ETV Bharat / state

ಗುರುನಾನಕ್​​ ಭವನದ ವಿಶೇಷ ಕೋರ್ಟ್ ಹಾಲ್‌​ಗೆ 'ಸಿಡಿ'ದ ಯುವತಿ ಹಾಜರು - Ramesh jarkiholi CD case

ವಸಂತನಗರದ ಗುರುನಾನಕ್​ ಭವನದಲ್ಲಿರುವ ವಿಶೇಷ ಕೋರ್ಟ್​​ ಹಾಲ್​ನಲ್ಲಿ ಎಸಿಎಂಎಂ ನ್ಯಾಯಾಧೀಶರು ಸಿಡಿ ಸಂತ್ರಸ್ತ ಯುವತಿಯ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.

CD scandal
CD scandal
author img

By

Published : Mar 30, 2021, 2:50 PM IST

Updated : Mar 30, 2021, 6:42 PM IST

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಯುವತಿ ಕೊನೆಗೂ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ‌ ಮುಂದೆ ಹಾಜರಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ‌. ಕೋವಿಡ್​ ಹಿನ್ನೆಲೆಯಲ್ಲಿ ವಸಂತನಗರದ ಗುರುನಾನಕ್​​ ಭವನದಲ್ಲಿ ವಿಶೇಷ ನ್ಯಾಯಾಲಯ ನಿರ್ಮಾಣ ಮಾಡಲಾಗಿತ್ತು. ಇಲ್ಲಿಯೇ ನ್ಯಾಯಾಧೀಶರು ಯುವತಿಯ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ. ಈ ವೇಳೆ ನ್ಯಾಯಾಧೀಶರ ಜತೆ ಮಹಿಳಾ ಟೈಪಿಸ್ಟ್​ ಮಾತ್ರ ಉಪಸ್ಥಿತರಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸಿಆರ್‌ಪಿಸಿ ಸೆಕ್ಷನ್​​ 164ರಡಿ ಹೇಳಿಕೆಯನ್ನು ಪಡೆಯಲಾಗುತ್ತಿದೆ ಎಂದು ತಿಳಿದು ಬಂದಿದೆ.

ಗುರುನಾನಕ್​​ ಭವನದ ವಿಶೇಷ ಕೋರ್ಟ್ ಹಾಲ್‌​ಗೆ 'ಸಿಡಿ'ದ ಯುವತಿ ಹಾಜರು

ಹೇಳಿಕೆ ಬಳಿಕ ಯುವತಿ SIT ವಶಕ್ಕೆ

ಎಸ್ಐಟಿ ತನಿಖಾಧಿಕಾರಿಗಳು ಕೋರ್ಟ್​ಗೆ ಆಗಮಿಸಿದ್ದು, ಹೇಳಿಕೆ ಪ್ರಕ್ರಿಯೆಯ ಬಳಿಕ ಯುವತಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ‌. ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಬರುವ ಸಾಧ್ಯತೆಯೂ ಇದೆ. ಆ ನಂತರ ಕೃತ್ಯ ನಡೆದ ಸ್ಥಳಕ್ಕೆ ಹೋಗಿ ಮಹಜರು ಮಾಡಲಿದ್ದಾರೆ.

ವಕೀಲರು ಹೇಳಿದ್ದೇನು?

ಈ ಸಂಬಂಧ ಯುವತಿ ಪರ ವಕೀಲ ಜಗದೀಶ್​ ಮಾಹಿತಿ ನೀಡಿದ್ದು, 164 ನಡಿ ಸ್ಟೇಟ್ ಮೆಂಟ್ ಮುಗಿದಿದೆ. ಯುವತಿಯ ವಾಯ್ಸ್ ಸ್ಯಾಂಪಲ್ ಪಡೆಯಲಾಗುತ್ತದೆ. ಯುವತಿಯನ್ನ ಬಂಧಿಸುವ ಬಗ್ಗೆ ಮಾಹಿತಿಯಿಲ್ಲ. ನಾವು ಯುವತಿಯನ್ನ ಎಸ್​ಐಟಿ ಗೆ ಹ್ಯಾಂಡ್ ಓವರ್ ಮಾಡಿಲ್ಲ ಎಂದಿದ್ದಾರೆ.

ಎಸ್​ಐಟಿ ಯು ಹೇಳಿಕೆ ಪಡೆಯಬೇಕೆಂದು ಮನವಿ ಮಾಡಿದ್ರು. ಯುವತಿಯನ್ನ ಪೊಲೀಸರು ವಶಕ್ಕೆ ಪಡೆಯುವುದಕ್ಕೆ ಆಗುವುದಿಲ್ಲ. ಕೇವಲ ಕಬ್ಬನ್ ಪಾರ್ಕ್ ದೂರಿನನ್ವಯ ಮಾತ್ರ 161 ಸ್ಟೇಟ್ ಮೆಂಟ್​ನ್ನು ಎಸ್ಐಟಿ ಪಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

Last Updated : Mar 30, 2021, 6:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.