ಬೆಂಗಳೂರು: ಆರ್ಎಸ್ಎಸ್ ಮುಖಂಡನ ಸೋಗಿನಲ್ಲಿ ಅಮಾಯಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಸಂಬಂಧ ಬಂಧನಕ್ಕೆ ಒಳಗಾಗಿರುವ ಯುವರಾಜ್ಗೆ ಸೇರಿದ ಸುಮಾರು 18ಕ್ಕಿಂತ ಹೆಚ್ಚು ಆಸ್ತಿಗಳ ಮಾಹಿತಿ ಹಾಗೂ ದಾಖಲಾತಿಗಳ ಬಗ್ಗೆ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ವರದಿ ಸಲ್ಲಿಸಿದ್ದಾರೆ.
ದಿನೇ ದಿನೆ ವಂಚಕ ಯುವರಾಜ್ ವಿರುದ್ಧ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಕ್ರಮವಾಗಿ ಸಂಪಾದನೆ ಎನ್ನಲಾಗುವ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿರುವ ತನಿಖಾಧಿಕಾರಿಗಳು ಜಪ್ತಿ ಪ್ರಕ್ರಿಯೆಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಸದ್ಯಕ್ಕೆ 60ಕ್ಕೂ ಹೆಚ್ಚು ಕೋಟಿಯ ಸ್ಥಿರ ಮತ್ತು ಚರಾಸ್ಥಿ ಕೇಸ್ನಲ್ಲಿ ಅಟ್ಯಾಚ್ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇನ್ನೂ ಆಸ್ತಿಯ ಮೌಲ್ಯಮಾಪನ ಸಂಪೂರ್ಣವಾಗಿ ಆಗಿಲ್ಲ ಎನ್ನಲಾಗಿದೆ. ಬೆಂಗಳೂರಿನಲ್ಲಿ ಯುವರಾಜ್ ಹೆಸರಿನಲ್ಲಿರುವ ನಿವೇಶನಗಳು, ಪತ್ನಿ ಪ್ರೇಮಾ ಹೆಸರಿನಲ್ಲಿ ಮಂಡ್ಯದಲ್ಲಿರುವ ಜಮೀನು, ಐಷಾರಾಮಿ ಕಾರುಗಳು (ಮರ್ಸಿಡೆಸ್ ಬೆಂಜ್, ರೇಂಜ್ ರೋವರ್ ಜಪ್ತಿ) ಇನ್ನು ಬೇರೆ - ಬೇರೆ ಆಸ್ತಿಪಾಸ್ತಿಯನ್ನು ಅಟ್ಯಾಚ್ ಮಾಡಲಾಗಿದೆ.. ಆಸ್ತಿಗಳ ಮಾಹಿತಿ ಮತ್ತು ದಾಖಲಾತಿಗಳನ್ನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. ಇದರಂತೆ ಕೇಸ್ ಇತ್ಯರ್ಥ ಆಗುವವರೆಗೂ ಆಸ್ತಿ ಮಾರುವ ಅಧಿಕಾರ ಯುವರಾಜ್ಗೆ ಇರುವುದಿಲ್ಲ. ಆಸ್ತಿ - ಜಪ್ತಿ ಮಾಡಿ ವಂಚನೆಗೆ ಒಳಗಾದವರಿಗೆ ಕೋರ್ಟ್ ಮೂಲಕ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:'ಲಸಿಕೆಗೂ ಮುನ್ನ ವಿಮೆ ನೀಡಿ' - ಆರೋಗ್ಯ ಕಾರ್ಯಕರ್ತರ ಒತ್ತಾಯ