ETV Bharat / state

ವಿಧಾನಸೌಧದಲ್ಲಿ ಶೂಟಿಂಗ್​ ನಡೆಸಲು ಟೆಂಡರ್ ಕೊಡಿಸುವುದಾಗಿ ವಂಚಿಸಿದ್ದ ಆರೋಪಿಗಳ ಬಂಧನ - Cheating

ವಿಧಾನಸೌಧದಲ್ಲಿ ಶೂಟಿಂಗ್​ ನಡೆಸಲು ಟೆಂಡರ್ ಕೊಡಿಸುವುದಾಗಿ ವಂಚಿಸಿ ಲಕ್ಷಾಂತರ ರೂ. ಹಣ ಪೀಕಿದ ಒಂದೇ ಕುಟುಂಬದ ಮೂವರು ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೋಸ ಮಾಡಿದವರು
author img

By

Published : Mar 17, 2019, 11:59 AM IST

ಬೆಂಗಳೂರು: ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಟೆಂಡರ್ ಮತ್ತು ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ ಒಂದೇ ಕುಟುಂಬದ ಮೂವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿಯ ರಾಜೇಶ್, ಎಸ್.ಅನುರಾಗ್, ಆರ್.ಸತ್ಯಭಾಮ ಬಂಧಿತರು.ಆರೋಪಿ ರಾಜೇಶ್, ಎಸ್ ಅನುರಾಗ್ ಹಾಗೂ ಆರ್.ಸತ್ಯಭಾಮ ಅವರು ಸೇರಿಕೊಂಡು ವಿಧಾನಸೌಧದಲ್ಲಿ ಫೋಟೋ ಮತ್ತು ವಿಡಿಯೋ ತೆಗೆಯಲು ಟೆಂಡರ್‌ ಕೊಡಿಸುವುದಾಗಿ ನಂಬಿಸಿ ಸುಮಾರು 8.12 ಲಕ್ಷ ರೂ.ಗಳನ್ನು ಪಡೆದುಕೊಂಡು ಯಾವುದೇ ಟೆಂಡರ್ ಕೊಡಿಸದೇ ಮೋಸ ಮಾಡಿದ್ದಾರೆ ಎಂದು ಭಾಸ್ಕರ್ ನಾಯ್ಕರ್ ಎಂಬುವವರು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು ಒಂದೇ ಮನೆಯ ಮೂವರನ್ನು ಬಂಧಿಸಿದ್ದಾರೆ.

ಆರೋಪಿ ರಾಜೇಶ್, ತಾನು ಕೇಂದ್ರ ಸರ್ಕಾರದ ಸ್ಮಾರ್ಟ್​ ಸಿಟಿ ಯೋಜನೆಯಲ್ಲಿ ಚೀಫ್ ಇಂಜಿನಿಯರ್ ಎಂದು ಹೇಳಿಕೊಂಡು ಹಲವಾರು ಜನರಿಗೆ ಕೆಲಸ ಕೊಡಿಸುವುದಾಗಿ, ಟೆಂಡರ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡಿದ್ದ. ಅದೇ ರೀತಿ ಅನುರಾಗ್​ ಸಾರ್ವಜನಿಕರಿಂದ ಮೋಸವಾಗಿ ಪಡೆದ ಹಣದ ಮೂಲಕ 6-ದಿ ಕೂಟ ಎಂಬ ಚಲನಚಿತ್ರ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡಿದ್ದಾಗಿ ಬಾಯ್ಬಿಟ್ಟಿದ್ದಾನೆ.

ಈಗಾಗಲೇ ಇವರುಗಳ ಮನೆ ಮತ್ತು ಕಚೇರಿಗಳನ್ನು ಪರಿಶೀಲಿಸಲಾಗಿದ್ದು, ಆರೋಪಿಗಳು ಹಣವನ್ನು ಎಲ್ಲಾದರೂ ಹೂಡಿಕೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಆರೋಪಿಗಳ ವಿರುದ್ಧ 12ಕ್ಕೂ ಹೆಚ್ಚು ಜನ ಬನಶಂಕರಿ ಠಾಣೆಯಲ್ಲಿ ಮೋಸ ಹೋಗಿರುವುದಾಗಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಬಂಧಿಸುವಲ್ಲಿ ಡಿಸಿಪಿ ಅಣ್ಣಾಮಲೈ, ಇನ್‌ಸ್ಪೆಕ್ಟರ್ ಎಚ್.ಶ್ರೀನಿವಾಸ್ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಪೊಲೀಸ್ ತಂಡಕ್ಕೆ ಉಪ ಪೊಲೀಸ್ ಆಯುಕ್ತರು 10 ಸಾವಿರ ರೂ.ಬಹುಮಾನ ನೀಡಿದ್ದಾರೆ. ಈ ಆರೋಪಿಗಳಿಂದ ಮೋಸಕ್ಕೆ ಒಳಗಾಗಿರುವ ಸಾರ್ವಜನಿಕರು ಬನಶಂಕರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮೊ.ಸಂ.9480801527ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಪೋಟೋ ಹಾಗೂ ವಿಡಿಯೊ ತೆಗೆಯಲು ಟೆಂಡರ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ.ದೋಖಾ

