ಬೆಂಗಳೂರು: ಕೊರೊನಾ ಸೋಂಕಿತರ ಅಂತ್ಯಕ್ರಿಯೆಯ ಬಳಿಕ ಸ್ಮಶಾನದ ಸಿಬ್ಬಂದಿ ನಡೆದುಕೊಳ್ಳುವ ರೀತಿ ನೋಡಿ ಜೆ.ಸಿ. ನಗರದ ವಾರ್ಡ್ ನಂಬರ್ 62 ಬಳಿ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಸ್ಮಶಾನದಲ್ಲಿ ಸೋಂಕಿತರ ಮೃತದೇಹವನ್ನ ಮಣ್ಣು ಮಾಡುತ್ತಿದ್ದಾರೆ. ಹೀಗಾಗಿ ಅಲ್ಲಿನ ಅಕ್ಕಪಕ್ಕದವರು ಆಕ್ರೋಶ ವ್ಯಕ್ತಪಡಿಸಿ ನಿನ್ನೆಯಿಂದ ಕೊರೊನಾ ಸೋಂಕಿತರ ಮೃತದೇಹಗಳು ಸ್ಮಶಾನಕ್ಕೆ ತರಲಾಗುತ್ತಿದೆ. ಸದ್ಯ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ, ಪಿಪಿಇ ಕಿಟ್ ಹಾಗೆ ಬಿಸಾಕ್ತಾರೆ. ಅವು ಗಾಳಿಯಲ್ಲಿ ಹಾರಿಕೊಂಡು ಬರ್ತಿವೆ. ಮಕ್ಕಳು, ವಯಸ್ಸಾದ ಹಿರಿಯರು ಇಲ್ಲಿದ್ದಾರೆ. ಹಾಗೆ ಸ್ಮಶಾನದಲ್ಲಿ ಕೆಲಸ ಮಾಡುವವರು ಯಾವುದೇ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್, ಕಿಟ್ ಧರಿಸದೇ ಎಲ್ಲೆಡೆ ಓಡಾಡ್ತಾರೆ. ಕೇಳಿದರೆ ದೇವರಿದ್ದಾರೆ ಅಂತಾರೆ ಎಂದು ಜನ ಕಿಡಿಕಾರಿದ್ದಾರೆ.
ಸದ್ಯ ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜನತೆ ಮನವಿ ಮಾಡಿದ್ದಾರೆ.