆ ಪಾಲಿಸೋಣ ಎಂದು ಟ್ವೀಟ್ ಮೂಲಕ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.