ETV Bharat / state

'ಯುವ ಜನತೆಯನ್ನು ಪ್ರಧಾನಿ ನರೇಂದ್ರ ಮೋದಿ ಮರಳು ಮಾಡಿದ್ದಾರೆ' - ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ್

ಬಿಜೆಪಿ ಹಾಗೂ ಆರ್​​​ಎಸ್​​​ಎಸ್​​​ ನಾಯಕರ ಯೋಚನೆಯನ್ನು ಜನರಿಗೆ ತಿಳಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಯುವ ಜನತೆಯನ್ನು ಪ್ರಧಾನಿ ನರೇಂದ್ರ ಮೋದಿ ಮರಳು ಮಾಡಿದ್ದಾರೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

Ceremony of KPCC President dk shivakumar
ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭ
author img

By

Published : Jul 2, 2020, 3:47 PM IST

ಬೆಂಗಳೂರು: ಬಿಜೆಪಿ ಸರ್ಕಾರ ಸುಳ್ಳು ಹೇಳುವುದನ್ನು ತನ್ನ ಬಂಡವಾಳವಾಗಿಸಿಕೊಂಡಿದೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜನರನ್ನು ದಿಕ್ಕುತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಹಾಗೂ ಆರ್​​​ಎಸ್​​​ಎಸ್​​​ ನಾಯಕರ ಯೋಚನೆಯನ್ನು ಇಂದು ಕಾಂಗ್ರೆಸ್ ಪಕ್ಷ ಜನರಿಗೆ ತಿಳಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಯುವ ಜನತೆಯನ್ನು ಮೋದಿ ಮರಳು ಮಾಡಿದ್ದಾರೆ. ಇವರಿಗೆ ನಿಜವಾದ ಮಾಹಿತಿ ತಲುಪಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಬೇಕು ಎಂದರು.

20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆಯ ಹಿಂದೆ ನಿಜವಾದ ಕಾಳಜಿ ಇಲ್ಲ. ಇದರಲ್ಲಿ 1.6 ಲಕ್ಷ ಕೋಟಿ ಮಾತ್ರ ಹೊಸ ಘೋಷಣೆಯಾಗಿದೆ. ಉಳಿದದ್ದು ಈಗಾಗಲೇ ಬಜೆಟ್​​​ನಲ್ಲಿ ಘೋಷಿಸಿರುವ ಯೋಜನೆಗಳಾಗಿವೆ. ಈ ರೀತಿ ಮೋದಿ ಜನರಿಗೆ ಮಂಕುಬೂದಿ ಎರಚುವ ವಿವರವನ್ನು ನಾವು ನೀಡಬೇಕಿದೆ ಎಂದರು.

ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಅತ್ಯಂತ ದೊಡ್ಡ ಜವಾಬ್ದಾರಿಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಲ್ಲೇ ಪಕ್ಷದ ರಾಷ್ಟ್ರೀಯ ನಾಯಕರು ನೀಡಿದ ಅತಿ ದೊಡ್ಡ ಗೌರವ ಇದು. ವೇದಿಕೆ ಮೇಲೆ ಸಮಾರಂಭ ನಡೆಯುತ್ತಿರುವ ಸಂದರ್ಭದಲ್ಲೇ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಇಟ್ಟಿರುವ ನಿರೀಕ್ಷೆಯನ್ನು ಡಿ.ಕೆ. ಶಿವಕುಮಾರ್ ಉಳಿಸಿಕೊಳ್ಳಲಿ ಎಂದು ಆಶಿಸಿದರು.

ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭ

ಕಾಂಗ್ರೆಸ್ ಪಕ್ಷದ ಮುಂದೆ ಅನೇಕ ಸವಾಲುಗಳಿವೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಕಟ್ಟುವುದೇನಮ್ಮ ಗುರಿ. ಡಿ.ಕೆ.ಶಿವಕುಮಾರ್ ಹೆಗಲಿಗೆ ಹೆಗಲು ಕೊಟ್ಟು ಸಾಗಬೇಕು. ಎಲ್ಲರನ್ನ ಜೊತೆಯಲ್ಲಿ ಕರೆದುಕೊಂಡು ಹೋಗುವುದರ‌ ಜೊತೆಗೆ ಪಕ್ಷದ ತತ್ವ, ಸಿದ್ಧಾಂತ ಬಿಡಬಾರದು. ಮೋದಿ, ಶಾ ಇಬ್ಬರೂ ಸೇರಿ ಇಡೀ ದೇಶವನ್ನ ಹಾಳು ಮಾಡಲು ಹೊರಟಿದ್ದಾರೆ. ಹಾಗಾಗಿಯೇ ಕೆಟ್ಟ ಕಾರ್ಯಕ್ರಮಗಳನ್ನ ಜಾರಿಗೆ ತಂದಿದ್ದಾರೆ. ಇಡೀ ದೇಶದಲ್ಲಿ‌ ಕೊರೊನಾ ಹೆಚ್ಚಲು ಮೋದಿ, ಶಾ ಕಾರಣ. ಅವರು ತಪ್ಪು ಮಾಡಿದ್ದರೂ ಯಾವುದನ್ನೂ ಎಂದೂ ಒಪ್ಪುವುದಿಲ್ಲ. ವಿರೋಧ ಪಕ್ಷದವರ ಮಾತನ್ನ ಕೇಳುವುದಿಲ್ಲ. ಸುಳ್ಳು ಹೇಳಿಕೊಂಡು ಬಿಜೆಪಿ ಪಕ್ಷ ಬೆಳೆಸುತ್ತಿದ್ದಾರೆ ಎಂದರು.

ಇದನ್ನ ನಾವು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಮೋದಿ, ಶಾರನ್ನ ವೈಭವಿಕರಿಸಲಾಗುತ್ತಿದೆ. ಇದರ‌ ಹಿಂದೆ ಆರ್​​​ಎಸ್​​​ಎಸ್​​​ ಇದೆ. ಎಲ್ಲಿಯವರೆಗೂ ಆರ್​​​ಎಸ್​​​ಎಸ್​​​ನ್ನು ಬಗ್ಗು ಬಡಿಯುವುದಿಲ್ಲವೋ ಅಲ್ಲಿಯವರೆಗೂ ಯುವಕರಿಗೆ ಭವಿಷ್ಯವಿಲ್ಲ. ಈಗಂತೂ ಯುವಕರು ಮೋದಿ ತಪ್ಪು ಮಾಡಿದರೂ ಹೊಗಳುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಅವರನ್ನ ತೆಗಳುವುದನ್ನ ಕೆಲಸ ಮಾಡಿಕೊಂಡಿದ್ದಾರೆ. ಮೋದಿ, ಶಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪ್ರಿಯಾಂಕ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ ನಡೆದಿದೆ. ಮೊದಲು ದ್ವೇಷದ ರಾಜಕಾರಣ ವಿರುದ್ಧ ಬೆನ್ನತ್ತಬೇಕು ಎಂದು ಕರೆಕೊಟ್ಟರು.

ಇನ್ನು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ್ ಮಾತನಾಡಿ, ಡಿ.ಕೆ. ಶಿವಕುಮಾರ್ ರಾಜ್ಯದ ಪ್ರಶ್ನಾತೀತ ನಾಯಕ ಹಾಗೂ ಶಾರ್ಪ್​ ಟ್ರಬಲ್ ಶೂಟರ್ ಆಗಿದ್ದಾರೆ. ಇವರ ಜೊತೆ ಮೂವರು ಸಮರ್ಥ ನಾಯಕರು ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೊಂದು ಅಭೂತಪೂರ್ವ ಹಾಗೂ ವೈಶಿಷ್ಟಪೂರ್ಣ ಕಾರ್ಯಕ್ರಮವಾಗಿದೆ ಎಂದರು.

ಮಾಹಿತಿ ತಂತ್ರಜ್ಞಾನದಲ್ಲಿ ಇಡೀ ದೇಶದಲ್ಲಿ ಕರ್ನಾಟಕಕ್ಕೆ ಅತ್ಯುತ್ತಮ ಹೆಸರಿದೆ. ಜ್ಞಾನದ ರಾಜಧಾನಿ ರಾಜ್ಯವಾಗಿದ್ದು ಇಲ್ಲಿ ಇಂಥದ್ದೊಂದು ಮಹತ್ವದ ಕಾರ್ಯಕ್ರಮ ನಡೆದಿದೆ. 20 ಲಕ್ಷಕ್ಕೂ ಹೆಚ್ಚು ಮಂದಿ ಡಿಜಿಟಲ್ ವೇದಿಕೆ ಅಡಿಗೆ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಅಭಿಲಾಷೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ ಎಂದರು.

