ETV Bharat / state

ದೆಹಲಿ ಅಹಿತಕರ ಘಟನೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ: ಎಸ್.ಆರ್.ಪಾಟೀಲ್

author img

By

Published : Jan 27, 2021, 12:44 AM IST

ಕಳೆದ ಎರಡು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ರೈತರು ಸತತ ಹೋರಾಟ ನಡೆಸುತ್ತಿದ್ದರು. ಆದರೆ ನರೇಂದ್ರ ಮೋದಿ ಅವರು ಸೌಜನ್ಯಕ್ಕಾದರೂ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅನ್ನದಾತರನ್ನು ಮಾತನಾಡಿಸುವ ಯತ್ನ ಮಾಡಲಿಲ್ಲ. ಇದೀಗ ಮಣ್ಣಿನ ಮಕ್ಕಳ ಸಹನೆ ಕಟ್ಟೆಯೊಡೆದಿದ್ದು, ಅಹಿತಕರ ಘಟನೆ ಹೊಣೆಯನ್ನು ಕೇಂದ್ರ ಬಿಜೆಪಿ ಸರ್ಕಾರವೇ ಹೊರಬೇಕಾಗುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಹೇಳಿದ್ದಾರೆ.

central-government-is-directly-responsible-for-unfortunate-incident-in-delhi-sr-patil
ಎಸ್.ಆರ್.ಪಾಟೀಲ್

ಬೆಂಗಳೂರು: ದೆಹಲಿ ರೈತರ ಟ್ರ್ಯಾಕ್ಟರ್ ಪರೇಡ್ ಸಂದರ್ಭ ನಡೆದ ಅಹಿತಕರ ಘಟನೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಆಗ್ರಹಿಸಿದ್ದಾರೆ.

  • @narendramodi ರವರು ಸೌಜನ್ಯಕ್ಕಾದರೂ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅನ್ನದಾತರನ್ನು ಮಾತನಾಡಿಸುವ ಯತ್ನ ಮಾಡಲಿಲ್ಲ. ಇದೀಗ ಮಣ್ಣಿನ ಮಕ್ಕಳ ಸಹನೆ ಕಟ್ಟೆಯೊಡೆದಿದ್ದು, ಇವತ್ತು ನಡೆದ ಅಹಿತಕರ ಘಟನೆ ಹೊಣೆಯನ್ನು ಕೇಂದ್ರ ಬಿಜೆಪಿ ಸರ್ಕಾರವೇ ಹೊರಬೇಕಾಗುತ್ತದೆ. 2/2 #TractorMarch

    — S R Patil (@srpatilbagalkot) January 26, 2021 " class="align-text-top noRightClick twitterSection" data=" ">

@narendramodi ರವರು ಸೌಜನ್ಯಕ್ಕಾದರೂ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅನ್ನದಾತರನ್ನು ಮಾತನಾಡಿಸುವ ಯತ್ನ ಮಾಡಲಿಲ್ಲ. ಇದೀಗ ಮಣ್ಣಿನ ಮಕ್ಕಳ ಸಹನೆ ಕಟ್ಟೆಯೊಡೆದಿದ್ದು, ಇವತ್ತು ನಡೆದ ಅಹಿತಕರ ಘಟನೆ ಹೊಣೆಯನ್ನು ಕೇಂದ್ರ ಬಿಜೆಪಿ ಸರ್ಕಾರವೇ ಹೊರಬೇಕಾಗುತ್ತದೆ. 2/2 #TractorMarch