ಬೆಂಗಳೂರು: ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಟೆಂಡರ್ ಮತ್ತು ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ ಒಂದೇ ಮನೆಯ ಮೂವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿಯ ರಾಜೇಶ್,  ಎಸ್.ಅನುರಾಗ್, ಆರ್.ಸತ್ಯಭಾಮ ಬಂಧಿತ ಆರೋಪಿಗಳು.
ಆರೋಪಿ ರಾಜೇಶ್ ಎಸ್ ಅನುರಾಗ್, ಆರ್.ಸತ್ಯಭಾಮ ಅವರು ಸೇರಿಕೊಂಡು ವಿಧಾನಸೌಧದಲ್ಲಿ ಫೋಟೋ ಮತ್ತು ವಿಡಿಯೋ ತೆಗೆಯಲು ಟೆಂಡರ್‌ ಕೊಡಿಸುವುದಾಗಿ ನಂಬಿಸಿ ಸುಮಾರು 8.12ಲಕ್ಷ ರೂ.ಗಳನ್ನು ಪಡೆದುಕೊಂಡು ಯಾವುದೇ ಟೆಂಡರ್ ಕೊಡಿಸದೇ ಮೋಸ ಮಾಡಿರುವುದಾಗಿ ಭಾಸ್ಕರ್ ನಾಯ್ಕರ್ ಎಂಬುದವರು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು ಒಂದೆ ಮನೆಯ ಮೂವರನ್ನು ಬಂಧಿಸಿದ್ದಾರೆ.
ಆರೋಪಿ ರಾಜೇಶ್ ತಾನು ಕೇಂದ್ರ ಸರ್ಕಾರದ ಸ್ಮಾಟಿ ಸಿಟಿ ಯೋಜನೆಯಲ್ಲಿ ಚೀಫ್ ಇಂಜಿನಿಯರ್ ಎಂದು ಹೇಳಿಕೊಂಡು ಹಲವಾರು ಜನರಿಗೆ ಕೆಲಸ ಕೊಡಿಸುವುದಾಗಿ, ಟೆಂಡರ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡಿದ್ದ. ಅದೇ ರೀತಿ ಅನುರಾಗ್ ಎಂಬುವವನು ಸಾರ್ವಜನಿಕರಿಂದ ಮೋಸವಾಗಿ ಪಡೆದ ಹಣದ ಮೂಲಕ 6-ದಿ ಕೂಟ ಎಂಬ ಚಲನಚಿತ್ರ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಈಗಾಗಲೇ ಇವರುಗಳ ಮನೆ ಮತ್ತು ಕಚೇರಿಗಳನ್ನು ಪರಿಶೀಲಿಸಲಾಗಿದ್ದು, ಆರೋಪಿಗಳು ಹಣವನ್ನು ಎಲ್ಲಾದರೂ ಹೂಡಿಕೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಆರೋಪಿಗಳ ವಿರುದ್ಧ 12ಕ್ಕೂ ಹೆಚ್ಚು ಜನ ಬನಶಂಕರಿ ಠಾಣೆಯಲ್ಲಿ ಮೋಸ ಹೋಗಿರುವುದಾಗಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಬಂಧಿಸುವಲ್ಲಿ ಡಿಸಿಪಿ ಅಣ್ಣಾಮಲೈ ಇನ್‌ಸ್ಪೆಕ್ಟರ್ ಎಚ್.ಶ್ರೀನಿವಾಸ್ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ಬಂಧಿಸಿ ಯಶಸ್ವಿಯಾಗಿದ್ದರಿಂದ ಪೊಲೀಸ್ ತಂಡಕ್ಕೆ ಉಪಪೊಲೀಸ್ ಆಯುಕ್ತರು 10 ಸಾವಿರ ರೂ.ಬಹುಮಾನ ನೀಡಿದ್ದಾರೆ. ಈ ಆರೋಪಿಗಳಿಂದ ಮೋಸಕ್ಕೆ ಒಳಗಾಗಿರುವ ಸಾರ್ವಜನಿಕರು ಬನಶಂಕರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮೊ.ಸಂ.9480801527ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.