ಪಕ್ಷಕ್ಕೆ ಅತ್ಯಂತ ಸುದೀರ್ಘ ಇತಿಹಾಸವಿದೆ. ಕಾಂಗ್ರೆಸ್ ನಾಯಕರು ನೀಡಿದ ಕೊಡುಗೆಗಳನ್ನು ಇಂದು ಜನರಿಗೆ ಪರಿಚಯಿಸುವ ಅನಿವಾರ್ಯತೆ ಇದೆ. ಪಕ್ಷವನ್ನು ಪ್ರಾಥಮಿಕ ಹಂತದಿಂದ ಪುನಶ್ಚೇತನ ಮಾಡಬೇಕಾಗಿದೆ. ಪಕ್ಷ ಸಂಪೂರ್ಣ ಹಾಗೂ ಶಾಶ್ವತ ಪುನಶ್ಚೇತನಕ್ಕೆ ಒಳಗಾಗಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ನಂತರದ ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಹೊಂದಿದ್ದ ಗೌರವವನ್ನು ಮತ್ತೆ ಪಡೆಯಬೇಕಾಗಿದೆ ಎಂದರು.

ಪಕ್ಷ ಸಂಘಟನೆಗೆ ಇದು ಸೂಕ್ತವಾದ ಹಾಗೂ ಪರಿಪಕ್ವ ಕಾಲವಾಗಿದೆ. ಜಿಡಿಪಿ ಕುಸಿದಿದೆ. ಕೋವಿಡ್ ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. 90 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಮೇಕ್ ಇನ್ ಇಂಡಿಯಾ ವಿಫಲವಾಗಿದೆ. ದೇಶ ದುಸ್ಥಿತಿಯಲ್ಲಿರುವ ಈ ಸಂದರ್ಭ ದೇಶದ 138 ಕೋಟಿ ಮಂದಿ ನಮ್ಮ ಪಕ್ಷದತ್ತ ನೋಡುತ್ತಿದ್ದಾರೆ ಎಂದರು.

ಜನ ಹಸಿವಿನಿಂದ ಬಳಲುತ್ತಿರುವ ಈ ಸಂದರ್ಭದಲ್ಲಿ ಡಿಕೆಶಿ ತಮ್ಮ ನಾಯಕತ್ವದಿಂದ ಇಂತಹ ಸಮಸ್ಯೆಯನ್ನು ನಿವಾರಿಸುವ ಯತ್ನ ಮಾಡಲಿ. ಪಕ್ಷದಿಂದ ಮುನಿಸಿಕೊಂಡು ದೂರವಾಗಿರುವವರನ್ನು ವಾಪಸ್ ಕರೆತರುವ ಕಾರ್ಯ ಆಗಬೇಕಿದೆ. ಬೇರುಮಟ್ಟದಿಂದ ಪಕ್ಷದ ಸಂಘಟನೆ ಮಾಡಿ ಶಾಶ್ವತವಾಗಿ ಪುನಶ್ಚೇತನ ಕಲಿಸುವ ಕಾರ್ಯವಾಗಬೇಕು ಎಂದರು.

ಬಲಿಷ್ಠ ಕಾಂಗ್ರೆಸ್ ಕಟ್ಟುವ ಕಾರ್ಯ ಪ್ರಾರಂಭವಾಗಲಿ. ವರ್ಗ ಹಾಗೂ ಜಾತಿರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಜೊತೆಗೆ ಜನರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಕಾರ್ಯ ಆಗಬೇಕಿದೆ. ನಮ್ಮಿಂದ ದೂರವಾಗಿರುವ ನಾಯಕರು ಹಾಗೂ ಸಮುದಾಯದ ನಾಗರಿಕರನ್ನು ಮರಳಿ ಕರೆತರುವ ಜವಾಬ್ದಾರಿ ಶಿವಕುಮಾರ್ ಮೇಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.