ETV Bharat / state

ಚಂದ್ರು ಕೊಲೆ ಪ್ರಕರಣ: ಸ್ನೇಹಿತ ಸೈಮನ್ ನೀಡಿದ ದೂರಿನಲ್ಲೇನಿದೆ? - ಚಿಕನ್ ರೋಲ್ ತರಲು ಹೋದಾಗ ಚಂದ್ರ ಕೊಲೆ

ಏಪ್ರಿಲ್ 4ರಂದು ಸೈಮನ್ ರಾಜ್ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಮನೆ ಮುಂದೆ ಚಂದ್ರು ಮತ್ತು ಸೈಮನ್ ರಾಜ್ ಕೇಕ್ ಕಟ್ ಮಾಡಿದ್ದಾರೆ. ಸೈಮನ್​ಗೆ ಚಿಕನ್ ರೋಲ್ ಕೊಡಿಸು ಎಂದು ಕೊಲೆಯಾದ ಚಂದ್ರು ಕೇಳಿದ್ದನಂತೆ. ಚಿಕನ್​ ರೋಲ್​ ತರಲು ಹೋದಾಗ ಬೈಕ್​ಗಳ ನಡುವೆ ಡಿಕ್ಕಿಯಾಗಿದ್ದು, ಆಗ ಗಲಾಟೆ ವಿಕೋಪಕ್ಕೆ ತಿರುಗಿದೆ. ನಂತರ ಚಂದ್ರುವಿನ ಕೊಲೆಯಲ್ಲಿ ಅಂತ್ಯವಾಗಿದೆ.

ಚಂದ್ರು ಕೊಲೆ ಪ್ರಕರಣ
ಚಂದ್ರು ಕೊಲೆ ಪ್ರಕರಣ
author img

By

Published : Apr 6, 2022, 6:36 PM IST

ಬೆಂಗಳೂರು: ಮೊನ್ನೆ ಮಧ್ಯರಾತ್ರಿ ನಡೆದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತನ ಜೊತೆಗಿದ್ದ ಸ್ನೇಹಿತ ಸೈಮನ್ ರಾಜ್ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಸೈಮನ್ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಏಪ್ರಿಲ್ 4 ರಂದು ಸೈಮನ್ ರಾಜ್ ಹುಟ್ಟಹಬ್ಬ ಹಿನ್ನೆಲೆಯಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಮನೆ ಮುಂದೆ ಚಂದ್ರು ಮತ್ತು ಸೈಮನ್ ರಾಜ್ ಕೇಕ್ ಕಟ್ ಮಾಡಿದ್ದಾರೆ.

ಚಿಕನ್ ರೋಲ್ ತರಲು ಹೋದಾಗ ನಡೆದ ಘಟನೆ: ಬಳಿಕ ಸೈಮನ್​ಗೆ ಚಿಕನ್ ರೋಲ್ ಕೊಡಿಸು ಎಂದು ಕೊಲೆಯಾದ ಚಂದ್ರು ಕೇಳಿದ್ದನಂತೆ. ಈ ವೇಳೆ ಚಿಕನ್ ರೋಲ್ ತರಲು ಹೋಂಡಾ ಆಕ್ಟಿವಾ ಬೈಕ್​ನಲ್ಲಿ ಸೈಮನ್ ಮತ್ತು ಚಂದ್ರು ಚಾಮರಾಜಪೇಟೆ ಸುತ್ತಮುತ್ತ ಹುಡುಕಾಡಿದ್ದಾರೆ. ಬಳಿಕ ರಂಜಾನ್ ಹಿನ್ನೆಲೆ ಗೋರಿಪಾಳ್ಯದಲ್ಲಿ ಚಿಕನ್ ರೋಲ್ ಸಿಗುತ್ತೆ ಎಂದು 2.15 ಗಂಟೆಗೆ ಹಳೆಗುಡ್ಡದಹಳ್ಳಿಗೆ ತೆರಳಿದ್ದಾರೆ.

ಸೈಮನ್ ದೂರಿನ ಆಧಾರದ ಮೇಲೆ ಎಫ್​ಐಆರ್ ದಾಖಲಿಸಿಕೊಂಡ ಪೊಲೀಸರು

ವಿಕೋಪಕ್ಕೆ ತಿರುಗಿದ ಮಾತು: ಅಲ್ಲಿನ 9ನೇ ಮುಖ್ಯರಸ್ತೆಯಲ್ಲಿ ಹೋಗುವಾಗ ಸೈಮನ್ ಹಾಗೂ ಚಂದ್ರು ತೆರಳುತ್ತಿದ್ದ ಬೈಕ್​ಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ. ಆಗ ಚಂದ್ರು ಹಾಗೂ ಸೈಮನ್ ಡಿಕ್ಕಿ ಹೊಡೆದವರನ್ನು ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಶಾಹಿದ್ ಎಂಬಾತ ಅದನ್ನ ಕೇಳಲು ನೀವ್ಯಾರು, ನಾನು ಇದೇ ಏರಿಯಾದವನು, ಏನ್ ಮಾಡಿಕೊಳ್ತೀಯಾ ಎಂದು ಜನರನ್ನು ಸೇರಿಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಾತು ವಿಕೋಪಕ್ಕೆ ತಿರುಗಿ ಚಂದ್ರು ಹಾಗೂ ಸೈಮನ್ ಮೇಲೆ ಶಾಹೀದ್ ಹಾಗೂ ಇತರರು ಏಕಾಏಕಿ ಚಾಕು ಬೀಸಿದ್ದಾರೆ. ಘಟನೆಯಲ್ಲಿ ಸೈಮನ್ ಬಚಾವಾದ್ರೆ ಚಂದ್ರುವಿನ ತೊಡೆಗೆ ಚಾಕುವಿನಿಂದ ಶಾಹಿದ್ ಇರಿದಿದ್ದಾನೆ. ಚೂರಿ ಇರಿದ ರಭಸಕ್ಕೆ ಚಂದ್ರು ತೊಡೆಯಿಂದ ತೀವ್ರ ರಕ್ತಸ್ರಾವ ಆಗೋದನ್ನ ನೋಡಿ ಶಾಹಿದ್ ಅಂಡ್ ಗ್ಯಾಂಗ್ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣ : ಸುಳ್ಳು‌ ಸುದ್ದಿಗಳಿಗೆ‌ ಕಿವಿಗೂಡಬೇಡಿ, ಫ್ಯಾಕ್ಟ್ ಚೆಕ್‌ ಮಾಡಿದ‌ ಪೊಲೀಸರು

ಬಳಿಕ ಚಂದ್ರುನನ್ನು ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸೈಮನ್ ರಾಜ್ ರವಾನಿಸಿದ್ದಾನೆ. ಆದರೆ ಮುಂಜಾನೆ 4 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಚಂದ್ರು ಮೃತಪಟ್ಟಿದ್ದಾನೆಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆ ಚಂದ್ರು ಕೊಲೆ ಮಾಡಿರುವ ಶಾಹಿದ್ ಹಾಗೂ ಇತರರ ಮೇಲೆ ಕ್ರಮ ಕೈಗೊಳ್ಳುವಂತೆ ಸೈಮನ್ ರಾಜ್ ದೂರು ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.