ಬೆಂಗಳೂರು: ಕೊರೊನಾ ದಿನೆ ದಿನೇ ಹೆಚ್ಚುತ್ತಿದ್ದು ಇದನ್ನು ನಿಯಂತ್ರಿಸುವ ಸಲುವಾಗಿ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಇಲಾಖೆಯ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳ ಕೆಲಸದ ಸಮಯ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆ ಇಂದಿನಿಂದಲೇ ಜಾರಿಯಲಿದ್ದು, ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ಕಾರ್ಯ ನಿರ್ವಹಿಸುತ್ತವೆ.
ಭಾನುವಾರ ಕೆಎಸ್ಆರ್ ಬೆಂಗಳೂರು ಹೊರತು ಪಡಿಸಿ ಇತರ ಕಡೆ ಕಾಯ್ದಿರಿಸುವ ಕೇಂದ್ರಗಳಿಗೆ ರಜೆ ಇರಲಿದೆ. ಬೆಂಗಳೂರಿನಲ್ಲಿ ಟಿಕೆಟ್ ಕಾಯ್ದಿರಿಸುವ ಕೇಂದ್ರವು ಭಾನುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಬೆಂಗಳೂರಿನಲ್ಲಿ ರಾತ್ರಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರಗಳಲ್ಲಿ ಇರುವ ಪಾರ್ಸೆಲ್ ಕಾರ್ಯಾಲಯಗಳು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತವೆ.
ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಯಾವ್ಯಾವ ಕೇಂದ್ರಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು?
- ಕೆಎಸ್ ಆರ್ - ಬೆಂಗಳೂರು
- ಬೆಂಗಳೂರು ದಂಡು
- ಯಶವಂತಪುರ
- ಕೃಷ್ಣರಾಜಪುರ
- ಹೊಸೂರು
- ತುಮಕೂರು
- ಮಂಡ್ಯ
- ಯಲಹಂಕ
- ಕೆಂಗೇರಿ
ಧರ್ಮಪುರಿ, ಸತ್ಯಸಾಯಿ, ಪ್ರಶಾಂತಿ ನಿಲಯಂ ಹಿಂದೂಪುರ ಮತ್ತು ಬಂಗಾರಪೇಟೆಗಳಲ್ಲಿರುವ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳು ವಾರದ ದಿನಗಳಲ್ಲಿ 8 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯ ನಿರ್ವಹಿಸಲಿದ್ದು, ಅವುಗಳ ಕೆಲಸ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.