ETV Bharat / state

ಜುಲೈ 30 ಹಾಗೂ 31 ರಂದು ಸಿಇಟಿ ಪರೀಕ್ಷೆ: ಡಿಸಿಎಂ ಅಶ್ವತ್ಥ ನಾರಾಯಣ ಸ್ಪಷ್ಟನೆ - Ashwathth Narayan

ಹೊರ ರಾಜ್ಯದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಪೋಷಕರಿಗೆ ಕ್ವಾರಂಟೈನ್​​​ನಿಂದ ವಿನಾಯಿತಿ ನೀಡಲಾಗಿದೆ. ಬೇರೆ ರಾಜ್ಯ, ದೇಶದಿಂದ ಬರುವ ಪೋಷಕರಿಗೆ ಕೋವಿಡ್ ಟೆಸ್ಟ್ ಮಾಡುವುದಿಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದರು.

CET exams on July 30 and 31
ಡಿಸಿಎಂ ಅಶ್ವತ್ಥ್ ನಾರಾಯಣ್ ಸುದ್ದಿಗೋಷ್ಠಿ
author img

By

Published : Jul 21, 2020, 6:00 PM IST

ಬೆಂಗಳೂರು: ನಿಗದಿಯಂತೆ ಜುಲೈ 30 ಹಾಗೂ 31 ರಂದು ಸಿಇಟಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ತಿಳಿಸಿದರು.
ವಿಧಾನಸೌಧಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿಇಟಿ 2020 ಪರೀಕ್ಷೆಯನ್ನು ಜುಲೈ 30 ಮತ್ತು 31ಕ್ಕೆ ನಿಗದಿ ಪ್ರಕಾರ ನಡೆಸಲಾಗುತ್ತದೆ. ಮೊದಲ ದಿನ ಬಯೋಲಜಿ ಮತ್ತು ಗಣಿತ ಪರೀಕ್ಷೆ ನಡೆಯಲಿದೆ. ಎರಡನೇ ದಿನ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಪರೀಕ್ಷೆ ನಡೆಯಲಿದೆ ಎಂದರು.

ರಾಜ್ಯಾದ್ಯಂತ ಒಟ್ಟು 127 ಸ್ಥಳಗಳಲ್ಲಿ ಒಟ್ಟು 497 ಪರೀಕ್ಷೆ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದ್ದು, ಒಟ್ಟು 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದಾರೆ. ಪ್ರತಿ‌ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಎಸ್ಒಪಿ ಪ್ರಕಾರ ಪರೀಕ್ಷೆ ನಡೆಯಲಿದೆ. ಹೊರ ರಾಜ್ಯದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಪೋಷಕರಿಗೆ ಕ್ವಾರಂಟೈನ್​​​ನಿಂದ ವಿನಾಯಿತಿ ನೀಡಲಾಗಿದೆ. ಬೇರೆ ರಾಜ್ಯ, ದೇಶದಿಂದ ಬರುವ ಪೋಷಕರಿಗೆ ಕೋವಿಡ್ ಟೆಸ್ಟ್ ಮಾಡುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಶೀತ, ನೆಗಡಿ, ಕೆಮ್ಮು ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಪಾಸಿಟಿವ್ ಇದ್ದವರಿಗೆ ಪ್ರತ್ಯೇಕವಾಗಿ ಪರೀಕ್ಷಾ ಕೇಂದ್ರ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತದೆ. ಈಗಾಗಲೇ ಪೂರ್ವಭಾವಿ ಸಭೆ ನಡೆಸಿದ್ದು, ಎಲ್ಲಾ ತಯಾರಿಗಳನ್ನು ಮಾಡಿದ್ದೇವೆ. ಎಸ್​​ಎಸ್​ಎಲ್‌ಸಿ ಪರೀಕ್ಷೆಯಲ್ಲಿ ಅನುಸರಿಸಿದ ಎಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.

ಡಿಸಿಎಂ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ

ಒಟ್ಟು 1,891 ಹೊರ ರಾಜ್ಯದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 30,000 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿದ್ದಾರೆ. ಹೊರ ರಾಜ್ಯಗಳಿಗೆ ಬಂದವರಿಗೆ ಗಡಿ ಭಾಗದಲ್ಲಿನ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಸಲಾಗುತ್ತದೆ. 30 ಹೊರ ದೇಶದ ವಿದ್ಯಾರ್ಥಿಗಳಿದ್ದು, ಅವರಿಗೆ ಮುಂಚೆಯೇ ಪರೀಕ್ಷೆಯ ಮಾಹಿತಿ ನೀಡಿದ್ದೇವೆ ಎಂದರು.

ಬೆಂಗಳೂರಲ್ಲಿ ಒಟ್ಟು 83 ಪರೀಕ್ಷಾ ಕೇಂದ್ರಗಳಿದ್ದು, 40,200 ವಿದ್ಯಾರ್ಥಿಗಳು ಬೆಂಗಳೂರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುಮಾರು 1,30,000 ವಿದ್ಯಾರ್ಥಿಗಳು ಹಾಲ್ ಟಿಕೆಟ್ ಆನ್‌ಲೈನ್ ಮೂಲಕ ಡೌನ್ ಲೋಡ್ ಮಾಡಿದ್ದಾರೆ. ಸಿಇಟಿ ಪರೀಕ್ಷೆಯಾದ 20 ರಿಂದ 25 ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದರು. ಕೌನ್ಸಿಲಿಂಗ್, ವೆರಿಫಿಕೇಷನ್​​ಗಳನ್ನು ಆನ್‌ಲೈನ್​ನಲ್ಲಿ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಸಿಇಟಿ ಕೇಂದ್ರಗಳಿಗೆ ಹೋಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಪಿಜಿ ಸಿಇಟಿ ಮತ್ತು ಡಿಪ್ಲೋಮಾ ಸಿಇಟಿ ಪರೀಕ್ಷೆಯ ‌ಮುಂದೂಡಿಕೆ ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಪಿಜಿ ಸಿಇಟಿ ಆಗಸ್ಟ್​​ 8 ಮತ್ತು 9 ರಂದು ನಿಗದಿಯಾಗಿತ್ತು. ಅದೇ ರೀತಿ ಡಿಪ್ಲೋಮಾ ಸಿಇಟಿ ಆಗಸ್ಟ್​​​ 9 ನಿಗದಿಯಾಗಿತ್ತು. ಅವುಗಳನ್ನು ಮುಂದೂಡಲಾಗಿದೆ. ಅವರ ಅಂತಿಮ‌ ವರ್ಷದ ಪರೀಕ್ಷೆ ಆಗಿಲ್ಲ. ಅಂತಿಮ ವರ್ಷದ ಪರೀಕ್ಷೆ ನಡೆಸಿದ ಬಳಿಕ ದಿನಾಂಕ ಫಿಕ್ಸ್ ಮಾಡುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.