ಯಲಹಂಕ : ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ( ಜಿಕೆವಿಕೆ) ಅವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ - 2021ಕ್ಕೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ(shobha karandlaje ) ಭೇಟಿ ನೀಡಿದರು ಇದೇ ವೇಳೆ ಅವರು ಎತ್ತಿನಬಂಡಿ ಓಡಿಸುವ ಮೂಲಕ ಎಲ್ಲರ ಗಮನ ಸೆಳೆದರು.
ನವೆಂಬರ್ 11 ರಿಂದ ನಡೆಯುತ್ತಿರುವ ಕೃಷಿ ಮೇಳ 4 ದಿನಗಳ ಕಾಲ ನಡೆಯಲಿದ್ದು, 3 ನೇ ದಿನವಾದ ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು, ಭೇಟಿ ಸಮಯದಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದರು, ಮೇಳಕ್ಕೆ ಬಂದಿದ್ದ ರೈತರೂಂದಿಗೆ ಮಾತನಾಡಿದರು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ರಾಜೇಂದ್ರಪ್ರಸಾದ್ ಸಚಿವರಿಗೆ ಸಾಥ್ ನೀಡಿದರು.
ಈ ಕೃಷಿ ಮೇಳದಲ್ಲಿ ಕೃಷಿ ವಿಚಾರಗಳಿಗೆ ಸಂಬಂಧಪಟ್ಟ ವಿವಿಧ ತಂತ್ರಜ್ಞಾನಗಳ ಪ್ರದರ್ಶನ, ಬೀಜದ ತಳಿಗಳ ಮಾಹಿತಿ-ಮಾರಾಟ, ಕೃಷಿ ಪದ್ಧತಿಗಳ ಪ್ರದರ್ಶನ, ಸಸ್ಯ ಪ್ರಭೇದಗಳ ಮಾರಾಟ ಹಾಗೂ ಇತರ ಹಲವಾರು ಮಳಿಗೆಗಳು ಕೃಷಿ ಆಸಕ್ತರಿಗೆ, ರೈತರ ಮಾಹಿತಿಗಾಗಿ ತೆರೆದಿಡುತ್ತದೆ.
ಇನ್ನು ಕಳೆದ ಮೂರು ದಿನಗಳಿಂದಲೂ ಮಳೆ ಸುರಿಯುತ್ತಿದ್ದರೂ ಸುಮಾರ 3 ಲಕ್ಷ ಜನ ಕೃಷಿ ಮೇಳಕ್ಕೆ ಆಗಮಿಸಿದ್ದಾರೆ. ನಾಳೆ ಕೊನೆಯ ದಿನವಾಗಿದ್ದು, ರಜೆ ಇರುವುದರಿಂದ ಹೆಚ್ಚಿನ ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ.
ಇದನ್ನು ಓದಿ:ಕೃಷಿಮೇಳ-2021: ಜಿಕೆವಿಕೆ ಆವರಣದಲ್ಲಿ ಹಬ್ಬ..ಕೊರೊನಾ ನಿಯಮ ಮಾಯ