— S R Patil (@srpatilbagalkot) January 26, 2021

ಟ್ವೀಟ್ ಮಾಡಿರುವ ಅವರು, ದೆಹಲಿಯಲ್ಲಿನ ರೈತರ ಟ್ರ್ಯಾಕ್ಟರ್ ಪರೇಡ್‌ಗೆ ಸಂಬಂಧಿಸಿದಂತೆ ನಡೆದ ಅಹಿತಕರ ಘಟನೆಯ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ವಹಿಸಿಕೊಳ್ಳಬೇಕಾಗುತ್ತದೆ. ಕಳೆದ ಎರಡು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ರೈತರು ಸತತ ಹೋರಾಟ ನಡೆಸುತ್ತಿದ್ದರು. ಆದರೆ ನರೇಂದ್ರ ಮೋದಿ ಅವರು ಸೌಜನ್ಯಕ್ಕಾದರೂ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅನ್ನದಾತರನ್ನು ಮಾತನಾಡಿಸುವ ಯತ್ನ ಮಾಡಲಿಲ್ಲ. ಇದೀಗ ಮಣ್ಣಿನ ಮಕ್ಕಳ ಸಹನೆ ಕಟ್ಟೆಯೊಡೆದಿದ್ದು, ಅಹಿತಕರ ಘಟನೆ ಹೊಣೆಯನ್ನು ಕೇಂದ್ರ ಬಿಜೆಪಿ ಸರ್ಕಾರವೇ ಹೊರಬೇಕಾಗುತ್ತದೆ ಎಂದಿದ್ದಾರೆ.

ಕೃಷಿ ಕಾಯ್ದೆಗಳು ರೈತರಿಗೆ ಮರಣಶಾಸನವಾಗಿವೆ. ಇದನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಮೇಲೆ ಲಾಠಿ ಚಾರ್ಜ್ ಮಾಡಿ, ಆಶ್ರುವಾಯ ಸಿಡಿಸಿ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ದೇಶಕ್ಕೆ ಬೇಕಾದ ಆಹಾರವನ್ನು ಉತ್ಪಾದಿಸಿ ಕೊಡುತ್ತಿರುವ ಅನ್ನದಾತ ಮತ್ತು ಆತನ ಕುಟುಂಬ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿದ್ದಾನೆ. ನಾನು ರೈತನ ಮಗ, ಸ್ವತಃ ನಾನು ರೈತ. ಅನ್ನದಾತನ ಮೇಲಿನ ನಡೆಯುತ್ತಿರುವ ದೌರ್ಜನ್ಯದಿಂದ ನನ್ನ ಮನಸ್ಸಿಗೆ ಘಾಷಿಯಾಗಿದೆ. ಇಂತಹ ಸಂದರ್ಭದಲ್ಲಿ ಗಣರಾಜ್ಯೋತ್ಸವ ನಿಮಿತ್ತ ರಾಜ್ಯಪಾಲರು ಚಹಾ ಕೂಟ ಆಯೋಜಿಸಿ, ನನ್ನನ್ನು ಆಮಂತ್ರಿಸಿದ್ದಾರೆ. ಆದರೆ ಅನ್ನದಾತ ಸಂಕಷ್ಟ ಪರಿಸ್ಥಿಯಲ್ಲಿರುವಾಗ ಚಹಾ ಕೂಟದಲ್ಲಿ ಭಾಗವಹಿಸಲು ನನ್ನ ಮನಸ್ಸು ಒಪ್ಪದು. ರೈತ ಹೋರಾಟಕ್ಕೆ ಬೆಂಬಲಿಸಿ ನಾನು ರಾಜ್ಯಪಾಲರು ಕರೆದಿರುವ ಚಹಾ ಕೂಟಕ್ಕೆ ಹೋಗದಿರಲು ನಿರ್ಧಾರ ಕೈಗೊಂಡೆ ಎಂದಿದ್ದಾರೆ.

ಬೆಂಗಳೂರು: ದೆಹಲಿ ರೈತರ ಟ್ರ್ಯಾಕ್ಟರ್ ಪರೇಡ್ ಸಂದರ್ಭ ನಡೆದ ಅಹಿತಕರ ಘಟನೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಆಗ್ರಹಿಸಿದ್ದಾರೆ.

