ETV Bharat / state

ಸಿಎಂ ಮನೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಆರೋಪಿಗೆ ಹೈಕೋರ್ಟ್ ಜಾಮೀನು - ಕರ್ನಾಟಕ ಹೈಕೋರ್ಟ್

ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಆರೋಪಿಯೊಬ್ಬರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

high court
ಹೈಕೋರ್ಟ್
author img

By

Published : May 30, 2023, 7:31 PM IST

ಬೆಂಗಳೂರು: ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಎಂದು ಹೇಳಿಕೊಂಡು ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ವಸೂಲಿ ಮಾಡಿದ್ದ ಆರೋಪಿಯೊಬ್ಬರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಆರ್.ಪ್ರದೀಪ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ನ್ಯಾಯಪೀಠ ಪುರಸ್ಕರಿಸಿದ್ದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಪ್ರಕರಣದಲ್ಲಿ ಆರೋಪಿ ಪ್ರದೀಪ್ ಅವರ ಖಾತೆಗೆ ದೂರುದಾರರಿಂದ ಹಣ ಬಂದಿಲ್ಲ. ಇದರ ಬದಲಿಗೆ ಅವರ ಭಾಮೈದುನ ಅರುಣ್ ಕುಮಾರ್ ಎಂಬುವರ ಖಾತೆಗೆ ಹಣ ಕಳುಹಿಸಿದ್ದಾರೆ. ಅಲ್ಲದೇ, ಪ್ರಕರಣದ ಮೂರನೇ ಆರೋಪಿ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ. ಹೀಗಾಗಿ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.

ಷರತ್ತುಗಳು: 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆ ಒದಗಿಸಬೇಕು. ಸಾಕ್ಷ್ಯಗಳ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವ ಬೀರಬಾರದು. ತನಿಖಾಧಿಕಾರಿಗೆ ಕರೆದಲ್ಲಿ ಹಾಜರಾಗಬೇಕು ಎಂಬುದಾಗಿ ಷರತ್ತುಗಳನ್ನು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಹಿನ್ನೆಲೆ ಏನು? ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದ ಆರ್.ಪ್ರದೀಪ್ ಅವರಿಗೆ ಕೆ.ಜಿ.ನಾಗರತ್ನಮ್ಮ ಅವರು ಕುಟುಂಬ ಸ್ನೇಹಿತರಾಗಿದ್ದಾರೆ. ತನ್ನ ಭಾಮೈದುನ ಕೆ.ಹೆಚ್.ಅರುಣ್ ಕುಮಾರ್ ಅವರು ಮುಖ್ಯಮಂತ್ರಿ ಕಚೇರಿಯಲ್ಲಿ ಮುಖ್ಯಮಂತ್ರಿಗೆ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗುವ ಹಂತದಲ್ಲಿದ್ದಾರೆ. ಲಂಚ ಪಡೆದು ಹಲವರಿಗೆ ಉದ್ಯೋಗ ಪಡೆಯಲಯ ನೆರವಾಗಿದ್ದಾರೆ ಎಂದು ನಂಬಿಸಿದ್ದರು. ನಾಗರತ್ನಮ್ಮಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, ಅದಕ್ಕಾಗಿ ಲಂಚ ನೀಡಲು ಬೇಡಿಕೆ ಇಟ್ಟಿದ್ದರು.

ಫೋನ್ ಮೂಲಕ ಸಂಪರ್ಕಿಸಿದ್ದ ಅರುಣ್ ಕುಮಾರ್ ಸಹ ಸರ್ಕಾರಿ ಉದ್ಯೋಗ ಉದ್ಯೋಗದ ಭರವಸೆ ನೀಡಿದ್ದರು. ಇಬ್ಬರನ್ನೂ ನಂಬಿ ನಾಗರತ್ನಮ್ಮ ಅವರು 2020ರ ಜನವರಿ 7 ರಂದು 7,50,000 ರೂಪಾಯಿಯನ್ನು ಅರುಣ್ ಕುಮಾರ್ ಅವರ ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. 2020ರ ಜನವರಿ 9ರಂದು ಅದೇ ಖಾತೆಗೆ ಮತ್ತೆ 5,00,000 ರೂಪಾಯಿ ವರ್ಗಾಯಿಸಿದ್ದರು. ನಂತರ ಜನವರಿ 17ರಂದು ಮತ್ತೆ 2,50,000 ರೂಪಾಯಿ ವರ್ಗಾಯಿಸಿದ್ದರು. ಬಹುದಿನಗಳ ಬಳಿಕ ನಾಗರತ್ನಮ್ಮ ಅವರಿಗೆ ತಮ್ಮ ಉದ್ಯೋಗ ಅರ್ಜಿ ಪರಿಗಣನೆಯಲ್ಲಿದ್ದು, ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಪ್ರದೀಪ್ ಮತ್ತು ಅರುಣ್ ಕುಮಾರ್ ತಿಳಿಸಿದ್ದರು.

ಇದೊಂದು ಹಗರಣ ಎಂದು ತಿಳಿದ ನಾಗರತ್ನಮ್ಮ ಅವರು ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿನ ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಪ್ರದೀಪ್, ಅರುಣ್ ಕುಮಾರ್ ಮತ್ತು ಶೈಲಜಾ ಅವರ ವಿರುದ್ಧ ಐಪಿಸಿ ಸೆಕ್ಷನ್​ಗಳಾದ 406 (ನಂಬಿಕೆ ದ್ರೋಹ), 420 (ವಂಚನೆ) ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಪ್ರದೀಪ್ ಅವರ ಜಾಮೀನು ಅರ್ಜಿಯನ್ನು ದಾವಣಗೆರೆಯ ಸತ್ರ ನ್ಯಾಯಾಲಯ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ಶೀಲ ಶಂಕಿಸಿ ಹೆಂಡತಿ, ಮಗು ಕೊಲೆ: ಆರೋಪಿಗೆ ಜೀವತಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.