  • @narendramodi ರವರು ಸೌಜನ್ಯಕ್ಕಾದರೂ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅನ್ನದಾತರನ್ನು ಮಾತನಾಡಿಸುವ ಯತ್ನ ಮಾಡಲಿಲ್ಲ. ಇದೀಗ ಮಣ್ಣಿನ ಮಕ್ಕಳ ಸಹನೆ ಕಟ್ಟೆಯೊಡೆದಿದ್ದು, ಇವತ್ತು ನಡೆದ ಅಹಿತಕರ ಘಟನೆ ಹೊಣೆಯನ್ನು ಕೇಂದ್ರ ಬಿಜೆಪಿ ಸರ್ಕಾರವೇ ಹೊರಬೇಕಾಗುತ್ತದೆ. 2/2 #TractorMarch

    — S R Patil (@srpatilbagalkot) January 26, 2021 " class="align-text-top noRightClick twitterSection" data=" ">

ಟ್ವೀಟ್ ಮಾಡಿರುವ ಅವರು, ದೆಹಲಿಯಲ್ಲಿನ ರೈತರ ಟ್ರ್ಯಾಕ್ಟರ್ ಪರೇಡ್‌ಗೆ ಸಂಬಂಧಿಸಿದಂತೆ ನಡೆದ ಅಹಿತಕರ ಘಟನೆಯ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ವಹಿಸಿಕೊಳ್ಳಬೇಕಾಗುತ್ತದೆ. ಕಳೆದ ಎರಡು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ರೈತರು ಸತತ ಹೋರಾಟ ನಡೆಸುತ್ತಿದ್ದರು. ಆದರೆ ನರೇಂದ್ರ ಮೋದಿ ಅವರು ಸೌಜನ್ಯಕ್ಕಾದರೂ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅನ್ನದಾತರನ್ನು ಮಾತನಾಡಿಸುವ ಯತ್ನ ಮಾಡಲಿಲ್ಲ. ಇದೀಗ ಮಣ್ಣಿನ ಮಕ್ಕಳ ಸಹನೆ ಕಟ್ಟೆಯೊಡೆದಿದ್ದು, ಅಹಿತಕರ ಘಟನೆ ಹೊಣೆಯನ್ನು ಕೇಂದ್ರ ಬಿಜೆಪಿ ಸರ್ಕಾರವೇ ಹೊರಬೇಕಾಗುತ್ತದೆ ಎಂದಿದ್ದಾರೆ.

ಕೃಷಿ ಕಾಯ್ದೆಗಳು ರೈತರಿಗೆ ಮರಣಶಾಸನವಾಗಿವೆ. ಇದನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಮೇಲೆ ಲಾಠಿ ಚಾರ್ಜ್ ಮಾಡಿ, ಆಶ್ರುವಾಯ ಸಿಡಿಸಿ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ದೇಶಕ್ಕೆ ಬೇಕಾದ ಆಹಾರವನ್ನು ಉತ್ಪಾದಿಸಿ ಕೊಡುತ್ತಿರುವ ಅನ್ನದಾತ ಮತ್ತು ಆತನ ಕುಟುಂಬ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿದ್ದಾನೆ. ನಾನು ರೈತನ ಮಗ, ಸ್ವತಃ ನಾನು ರೈತ. ಅನ್ನದಾತನ ಮೇಲಿನ ನಡೆಯುತ್ತಿರುವ ದೌರ್ಜನ್ಯದಿಂದ ನನ್ನ ಮನಸ್ಸಿಗೆ ಘಾಷಿಯಾಗಿದೆ. ಇಂತಹ ಸಂದರ್ಭದಲ್ಲಿ ಗಣರಾಜ್ಯೋತ್ಸವ ನಿಮಿತ್ತ ರಾಜ್ಯಪಾಲರು ಚಹಾ ಕೂಟ ಆಯೋಜಿಸಿ, ನನ್ನನ್ನು ಆಮಂತ್ರಿಸಿದ್ದಾರೆ. ಆದರೆ ಅನ್ನದಾತ ಸಂಕಷ್ಟ ಪರಿಸ್ಥಿಯಲ್ಲಿರುವಾಗ ಚಹಾ ಕೂಟದಲ್ಲಿ ಭಾಗವಹಿಸಲು ನನ್ನ ಮನಸ್ಸು ಒಪ್ಪದು. ರೈತ ಹೋರಾಟಕ್ಕೆ ಬೆಂಬಲಿಸಿ ನಾನು ರಾಜ್ಯಪಾಲರು ಕರೆದಿರುವ ಚಹಾ ಕೂಟಕ್ಕೆ ಹೋಗದಿರಲು ನಿರ್ಧಾರ ಕೈಗೊಂಡೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.